ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಸೂಪರ್ ಕಾರು ಖರೀದಿಸಬೇಕೆಂಬುದು ಹಲವು ಯುವಕರ ಕನಸಾಗಿರುತ್ತದೆ. ಆದರೆ ಸೂಪರ್‍‍ಕಾರುಗಳು ಕೈಗೆಟುಕುವ ದರದಲ್ಲಿ ಲಭಿಸುವುದಿಲ್ಲ. ಇದರಿಂದಾಗಿ ಹಲವು ಜನರ ಕನಸು ಕನಸಾಗಿಯೇ ಉಳಿಯುತ್ತದೆ.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಇದರಿಂದ ಹಲವಾರು ಜನರು ಸೂಪರ್‍‍ಕಾರಿನ ಮಾದರಿಯಲ್ಲಿ ತಮ್ಮ ಸಾಮಾನ್ಯ ಕಾರನ್ನು ಮಾಡಿಫೈ ಮಾಡುತ್ತಾರೆ. ಆದರೆ ಕೇರಳ ಮೂಲದ ಯುವಕನೊಬ್ಬ ಹೊಸದಾಗಿ ಕಾರನ್ನು ತಯಾರಿಸಿ ಫೋಕ್ಸ್‌ವ್ಯಾಗನ್ ಬೀಟಲ್ ಹೊಂದುವ ಕನಸ್ಸನ್ನು ನನಸು ಮಾಡಿಕೊಂಡಿದ್ದಾನೆ. ಅದು ಹೇಗೆಂದರೆ ತಾನೇ ಸ್ವತಃ ದುಬಾರಿ ಕಾರನ್ನು ನಿರ್ಮಿಸಿದ್ದಾನೆ. ದುಬಾರಿ ಫೋಕ್ಸ್‌ವ್ಯಾಗನ್ ಬೀಟಲ್ ಕಾರನ್ನು ತಯಾರಿಸಿದ್ದಾನೆ.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಕಾರು ಅಭಿಮಾನಿಯಾದ ರಾಕೇಶ್ ಬಾಬು ಅವರು ತಮ್ಮ ಮನೆಯಲ್ಲಿ ಫೋಕ್ಸ್‌ವ್ಯಾಗನ್ ಬೀಟಲ್ ಮಾದರಿಯ ಕಾರನ್ನು ಸುಂದರವಾಗಿ ತಯಾರಿಸಿದ್ದಾರೆ. ಕೇರಳದ ಚೆರ್ತಲಾದ ನಿವಾಸಿಯಾದ ರಾಕೇಶ್ ಅವರು ಅದ್ಬುತವಾಗಿ ಕಾರ್ ಅನ್ನು ನಿರ್ಮಿಸಿದ್ದಾರೆ.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಕಾರು ಸರಳ ಲ್ಯಾಡರ್ ಚಾಸಿಸ್ ಅನ್ನು ಹೊಂದಿದೆ ಮತ್ತು ಎಂಜಿನ್ ಅನ್ನು ವಾಹನದ ಹಿಂಭಾಗದಲ್ಲಿ ಜೋಡಿಸಲಾಗಿದೆ. ಈ ಮಾಡಿಫೈ ಮಾಡಲಾದ ಕಾರಿನಲ್ಲಿ ಸುಜುಕಿ ಸಮುರಾಯ್ ಬೈಕಿನ ಎರಡು ಸ್ಪೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಕಾರು 30 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಈ ಎಂಜಿನ್ ಕಾರಿನ ಹಿಂದಿನ ಚಕ್ರಗಳಿಗೆ ಪವರ್ ಅನ್ನು ನೀಡುತ್ತದೆ. ಈ ಕಾರು ಚಾಲನೆ ಮಾಡಲು ಹೆಚ್ಚು ಖುಷಿಯನ್ನು ನೀಡುತ್ತದೆ. ಈ ಕಾರಿಗೆ ಅದೇ ಬೈಕಿನ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಅಲ್ಲದೇ ರಾಕೇಶ್ ಬಾಬು ಅವರು ಅವರು ರಿವರ್ಸ್ ಗೇರ್ ಅನ್ನು ಕೂಡ ಸೇರಿಸಿದ್ದಾರೆ. ಈ ಕಾರನ್ನು ಸೆಲ್ಫ್ ಸ್ಟಾರ್ಟಿಂಗ್ ಸಿಸ್ಟಂ ಅಥವಾ ಕಿಕ್ ಸ್ಟಾರ್ಟ್ ಮೂಲಕ ಸ್ಟಾರ್ಟ್ ಮಾಡಬಹುದಾಗಿದೆ.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಇದು ಎರಡು ಸೀಟಿನ ಕಾರು ಆಗಿದೆ. ಮೆಕ್ಯಾನಿಕ್ ಕೆಲಸ ಮಾಡುವ ರಾಕೇಶ್ ಬಾಬು ಅವರು ಫೋಕ್ಸ್‌ವ್ಯಾಗನ್ ಬೀಟಲ್ ಮೂಲ ಮಾದರಿಯನ್ನು ನೇರವಾಗಿ ನೋಡಿಲ್ಲ. ಆದರೆ ಅವರು ಅಂತರ್ಜಾಲದಲ್ಲಿ ಕಾರಿನ ಚಿತ್ರಗಳನ್ನು ನೋಡಿ ತನ್ನ ಕಲ್ಪನೆಗಳ ಮೂಲಕ ವಾಹನವನ್ನು ತಯಾರಿಸಿದ್ದಾರೆ.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಇವರು ತಯಾರಸಿರುವ ಕಾರು ಮೂಲ ಫೋಕ್ಸ್‌ವ್ಯಾಗನ್ ಬೀಟಲ್ ಕಾರಿನ ರೀತಿಯಲ್ಲೇ ಇದೆ. ಫೋಕ್ಸ್‌ವ್ಯಾಗನ್ ಬೀಟಲ್ ಕಾರನ್ನು ನೋಡಿರದ ಅನೇಕರು ಇದೇ ಬೀಟಲ್ ಕಾರು ಎಂದು ಅಂದುಕೊಳ್ಳುವ ರೀತಿಯಲ್ಲಿದೆ.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ವಾಹನದ ಬಾಡಿಯನ್ನು ಮೆಟಲ್ ಶೀಟ್‍‍ಗಳ ಮೂಲಕ ಕೈಯಿಂದಲೇ ತಯಾರಿಸಲಾಗಿದೆ. ಈ ಕಾರಿಗೆ ಆಟೋರಿಕ್ಷಾಗಳ ಟಯರ್‍ ಅನ್ನು ಅಳವಡಿಸಿದ್ದಾರೆ. ವಿಂಡ್‌ಶೀಲ್ಡ್ ಗಾಗಿ ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್‌ ಅನ್ನು ಬಳಸಿದ್ದಾರೆ.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಈ ಕಾರಿನಲ್ಲಿ ಹೆಡ್‍‍ಲ್ಯಾಂಪ್‍ ಮತ್ತು ಪ್ರೊಜೆಕ್ಟರ್‍‍ಗಳನ್ನು ಅಳವಡಿಸಲಾಗಿದೆ. ಈ ಕಾರನ್ನು ಸಂಪೂರ್ಣವಾಗಿ ತಯಾರಿಸಲು 3 ತಿಂಗಳ ಕಾಲ ಪರಿಶ್ರಮ ಪಟ್ಟಿದ್ದಾರೆ. ಇದು ಬೀಟಲ್ ಕಾರಿನಂತೆ ಕಾಣಲು ಈ ಕಾರಿನ ಮೂಲ ಮಾದರಿಯ ರೀತಿ ಹಳದಿ ಬಣ್ಣವನ್ನು ನೀಡಿದ್ದಾರೆ.

ಟಯ್ರ್‍‍ಗಳಿಗೆ ಕೆಂಪು ಮತ್ತು ಬಿಳಿ ಬಣ್ಣವನ್ನು ನೀಡಿದ್ದಾರೆ. ಇನ್ನೂ ಈ ಕಾರಿನಲ್ಲಿ ಮಿರರ್, ಹೆಡ್‍ಲ್ಯಾಂಪ್‍ಗಳು ಮತ್ತು ವ್ಹೀಲ್‍‍ಹಬ್‍‍ಗಳನ್ನು ಅಳವಡಿಸಿದ್ದಾರೆ. ಇದರಿಂದಾಗಿ ವಿಂಟೇಜ್ ಕಾರಿನ ಲುಕ್ ಅನ್ನು ಹೊಂದಿದೆ. ಈ ಕಾರಿನ ತಯಾರಕ ರಾಕೇಶ್ ಬಾಬು ಅವರು ಹಾಕಿದ ವೀಡಿಯೊವು ಕಾರಿನ ನಿರ್ಮಾಣದ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಫೋಕ್ಸ್‌ವ್ಯಾಗನ್ ಬೀಟಲ್ ಕಾರಿನ ಇತಿಹಾಸ

1934ರ ಏಪ್ರಿಲ್‍‍ನಲ್ಲಿ ಅಡಾಲ್ಫ್ ಹಿಟ್ಲರ್ ಜನರಿಗಾಗಿ ಒಂದು ಕಾರನ್ನು ಅಭಿವೃದ್ಧಿಪಡಿಸಲು ಫರ್ಡಿನ್ಯಾಂಡ್ ಪೋರ್ಷೆಗೆ ಆದೇಶಿಸಿದ ನಂತರ ಈ ಕಾರನ್ನು ತಯಾರಿಸಲಾಯಿತು. ಹಿಟ್ಲರ್ ಹೇಳಿದ್ದು ಫೋಕ್ಸ್‌ವ್ಯಾಗನ್‍ ಎಂದು. ಜರ್ಮನ್ ಭಾಷೆಯಲ್ಲಿ ಫೋಕ್ಸ್‌ವ್ಯಾಗನ್‍ ಪದದ ಅರ್ಥವು ಜನರ ಕಾರು ಎಂಬುದಾಗಿದೆ.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಕಾರಿನ ವಿನ್ಯಾಸವನ್ನು ಅಭಿವೃದ್ಧಿಪಡಿಸಿದ ನಂತರ 1938ರ ವೇಳೆಗೆ ಉತ್ಪಾದನೆಯನ್ನು ಶುರು ಕಾರು ಬಿಡುಗಡೆಯ ನಂತರ ಜರ್ಮನಿಯ ಬಹುತೇಕ ಜನರು ಫೋಕ್ಸ್‌ವ್ಯಾಗನ್‍‍‍ನಲ್ಲಿ ಓಡಾಡಲು ಶುರು ಮಾಡಿದರು. ಎರಡನೇಯ ಮಹಾಯುದ್ಧದಲ್ಲಿ ಜರ್ಮನ್ನರು ಫೋಕ್ಸ್‌ವ್ಯಾಗನ್‍ ಬೀಟಲ್‍ ಕಾರುಗಳನ್ನು ಬಳಸುತ್ತಿದ್ದರು.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಯುದ್ಧ ಮುಗಿದ ನಂತರ ಫೋಕ್ಸ್‌ವ್ಯಾಗನ್‍ ಕಂಪನಿಯು, ಬೀಟಲ್ ಕಾರುಗಳನ್ನು ವಿದೇಶಕ್ಕೆ ರವಾನಿಸಿತು. ಪ್ರಪಂಚದಾದ್ಯಂತ ಜನರು ಈ ಸಣ್ಣ ಹ್ಯಾಚ್‌ಬ್ಯಾಕ್ ಅನ್ನು ಇಷ್ಟಪಟ್ಟರು. ನಂತರದ ದಿನಗಳಲ್ಲಿ ಬೀಟಲ್ ವಿಶ್ವದಲ್ಲೇ ಹೆಚ್ಚು ಉತ್ಪಾದನೆಯಾಗುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಸುಜುಕಿ ಸಮುರಾಯ್ ಬೈಕಿನ ಎಂಜಿನ್‍‍ನಿಂದ ಚಾಲನೆಯಾಗುತ್ತೆ ಈ ವಿಂಟೇಜ್ ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಕೇಶ್ ಬಾಬು ಅವರು ತಯಾರಿಸಿದ ಕಾರು ಮೋಟಾರು ನಿಯಮದ ಪ್ರಕಾರವಿಲ್ಲದ ಕಾರಣ ಈ ಕಾರನ್ನು ಸಾರ್ವಜನಿಕ ರಸ್ತೆಗಳಲ್ಲಿ ಚಲಾಯಿಸಲು ಸಾಧ್ಯವಿಲ್ಲ. ಆದರೆ ಈ ಕಾರಿನ ಮೂಲಕ ಆತನ ಪ್ರತಿಭೆಯನ್ನು ತೋರಿಸಿದ್ದಾನೆ. ಫೋಕ್ಸ್‌ವ್ಯಾಗನ್ ಬೀಟಲ್ ಕಾರಿನ ಕನಸನ್ನು ಕೂಡ ನನಸಾಗಿಸಿ ಕೊಂಡಿದ್ದಾನೆ.

Most Read Articles

Kannada
English summary
This homemade Volkswagen Beetle runs a Suzuki Samurai engine. Read in Kannada.
Story first published: Friday, January 31, 2020, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X