ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಮುಂಬರುವ ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಹೋಂಡಾ ಸಂಸ್ಥೆಯು ನಿಗದಿತ ಅವಧಿಯೊಳಗೆ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಭಾರೀ ಪ್ರಮಾಣದ ಆಫರ್‌ಗಳನ್ನು ಘೋಷಣೆ ಮಾಡಿದೆ. ಈಗಾಗಲೇ ಬಿಎಸ್-4 ಡೀಸೆಲ್ ಕಾರುಗಳ ಮೇಲೆ ಗರಿಷ್ಠ ರೂ.5 ಲಕ್ಷದ ತನಕ ಡಿಸ್ಕೌಂಟ್ ಆಫರ್ ಘೋಷಣೆ ಮಾಡಿರುವ ಹೋಂಡಾ ಸಂಸ್ಥೆಯು ಇದೀಗ ಮತ್ತಷ್ಟು ಹೊಸ ಆಫರ್ ಘೋಷಿಸಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಆಯ್ದ ಕಾರು ಮಾದರಿಗಳ ಖರೀದಿ ಮೇಲೆ ಗರಿಷ್ಠ 10 ವರ್ಷಗಳ ಗರಿಷ್ಠ ವಾರಂಟಿ ಆಫರ್ ನೀಡಿರುವ ಹೋಂಡಾ ಸಂಸ್ಥೆಯು ಈ ಹಿಂದೆ ಇದ್ದ ಸಾಮಾನ್ಯ 3 ವರ್ಷಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ್ದು, ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ 10 ವರ್ಷ ಅಥವಾ 1.20 ಲಕ್ಷ ಕಿ.ಮೀ ಆಧಾರದ ಮೇಲೂ ವಾರಂಟಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಮತ್ತೊಂದು ವಿಶೇಷ ಅಂದ್ರೆ, ಈಗಾಗಲೇ ಕಾರು ಖರೀದಿ ಮಾಡಿರುವ ಮಾಲೀಕರಿಗೂ ಸಹ ಈ ಹೊಸ ವಾರಂಟಿ ಯೋಜನೆಯು ಅನ್ವಯವಾಗಲಿದ್ದು, ಹೊಸ ಆಫರ್‌ಗಾಗಿ ಹೆಚ್ಚುವರಿ ಮೊತ್ತ ಪಾವತಿ ಮಾಡಬೇಕಾಗುತ್ತದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ವಾರಂಟಿ ಯೋಜನೆಯನ್ನ 'ಏನಿ ಟೈಮ್ ವಾರಂಟಿ' ಎಂದು ಹೆಸರಿಸಿರುವ ಹೋಂಡಾ ಸಂಸ್ಥೆಯು ಕಾರುಗಳ ಮಾರಾಟ ಹೆಚ್ಚಳದ ಜೊತೆಗೆ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಲು ಈ ಯೋಜನೆಯನ್ನು ಪರಿಚಯಿಸಿದ್ದು, ಹೊಸ ವಾರಂಟಿ ಯೋಜನೆಯಲ್ಲಿ ಟೋಲ್ ಫ್ರೀ ಕಾಲ್ ಅಸಿಸ್ಟಂಟ್ ಮತ್ತು ರೋಡ್ ಸೈಡ್ ಅಸಿಸ್ಟಂಟ್ ಸೌಲಭ್ಯವನ್ನು ಸಹ ಹೊಂದಿರುತ್ತದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ವಾರಂಟಿ ಆಫರ್‌ ಹೋಂಡಾ ನಿರ್ಮಾಣದ ಆರ್-ವಿ, ಬಿಆರ್-ಬಿ, ಸಿಟಿ ಸೆಡಾನ್, ಜಾಝ್, ಡಬ್ಲ್ಯುಆರ್-ವಿ, ಬ್ರಿಯೊ, ಅಕಾರ್ಡ್ ಹೈಬ್ರಿಡ್, ಅಮೇಜ್ ಮತ್ತು ಸ್ಥಗಿತಗೊಂಡಿರುವ ಮೊಬಿಲಿಯೊ ಕಾರುಗಳಿಗೆ ಅನ್ವಯವಾಗಲಿದ್ದು, ಹೊಸ ಕಾರು ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು ಬಿಎಸ್-4 ವಾಹನಗಳ ಸ್ಟಾಕ್ ಪ್ರಮಾಣವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ಹೋಂಡಾ ಸಂಸ್ಥೆಯು ಗ್ರಾಹಕರನ್ನು ಸೆಳೆಯಲು ಭಾರೀ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದೆ.

ಸಿಆರ್-ವಿ ಎಸ್‌ಯುವಿ ಮೇಲೆ ಗರಿಷ್ಠ ರೂ.5 ಲಕ್ಷ ತನಕ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಈ ಕಾರು 7-ಸೀಟರ್‌ನೊಂದಿಗೆ 2-0-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.28.33 ಲಕ್ಷ ಮತ್ತು ಟಾಪ್ ಮಾದರಿಗೆ ರೂ. 32.83 ಲಕ್ಷ ಬೆಲೆ ಹೊಂದಿರುವ ಸಿಆರ್-ವಿ ಕಾರಿನ ಪ್ರತಿ ಡೀಸೆಲ್ ವೆರಿಯೆಂಟ್ ಮೇಲೂ ರೂ.5 ಲಕ್ಷ ಡಿಸ್ಕೌಂಟ್ ಪಡೆಯಬಹುದಾಗಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

7 ಸೀಟರ್ ಮಲ್ಟಿ ಪರ್ಪಸ್ ವೆಹಿಕಲ್ ಮಾದರಿಯಾಗಿರುವ ಬಿಆರ್‌-ವಿ ಖರೀದಿ ಮೇಲೆ ಹೋಂಡಾ ಸಂಸ್ಥೆಯು ರೂ.1.10 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಬಿಆರ್‌-ವಿ ಖರೀದಿಗೆ ಲಭ್ಯವಿದೆ. ರೂ. 1.10 ಲಕ್ಷ ಡಿಸ್ಕೌಂಟ್ ಅಲ್ಲದೇ ಆಯ್ದ ಡೀಲರ್ಸ್‌ಗಳಲ್ಲಿ ಬಿಆರ್‌-ವಿ ಖರೀದಿ ಮೇಲೆ ರೂ.36 ಸಾವಿರ ಮೌಲ್ಯ ಆಕ್ಸೆರಿಸ್‌ಗಳನ್ನು ಸಹ ಉಚಿತವಾಗಿ ಪಡೆದುಕೊಳ್ಳಬಹುದು.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹಾಗೆಯೇ ನ್ಯೂ ಜನರೇಷನ್ ಸಿವಿಕ್ ಐಷಾರಾಮಿ ಸೆಡಾನ್ ಮೇಲೆ ಹೋಂಡಾ ಸಂಸ್ಥೆಯು ರೂ.2.50 ಲಕ್ಷ ಡಿಸ್ಕೌಂಟ್ ನೀಡುತ್ತಿದ್ದು, 1.6-ಲೀಟರ್ ಡೀಸೆಲ್ ಮತ್ತು 1.8-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಸಿ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಸಿಟಿ ಸೆಡಾನ್ ಮಾದರಿಯ ಮೇಲೂ ಹೋಂಡಾ ಸಂಸ್ಥೆಯು ರೂ.62 ಸಾವಿರದಿಂದ ರೂ.72 ಸಾವಿರ ತನಕ ಡಿಸ್ಕೌಂಟ್ ಘೋಷಿಸಲಾಗಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಿಟಿ ಕಾರು ಸದ್ಯದಲ್ಲೇ ಮಹತ್ವದ ಬದಲಾವಣೆಯೊಂದಿಗೆ ನ್ಯೂ ಜನರೇಷನ್ ಸೌಲಭ್ಯಗಳೊಂದಿಗೆ ಬಿಡುಗಡೆಗೆ ಸಿದ್ದವಾಗುತ್ತಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನುಳಿದಂತೆ ಹೋಂಡಾ ಸಂಸ್ಥೆಯು ಜಾಝ್ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ರೂ.50 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದ್ದಲ್ಲಿ, ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ ಮೇಲೆ ರೂ.45 ಸಾವಿರ ಮತ್ತು ಅಮೇಜ್ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯ ಮೇಲೆ ರೂ. 42 ಸಾವಿರ ಡಿಸ್ಕೌಂಟ್ ನೀಡುತ್ತಿದೆ.

Most Read Articles

Kannada
Read more on ಹೋಂಡಾ honda
English summary
Honda Discount Offers & Benefits For February. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X