ಹೊಸ ಲುಕ್‌ನಲ್ಲಿ ರೆಡಿಯಾಯ್ತು ಗುಜರಿ ಸೇರಿದ್ದ ಕಾಂಟೆಸ್ಸಾ ಕಾರು

ಬಿಎಂಡಬ್ಲ್ಯು, ಬೆಂಝ್ ಹಾಗೂ ಆಡಿ ಕಾರುಗಳು ಇಂದು ಭಾರತದ ಅತ್ಯಂತ ಜನಪ್ರಿಯ ಐಷಾರಾಮಿ ಕಾರುಗಳಾಗಿವೆ. ಇದಕ್ಕೂ ಮೊದಲು ಹಿಂದೂಸ್ತಾನ್ ಹಾಗೂ ಮಾರುತಿ ಕಂಪನಿಯ ಕಾರುಗಳು ಜನರ ಮೊದಲ ಆಯ್ಕೆಯ ಕಾರುಗಳಾಗಿದ್ದವು. ಇದರ ಜೊತೆಗೆ ಹಿಂದೂಸ್ತಾನ್ ಕಾಂಟೆಸ್ಸಾ ಸಹ ಶ್ರೀಮಂತರ ನೆಚ್ಚಿನ ಕಾರ್ ಆಗಿತ್ತು.

ಹೊಸ ಲುಕ್‌ನಲ್ಲಿ ರೆಡಿಯಾಯ್ತು ಗುಜರಿ ಸೇರಿದ್ದ ಕಾಂಟೆಸ್ಸಾ ಕಾರು

ತನ್ನ ಬಾಡಿ ಹಾಗೂ ಎಂಜಿನ್ ಸಾಮರ್ಥ್ಯದಿಂದಾಗಿ ಈ ಸೆಡಾನ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಅವಧಿಯವರೆಗೆ ಮಾರಾಟವಾಯಿತು. ನಂತರ ಹಲವಾರು ಕಾರಣಗಳಿಗಾಗಿ ಈ ಕಾರ್ ಅನ್ನು ಸ್ಥಗಿತಗೊಳಿಸಲಾಯಿತು. ಕೆಲವು ಕಾಂಟೆಸ್ಸಾ ಕಾರುಗಳು ಈಗಲೂ ಉತ್ತಮ ಸ್ಥಿತಿಯಲ್ಲಿದ್ದರೆ, ಇನ್ನು ಕೆಲವು ಕಾರುಗಳು ತುಕ್ಕು ಹಿಡಿದು ಗುಜರಿ ಸೇರಿವೆ.

ಹೊಸ ಲುಕ್‌ನಲ್ಲಿ ರೆಡಿಯಾಯ್ತು ಗುಜರಿ ಸೇರಿದ್ದ ಕಾಂಟೆಸ್ಸಾ ಕಾರು

ಗುಜರಿ ಸೇರಿದ್ದ ಕಾಂಟೆಸ್ಸಾ ಕಾರ್ ಅನ್ನು ಖಾಸಗಿ ಕಂಪನಿಯೊಂದು ನವೀಕರಿಸಿ ಹೊಸ ಲುಕ್ ನೀಡಿದೆ. ಅಂದ ಹಾಗೆ ಈ ಕಾರ್ ಅನ್ನು ಮಾಡ್‌ಸ್ಟರ್ಎಂಬ ತಮಿಳುನಾಡು ಮೂಲದ ಕಂಪನಿಯು ಕಸ್ಟಮೈಸ್ ಮಾಡಿದೆ. ಈ ಕಂಪನಿ ಚೆನ್ನೈನ ಸೈದಾಪೇಟೆಯಲ್ಲಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹೊಸ ಲುಕ್‌ನಲ್ಲಿ ರೆಡಿಯಾಯ್ತು ಗುಜರಿ ಸೇರಿದ್ದ ಕಾಂಟೆಸ್ಸಾ ಕಾರು

ಮಾಡ್‌ಸ್ಟರ್ ತನ್ನ ಗ್ಯಾರೇಜ್‌ನಲ್ಲಿ ತುಕ್ಕು ಹಿಡಿದು ನಿಂತಿದ್ದ ಹಿಂದೂಸ್ತಾನ್‌ ಕಾಂಟೆಸ್ಸಾ ಕಾರಿಗೆ ಹೊಸ ಲುಕ್ ನೀಡಲು ನಿರ್ಧರಿಸಿತ್ತು. ಈ ಕಾರಿನ ಡೋರ್‌ಗಳು ಹಾಗೂ ಬಾನೆಟ್‌ಗಳು ಸಂಪೂರ್ಣವಾಗಿ ತುಕ್ಕು ಹಿಡಿದಿದ್ದವು.

ಹೊಸ ಲುಕ್‌ನಲ್ಲಿ ರೆಡಿಯಾಯ್ತು ಗುಜರಿ ಸೇರಿದ್ದ ಕಾಂಟೆಸ್ಸಾ ಕಾರು

ಆದರೂ ಮಾಡ್‌ಸ್ಟರ್ ಕಂಪನಿಯು ಈ ಕಾರಿಗೆ ಹೊಸ ಲುಕ್ ನೀಡಿದೆ. ಕಂಪನಿಯು ಈ ಕಾರಿನ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಅನೇಕ ಭಾಗಗಳಿಗೆ ತುಕ್ಕು ಹಿಡಿದಿದ್ದರಿಂದ ಅವುಗಳನ್ನು ತೆಗೆದುಹಾಕಲಾಯಿತು. ಅದರಂತೆ ಈ ಕಾರಿನ ವ್ಹೀಲ್, ಬಾನೆಟ್ ಹಾಗೂ ಡೋರ್‌ಗಳನ್ನು ತೆಗೆದು ಹಾಕಲಾಯಿತು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಹೊಸ ಲುಕ್‌ನಲ್ಲಿ ರೆಡಿಯಾಯ್ತು ಗುಜರಿ ಸೇರಿದ್ದ ಕಾಂಟೆಸ್ಸಾ ಕಾರು

ಇದರಲ್ಲಿದ್ದ ವ್ಹೀಲ್ ತೆಗೆದುಹಾಕಿ ಬಿಎಂಡಬ್ಲ್ಯು 5 ಸೀರಿಸ್ ಕಾರುಗಳಲ್ಲಿ ಬಳಸುವ 17 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಲಾಗಿದೆ. ನಂತರ ಹೊಸ ಡೋರ್, ಬಾನೆಟ್ ಹಾಗೂ ಫೆಂಡರ್‌ಗಳನ್ನು ಅಳವಡಿಸಲಾಗಿದೆ.

ಹೊಸ ಲುಕ್‌ನಲ್ಲಿ ರೆಡಿಯಾಯ್ತು ಗುಜರಿ ಸೇರಿದ್ದ ಕಾಂಟೆಸ್ಸಾ ಕಾರು

ಸುದೀರ್ಘ ಅವಧಿಯವರೆಗೆ ಸಸ್ಪೆಂಷನ್‌ಗಳನ್ನು ಬಳಸದ ಕಾರಣಕ್ಕೆ ಈ ಕಾರಿನಲ್ಲಿದ್ದ ಕೆಲವು ಮೆಕಾನಿಕಲ್ ಅಂಶಗಳು ಸಂಪೂರ್ಣವಾಗಿ ಹಾಳಾಗಿದ್ದವು. ಮಾಡ್‌ಸ್ಟರ್ ಕಂಪನಿಯು ಇವುಗಳನ್ನು ತೆಗೆದುಹಾಕಿ, ಹೊಸ ಮೆಕಾನಿಕಲ್ ಅಂಶಗಳನ್ನು ಅಳವಡಿಸಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಹೊಸ ಲುಕ್‌ನಲ್ಲಿ ರೆಡಿಯಾಯ್ತು ಗುಜರಿ ಸೇರಿದ್ದ ಕಾಂಟೆಸ್ಸಾ ಕಾರು

ಈ ಕಾರಿಗೆ ಹೊಸ ರೂಪ ನೀಡುವ ಮೊದಲು ಕಾರಿನ ರೇಖಾಚಿತ್ರವನ್ನು ರಚಿಸಲಾಯಿತು. ನಂತರ ಕಂಪನಿಯು ಕಾರ್ ಅನ್ನು ಮಾಡಿಫೈಗೊಳಿಸಲು ಮುಂದಾಯಿತು. ಕಾರಿನಲ್ಲಿದ್ದ ರಂಧ್ರಗಳನ್ನು ಸರಿಪಡಿಸಲು 400ಕ್ಕೂ ಹೆಚ್ಚು ಗಂಟೆಗಳನ್ನು ತೆಗೆದುಕೊಳ್ಳಲಾಗಿದೆ.

ನಂತರ ಪ್ರತಿಯೊಂದು ಭಾಗಗಳನ್ನು ಮುತುವರ್ಜಿ ವಹಿಸಿ ಮಾಡಿಫೈ ಮಾಡಲಾಗಿದೆ. ಕಾರಿನ ಹೊರಭಾಗವನ್ನು ಮಾತ್ರವಲ್ಲದೆ ಇಂಟಿರಿಯರ್ ಅನ್ನು ಸಹ ಬದಲಿಸಲಾಗಿದೆ. ಬದಲಾವಣೆಗಳ ನಂತರ ಈ ಕಾರು ಆಕರ್ಷಕವಾಗಿ ಕಾಣುತ್ತಿದೆ. ಈ ಕಾರಿನಲ್ಲಿರುವ ಹೆಡ್‌ಲೈಟ್‌ಗಳು ಕಾರಿಗೆ ವಿಭಿನ್ನ ಲುಕ್ ನೀಡುತ್ತವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಹೊಸ ಲುಕ್‌ನಲ್ಲಿ ರೆಡಿಯಾಯ್ತು ಗುಜರಿ ಸೇರಿದ್ದ ಕಾಂಟೆಸ್ಸಾ ಕಾರು

ಮಾಡಿಫೈಗೊಂಡ ನಂತರ ಹಿಂದೂಸ್ತಾನ್ ಕಾಂಟೆಸ್ಸಾ ಕಾರು ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರಗಳಲ್ಲಿರುವ ಕಾರುಗಳಂತೆ ಕಾಣುತ್ತದೆ. ಈ ಲುಕ್ ನೀಡಲು ಈ ಕಾರಿಗೆ ಪೋರ್ಷೆ ಕಾರುಗಳಲ್ಲಿರುವಂತಹ ಮಿಡ್‌ನೈಟ್ ಬ್ಲ್ಯಾಕ್ ಬಣ್ಣವನ್ನು ನೀಡಲಾಗಿದೆ. ಕಾರಿನ ಅಲಾಯ್ ವ್ಹೀಲ್‌ಗಳಿಗೆ ಸ್ಮೋಗ್ ಬಣ್ಣವನ್ನು ನೀಡಲಾಗಿದೆ.

Most Read Articles

Kannada
English summary
Hindustan Contessa Classic restoration video modified in Tamilnadu. Read in Kannada.
Story first published: Tuesday, June 9, 2020, 10:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X