Just In
Don't Miss!
- News
ಜನಸೇವಕ್ ಸಮಾವೇಶದಲ್ಲಿ ಅಮಿತ್ ಶಾ ಭಾಷಣ; ಮುಖ್ಯಾಂಶಗಳು
- Movies
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ಹೋಂಡಾ ಸಿಟಿ
ಹೋಂಡಾ ಇಂಡಿಯಾ ಕಂಪನಿಯು ತನ್ನ ಐದನೇ ತಲೆಮಾರಿನ ಸಿಟಿ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಜನಪ್ರಿಯ ಸಿಟಿ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಇತ್ತೀಚಿನ ವರದಿಯ ಪ್ರಕಾರ ಹೋಂಡಾ ಸಿಟಿ ತನ್ನ ಸೆಗ್‍ಮೆಂಟ್‍ನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಆಗಿದೆ. ಈ ವರ್ಷದ ಜುಲೈ ತಿಂಗಳ ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿಗಳಾದ ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳನ್ನು ಹಿಂದುಕ್ಕಿದೆ. ಕಳೆದ ತಿಂಗಳು ಹೊಸ ಹೋಂಡಾ ಸಿಟಿಯ 1,975 ಯುನಿಟ್‌ಗಳನ್ನು ಮಾರಾಟವಾಗಿದೆ ಎಂದು ವರದಿಗಳು ಬಹಿರಂಗಪಡಿಸುತ್ತದೆ.

ಇನ್ನು ಹೋಂಡಾ ಸಿಟಿ ಕಾರಿನ ಪ್ರತಿ ಸ್ಪರ್ಧಿ ಹ್ಯುಂಡೈ ವೆರ್ನಾದ 1,906 ಯುನಿಟ್‌ಗಳು ಮಾರಾಟವಾಗಿದ್ದರೆ, ಮಾರುತಿ ಸುಜುಕಿ ಸಿಯಾಜ್ ಕಾರಿನ 1,303 ಯುನಿಟ್‌ಗಳು ಮಾರಾಟವಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಕಳೆದ ವರ್ಷದ ಜುಲೈ ತಿಂಗಳ ಹೋಂಡಾ ಸಿಟಿ ಕಾರಿನ ಮಾರಾಟವನ್ನು ಈ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಶೇ.3 ರಷ್ಟು ಹೆಚ್ಚಳವನ್ನು ಕಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಕಾರು ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಮಾರಾಟ ಮಾಡಿದ ಒಟ್ಟು 1,975 ಸೆಡಾನ್ ಯುನಿಟ್‌ಗಳಲ್ಲಿ ಹಿಂದಿನ ತಲೆಮಾರಿನ ಮಾದರಿಯು ಸಹ ಒಳಗೊಂಡಿದೆ. ಹೊಸ ತಲೆಮಾರಿನ ಸಿಟಿ ಕಾರಿನೊಂದಿಗೆ ಹಿಂದಿನ ತಲೆಮಾರಿನ ಸಿಟಿ ಕಾರಿನ ಮೇಲೆ ಭರ್ಜರಿ ರಿಯಾಯಿತಿ ನೀಡಿ ಮಾರಾಟ ಮಾಡಲಾಗುತ್ತಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ನಾಲ್ಕನೇ ತಲೆಮಾರಿನ ಸಿಟಿ ಕಾರಿಗೆ ಹಿಂದಿನ ತಿಂಗಳು ರೂ,1.68 ಲಕ್ಷಗಳವರೆಗೆ ರಿಯಾಯುತಿಯನ್ನು ಘೋಷಿಸಿದರು. ಸಿಟಿ ಸೆಡಾನ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ಇದು ಕೂಡ ಒಂದು ಕಾರಣವಾಗಿರಬಹುದು.

ಹೊಸ ತಲೆಮಾರಿನ ಹೋಂಡಾ ಸಿಟಿ ಕಾರಿನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10.90 ಲಕ್ಷಗಳಾಗಿದೆ. ಹೊಸ ತಲೆಮಾರಿನ ಸಿಟಿ ಕಾರು ವಿ, ವಿಎಕ್ಸ್, ಝೆಡ್ಎಕ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

2020ರ ಸಿಟಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಲಭ್ಯವಿದೆ. ಇದರಲ್ಲಿ 1.5-ಲೀಟರ್ ಐ-ವಿಟಿಇಸಿ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಹೋಂಡಾ ಸಿಟಿ ಯಾವಾಗಲೂ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೆಡಾನ್ ಮಾದರಿಯಾಗಿದೆ. ಇನ್ನು ಐದನೇ ತಲೆಮಾರಿನ ಹೋಂಡಾ ಸಿಟಿ ಹಲವಾರು ನೂತನ ಫೀಚರುಗಳನ್ನು ಹೊಂದಿದೆ. ಹೋಂಡಾ ಸಿಟಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.