ದೋಷ ಪೂರಿತ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಹೋಂಡಾ ಕಂಪನಿಯ ಹಲವು ಜನಪ್ರಿಯ ಮಾದರಿಗಳಲ್ಲಿ ಫ್ಯೂಯಲ್ ಪಂಪ್‌ನಲ್ಲಿ ಕೆಲವು ದೋಷ ಕಂಡು ಬಂದ ಹಿನ್ನಲೆಯಲ್ಲಿ ಅವುಗಳನ್ನು ರಿಕಾಲ್ ಮಾಡಲು ಮುಂದಾಗಿದೆ. ಕೆಲವು ವರದಿಗಳ ಪ್ರಕಾರ ಸರಿಸುಮಾರು 65,000 ಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಲಾಗುತ್ತದೆ.

ದೋಷ ಪೂರಿತ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಕಂಪನಿಯ ಪ್ರಕಾರ 2018ರಲ್ಲಿ ತಯಾರಿಸಿದ ಕಾರುಗಳಲ್ಲಿ ಈ ದೋಷ ಕಂಡು ಬಂದಿದೆ. ಇದೀಗ ಹೋಂಡಾ ಕಂಪನಿಯು ಈ ಅಪಾವಾದಗಳನ್ನು ಸರಿಪಡಿಸಲು 2018ರಲ್ಲಿ ತಯಾರಿಸಿದ ಮಾದರಿಗಳ ಫ್ಯೂಯಲ್ ಪಂಪ್ ಅನ್ನು ಕಂಪನಿಯು ಬದಲಾಯಿಸಲು ಮುಂದಾಗಿದೆ. ಹೋಂಡಾ ಕಂಪನಿಯ ಹಲವು ಮಾದರಿಗಳಲ್ಲಿ ಫ್ಯೂಯಲ್ ಪಂಪ್ ನಲ್ಲಿ ದೋಷ ಉಂಟಾಗಿರುವುದರಿಂದ ಇದು ಎಂಜಿನ್ ಗೆ ಫ್ಯೂಯಲ್ ಪೂರೈಕೆಯ ಮೇಲೆ ಪರಿಣಾಮವನ್ನು ಬೀರವ ಸಾಧ್ಯತೆಗಳಿದೆ.

ದೋಷ ಪೂರಿತ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಹೋಂಡಾ ಕಂಪನಿಯ ಪ್ರಕಾರ ಜನಪ್ರಿಯ ಸಿಟಿ ಸೆಡಾನ್‌ನ 16,000 ಕ್ಕೂ ಹೆಚ್ಚು ಯುನಿಟ್ ಗಳಲ್ಲಿ ಈ ಫ್ಯೂಯಲ್ ಪಂಪ್ ದೋಷ ಕಂಡು ಬಂದಿದೆ. ಹೋಂಡಾ ಕಂಪನಿಯ ಸರಣೆಯಲ್ಲಿ ಸಿಟಿ ಜನಪ್ರಿಯ ಸೆಡಾನ್ ಆಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ದೋಷ ಪೂರಿತ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಇದರೊಂದಿಗೆ ಹೋಂಡಾ ಅಮೇಜ್ ಕಾರಿನ 32,498 ಯುನಿಟ್‌ಗಳು, ಹೋಂಡಾ ಜಾಝ್ ಕಾರಿನ 7,500 ಯುನಿಟ್‌ಗಳು, ಡಬ್ಲ್ಯುಆರ್-ವಿ ಕಾರಿನ 7,057 ಯುನಿಟ್‌ಗಳು, ಬಿಆರ್-ವಿ ಕಾರಿನ 1,622 ಯುನಿಟ್‌ಗಳು, ಬ್ರಿಯೊ ಕಾರಿನ 360 ಯುನಿಟ್‌ಗಳು ಮತ್ತು ಸಿಆರ್-ವಿ ಎಸ್‌ಯುವಿಯ 180 ಯುನಿಟ್‌ಗಳನ್ನು ರಿಕಾಲ್ ಮಾಡುತ್ತಿದೆ.

ದೋಷ ಪೂರಿತ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಹೋಂಡಾ ಕಂಪನಿಯು ದೋಷ ಕಂಡು ಬಂದ ಕಾರುಗಳ ಫ್ಯೂಯಲ್ ಪಂಪ್ ಅನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ. ಈ ರಿಕಾಲ್ ಪಕ್ರಿಯೆಯು ಇದೇ ತಿಂಗಳ 20ರಿಂದ ಹಂತ ಹಂತವಾಗಿ ನಡೆಯಲಿದೆ. ಹೋಂಡಾ ಕಂಪನಿಯು ತಮ್ಮ ಗ್ರಾಹಕರನ್ನು ಪ್ರತ್ಯೇಕವಾಗಿ ಸಂಪರ್ಕಿಸುತ್ತದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ದೋಷ ಪೂರಿತ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಹೋಂಡಾ ಕಂಪನಿಯು ಹೊಸ ಮೈಕ್ರೋ-ಸೈಟ್ ಅನ್ನು ತೆರೆದಿದೆ, ಗ್ರಾಹಕರು ತಮ್ಮ ಕಾರಿನಲ್ಲಿ ದೋಷವಿದ್ದರೆ ಈ ಸೈಟ್‌ಗೆ ಭೇಟಿ ನೀಡಬಹುದು. ಇಲ್ಲಿ ನೀವು ಬೇಟಿ ನೀಡಿ ವಾಹನದ ಮಾಹಿತಿಯನ್ನು ನೀಡಬಹುದಾಗಿದೆ.

ದೋಷ ಪೂರಿತ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಹೋಂಡಾ ಕಂಪನಿಯು ತನ್ನ ಬಹುನಿರೀಕ್ಷಿತ 2020ರ ಸಿಟಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಬಹುನಿರೀಕ್ಷಿತ ಹೊಸ ಹೋಂಡಾ ಸಿಟಿ ಕಾರಿನ ಬಿಡುಗಡೆಯು ವಿಳಂಭವಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ದೋಷ ಪೂರಿತ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಭಾರತದಲ್ಲಿ ಕರೋನಾ ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಮುಂದುವರಿಸಿರುವುದರಿಂದ ಹೊಸ ಹೋಂಡಾ ಸಿಟಿ ಕಾರಿನ ಬಿಡುಗಡೆಯು ಮತ್ತಷ್ಟು ತಡವಾಗಿದೆ. ಆದರೆ ಈ ಹೊಸ ಕಾರನ್ನು ಭಾರತೀಯ ಮಾರುಕಟ್ಟೆಯಲಿ ಈ ತಿಂಗಳು ಬಿಡುಗಡೆಗೊಳಿಸುವ ಸಾದ್ಯತೆಗಳಿದೆ.

ದೋಷ ಪೂರಿತ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಹೋಂಡಾ ಕಂಪನಿಯು ತಮ್ಮ ಕಾರುಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ರಿಕಾಲ್ ಮಾಡಲು ಮುಂದಾಗಿದೆ. ಫ್ಯೂಯಲ್ ಪಂಪ್ ದೋಷದಿಂದಾಗಿ ಇತರ ಭಾಗಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಕಂಪನಿ ಹೇಳಿದೆ.

Most Read Articles

Kannada
Read more on ಹೋಂಡಾ honda
English summary
Honda Car India Recall Vehicles Over Possible Faulty Fuel Pump. Read In Kannada.
Story first published: Saturday, June 13, 2020, 12:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X