ಸ್ಥಗಿತವಾಯ್ತು ಹೋಂಡಾ ಬಿಆರ್‌ವಿ ಬಿಎಸ್4 ಎಸ್‌ಯುವಿ ಮಾರಾಟ

ಬಿಎಸ್ 4 ಎಂಜಿನ್ ಹೊಂದಿದ್ದ ವಾಹನಗಳು ಹೆಚ್ಚಿನ ಪ್ರಮಾಣದ ಮಾಲಿನ್ಯವನ್ನು ಉಂಟುಮಾಡುತ್ತಿದ್ದವು. ಈ ಕಾರಣಕ್ಕೆ ಬಿಎಸ್ 6 ಮಾಲಿನ್ಯ ನಿಯಮಗಳನ್ನು ಇಂದಿನಿಂದ ಜಾರಿಗೆ ತರಲಾಗಿದೆ. ಬಿಎಸ್ 6 ಮಾಲಿನ್ಯ ನಿಯಮಗಳನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಭಾರತದಲ್ಲಿ ಹೋಂಡಾ ಬಿಆರ್‌ವಿ ಎಸ್‌ಯುವಿ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಸ್ಥಗಿತವಾಯ್ತು ಹೋಂಡಾ ಬಿಆರ್‌ವಿ ಬಿಎಸ್4 ಎಸ್‌ಯುವಿ ಮಾರಾಟ

ಹೋಂಡಾ ಬಿಆರ್‌ವಿ ಎಸ್‌ಯುವಿಯನ್ನು 2016ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಎಸ್‌ಯುವಿಯನ್ನು 5 ಸೀಟುಗಳು ಹಾಗೂ 7 ಸೀಟುಗಳ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಭಾರತದಲ್ಲಿ 7 ಸೀಟುಗಳ ಮಾದರಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮೊಬಿಲಿಯೊ ಎಂಪಿವಿಯ ಬದಲಿಗೆ ಈ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿತ್ತು.

ಸ್ಥಗಿತವಾಯ್ತು ಹೋಂಡಾ ಬಿಆರ್‌ವಿ ಬಿಎಸ್4 ಎಸ್‌ಯುವಿ ಮಾರಾಟ

ಮೊಬಿಲಿಯೊ ಕಾರಿನಂತೆ ಈ ಕಾರು ಸಹ ಹೆಚ್ಕಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಕಳೆದ ವರ್ಷ ಹೋಂಡಾ ಕಂಪನಿಯು ಈ ಕಾರಿನ 2,857 ಯೂನಿಟ್ ಗಳನ್ನು ಮಾರಾಟ ಮಾಡಿತ್ತು. ಆದರೆ, ಹೋಂಡಾ ಕಂಪನಿಯು ನಿರೀಕ್ಷಿಸಿದ ಮಟ್ಟಕ್ಕೆ ಈ ಕಾರು ಮಾರಾಟವಾಗಲಿಲ್ಲ.

ಸ್ಥಗಿತವಾಯ್ತು ಹೋಂಡಾ ಬಿಆರ್‌ವಿ ಬಿಎಸ್4 ಎಸ್‌ಯುವಿ ಮಾರಾಟ

ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಕಾರಿಗೆ ಪೈಪೋಟಿ ನೀಡಲು ಈ ಕಾರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಈ ಎಸ್‌ಯುವಿ, ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಡೇಟೈಮ್ ಲೈಟ್‌ಗಳು, ಎಲ್‌ಇಡಿ ಟೇಲ್ ಲೈಟ್‌, 16 ಇಂಚಿನ ಅಲಾಯ್ ವೀಲ್ ಗಳು, ಲೆದರ್ ಅಪ್ ಹೊಲೆಸ್ಟರಿ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ತಂಗಳನ್ನು ಹೊಂದಿದೆ.

ಸ್ಥಗಿತವಾಯ್ತು ಹೋಂಡಾ ಬಿಆರ್‌ವಿ ಬಿಎಸ್4 ಎಸ್‌ಯುವಿ ಮಾರಾಟ

ಬಿಆರ್‌ವಿ ಎಸ್‌ಯುವಿಯಲ್ಲಿರುವ 1.5 ಲೀಟರಿನ ಪೆಟ್ರೋಲ್ ಎಂಜಿನ್ 116 ಬಿಹೆಚ್ ಪಿ ಪವರ್ ಹಾಗೂ 145 ಎನ್ಎಂ ಟಾರ್ಕ್ ಉತ್ಪಾದಿಸಿದರೆ, 1.5 ಲೀಟರಿನ ಡೀಸೆಲ್ ಎಂಜಿನ್ 97 ಬಿಹೆಚ್ ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಥಗಿತವಾಯ್ತು ಹೋಂಡಾ ಬಿಆರ್‌ವಿ ಬಿಎಸ್4 ಎಸ್‌ಯುವಿ ಮಾರಾಟ

6-ಸ್ಪೀಡಿನ ಗೇರ್‌ಬಾಕ್ಸ್ ಹಾಗೂ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪೆಟ್ರೋಲ್ ಎಂಜಿನ್ ನೊಂದಿಗೆ ಹಾಗೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಡೀಸೆಲ್ ಎಂಜಿನ್ ನೊಂದಿಗೆ ನೀಡಲಾಗಿದೆ. ಹೋಂಡಾ ಕಂಪನಿಯ ಪ್ರಕಾರ, ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ ಪೆಟ್ರೋಲಿಗೆ 15.4 ಕಿ.ಮೀ ಮೈಲೇಜ್ ನೀಡುತ್ತದೆ.

ಸ್ಥಗಿತವಾಯ್ತು ಹೋಂಡಾ ಬಿಆರ್‌ವಿ ಬಿಎಸ್4 ಎಸ್‌ಯುವಿ ಮಾರಾಟ

ಹೊಸ ಬಿಎಸ್ 6 ಮಾಲಿನ್ಯ ನಿಯಮಗಳಿಂದಾಗಿ, ಹೋಂಡಾ ಬಿಆರ್‌ವಿ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ಕಾರಿನಲ್ಲಿ ಅಳವಡಿಸಲಾಗಿದ್ದ 1.5-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಮಾಡಲಾಗುತ್ತಿದೆಯೇ ಇಲ್ಲವೇ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ಸ್ಥಗಿತವಾಯ್ತು ಹೋಂಡಾ ಬಿಆರ್‌ವಿ ಬಿಎಸ್4 ಎಸ್‌ಯುವಿ ಮಾರಾಟ

ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಗೊಳಿಸಿದರೂ ಸಹ, ಈ ಕಾರು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗುವ ಬಗ್ಗೆ ಸಂದೇಹಗಳಿವೆ. ಈ ಕಾರ್ ಅನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಗೊಳಿಸುವ ಬಗ್ಗೆ ಹೋಂಡಾ ಕಂಪನಿಯು ಅಧಿಕೃತ ಮಾಹಿತಿ ನೀಡಬೇಕಿದೆ.

ಸ್ಥಗಿತವಾಯ್ತು ಹೋಂಡಾ ಬಿಆರ್‌ವಿ ಬಿಎಸ್4 ಎಸ್‌ಯುವಿ ಮಾರಾಟ

ಹೋಂಡಾ ಬಿಆರ್‌ವಿ ಬಿಎಸ್ 4 ಎಸ್‌ಯುವಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.9.52 ಲಕ್ಷಗಳಾಗಿದೆ. ಈ ಬೆಲೆ ಮಾರುತಿ ಸುಜುಕಿ ಎರ್ಟಿಗಾಗಿಂತ ಹೆಚ್ಚು. ಈ ಕಾರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗದೇ ಇರುವುದಕ್ಕೆ ಇದು ಒಂದು ಕಾರಣವಾಗಿದೆ.

Most Read Articles

Kannada
Read more on ಹೋಂಡಾ honda
English summary
Honda BRV BS4 model discontinued in India. Read in Kannada.
Story first published: Wednesday, April 1, 2020, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X