ಕರೋನಾ ವೈರಸ್ ಭೀತಿ: ಕಾರು ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೋಂಡಾ

ಕರೋನಾ ವೈರಸ್‌ ಭೀತಿ ಪರಿಣಾಮ ವಾಣಿಜ್ಯ ಚಟುವಟಿಕೆಗಳು ಹೊಸ ಸವಾಲಾಗಿ ಪರಿಣಮಿಸಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕೂಡಾ ಹಲವಾರು ಸುರಕ್ಷಾ ಮಾರ್ಗಸೂಚಿಗಳೊಂದಿಗೆ ಕಾರು ಮಾರಾಟವನ್ನು ಕೈಗೊಳ್ಳುತ್ತಿದೆ.

ಕಾರು ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೋಂಡಾ

ಕರೋನಾ ವೈರಸ್ ಪರಿಣಾಮ ಕಳೆದ ಕೆಲ ತಿಂಗಳ ಹಿಂದೆ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟ ಪ್ರಮಾಣವು ಇದೇ ಕರೋನಾ ಪರಿಣಾಮವೇ ಭಾರೀ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಳವಾಗಲು ಕಾರಣವಾಗಿದ್ದು, ಹೋಂಡಾ ಕಾರು ಮಾರಾಟವು ಕಳೆದ ವರ್ಷಕ್ಕಿಂತಲೂ ದುಪ್ಪಟ್ಟು ಹೆಚ್ಚಳವಾಗಿದೆ. ಹೌದು, ಹೋಂಡಾ ನಿರ್ಮಾಣದ ಕಾರುಗಳ ಮಾರಾಟ ಪ್ರಮಾಣವು ಈ ವರ್ಷದ ಅಗಸ್ಟ್ ತಿಂಗಳಿನಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಸುರಕ್ಷಿತ ಕಾರು ಮಾರಾಟಕ್ಕಾಗಿ ಹೆಚ್ಚು ಒತ್ತು ನೀಡುತ್ತಿದೆ.

ಕಾರು ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೋಂಡಾ

ಹೋಂಡಾ ಕಾರ್ಸ್ ಕಂಪನಿಯು ಕಾರುಗಳ ಮಾರಾಟಕ್ಕಾಗಿ ಪ್ರತ್ಯೇಕವಾದ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೆ ತಮ್ಮ ಇಷ್ಟದ ಕಾರು ಮಾದರಿಯನ್ನು ಆನ್‌ಲೈನ್ ಮೂಲಕವೇ ವಿಕ್ಷಣೆ ಮಾಡುವ ಅವಕಾಶ ನೀಡುತ್ತಿದೆ.

ಕಾರು ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೋಂಡಾ

ವರ್ಚುವಲ್ ಶೋರೂಂನಲ್ಲಿ ಹೋಂಡಾ ನಿರ್ಮಾಣದ ಎಲ್ಲಾ ಕಾರು ಮಾದರಿಗಳು ವೀಕ್ಷಣೆಗೆ ಲಭ್ಯವಿದ್ದು, ಇದು ಗ್ರಾಹಕರಿಗೆ ನೇರವಾಗಿ ಶೋರೂಂ ಭೇಟಿ ನೀಡಿದ ಅನುಭವವನ್ನೇ ನೀಡುತ್ತದೆ. ಇದು ಸದ್ಯ ಕರೋನಾ ವೈರಸ್ ಪರಿಣಾಮ ಗ್ರಾಹಕರಿಗೂ ಮತ್ತು ಶೋರೂಂ ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಕ್ರಮವಾಗಿದ್ದು, ವೈರಸ್ ಹರಡುವಿಕೆಯನ್ನು ತಪ್ಪಿಸಲು ಅನುಕೂಲಕವಾಗಲಿದೆ.

ಕಾರು ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೋಂಡಾ

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟವನ್ನು ಕೈಗೊಳ್ಳುತ್ತಿರುವ ಆಟೋ ಕಂಪನಿಗಳು ಸೋಂಕು ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ವಾಹನ ಖರೀದಿಗೆ ಸುಲಭವಾಗುವಂತೆ ಆನ್‌ಲೈನ್ ವಾಹನ ಮಾರಾಟ ಮಳಿಗೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ.

ಕಾರು ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೋಂಡಾ

ಕಾರು ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದ್ದು, 3ಡಿ ತಂತ್ರಜ್ಞಾನದ ಮೂಲಕ ನಿಮ್ಮ ಆಯ್ಕೆ ಕಾರಿನ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.

ಕಾರು ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೋಂಡಾ

ವರ್ಚುವಲ್ ಶೋರೂಂ ನಲ್ಲಿ ಖರೀದಿಗೆ ಲಭ್ಯವಿರುವ ಕಾರು ಮಾದರಿಯ ವೆರಿಯೆಂಟ್, ತಾಂತ್ರಿಕ ಅಂಶಗಳು, ಬೆಲೆ, ಮತ್ತು ತಾಂತ್ರಿಕ ಅಂಶಗಳನ್ನು ನೇರವಾಗಿ ವೀಕ್ಷಣೆ ಮಾಡಬಹುದಾಗಿದ್ದು, ಸದ್ಯ ವರ್ಚುವಲ್ ಶೋರೂಂನಲ್ಲಿ ಎಲ್ಲಾ ಕಾರು ಮಾದರಿಗಳನ್ನು ವೀಕ್ಷಣೆ ಮಾಡಬಹುದಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕಾರು ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೋಂಡಾ

ಇನ್ನು ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕಾರುಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಕಾರುಗಳ ಅಂದಕ್ಕೆ ಮತ್ತಷ್ಟು ಮೆರಗು ನೀಡಲು ಪೇಟಿಂಗ್ ಸರ್ವಿಸ್‌ ಕ್ಯಾಂಪ್ ಘೋಷಣೆ ಮಾಡಿದ್ದು, ನಿಗದಿತ ಅವಧಿಯಲ್ಲಿ ಹೊಸ ಸರ್ವಿಸ್ ಪಡೆಯುವ ಗ್ರಾಹಕರಿಗೆ ಹಲವಾರು ಆಫರ್‌ಗಳನ್ನು ನೀಡಲಾಗುತ್ತಿದೆ.

ಕಾರು ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೋಂಡಾ

ಲಾಕ್‌ಡೌನ್‌ ವೇಳೆ ವಾಹನಗಳು ಒಂದೇ ಬದಿಯಲ್ಲಿ ತಿಂಗಳುಗಟ್ಟಲೇ ನಿಲುಗಡೆಯಾಗಿದ್ದರಿಂದ ವಾಹನಗಳ ಕಾರ್ಯಕ್ಷಮತೆಯಲ್ಲಿ ತಗ್ಗುವುದು ಮತ್ತು ಪೆೇಟಿಂಗ್ ಸೌಲಭ್ಯವು ಕಳೆಗುಂದುವುದು ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಇದರಿಂದ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗೆ ವಿಶೇಷ ಸರ್ವಿಸ್ ಕ್ಯಾಂಪ್ ಆಯೋಜಿಸಿದ್ದು, ಇದೇ ತಿಂಗಳು 14ರಿಂದ 26ರ ತನಕ ಹೋಂಡಾ ಸ್ಪೆಷಲ್ ಸರ್ವಿಸ್ ಕ್ಯಾಂಪ್ ಕಾರ್ಯನಿರ್ವಹಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಾರು ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೋಂಡಾ

ಸಾಮಾನ್ಯ ದಿನಗಳಲ್ಲಿನ ಸರ್ವಿಸ್‌ಗಳಿಂತಲೂ ಆಕರ್ಷಕ ಬೆಲೆಯಲ್ಲಿ ಹೊಸ ತಾಂತ್ರಿಕ ಸೌಲಭ್ಯಗಳ ಸೇವೆಗಳು ಈ ಕ್ಯಾಂಪ್‌ನಲ್ಲಿ ಲಭ್ಯವಿದ್ದು, ನುರಿತ ಕಾರು ಎಂಜಿನ್ ತಂತ್ರಜ್ಞರಿಂದ ಸೇವೆಗಳನ್ನು ಪಡೆದುಕೊಳ್ಳಬಹುದು.

Most Read Articles

Kannada
Read more on ಹೋಂಡಾ honda
English summary
Honda Cars India Introduce Virtual Showrooms. Read in Kannada.
Story first published: Thursday, September 24, 2020, 13:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X