ಕರೋನಾ ಜನಕ ವುಹಾನ್ ನಗರದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ

ಇಡೀ ಪ್ರಪಂಚವು ಕರೋನಾ ವೈರಸ್ ಕಪಿಮುಷ್ಟಿಯಲ್ಲಿ ಸಿಲುಕಿದೆ. ಈ ಮಹಾಮಾರಿ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಲ್ಲಿ. ಮಾರಣಾಂತಿಕ ಕರೋನಾ ವೈರಸ್ ನಿಂದಾಗಿ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ.

ಕರೋನಾ ಜನಕ ವುಹಾನ್ ನಗರದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ

ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಇಷ್ಟು ದಿನ ಬೀಗುತ್ತಿದ್ದ ದೇಶಗಳು ಸಹ ಕರೋನಾ ವೈರಸ್ ಆನ್ನು ಗುಣಪಡಿಸಲಾಗದೇ ತತ್ತರಿಸಿವೆ. ಕಳೆದ ಕೆಲವು ದಿನಗಳವರೆಗೆ ಚೀನಾ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಈಗ ಕರೋನಾದ ಬಿಗಿ ಹಿಡಿತದಿಂದ ಪಾರಾಗಿರುವುದಾಗಿ ಹೇಳಿದೆ.

ಕರೋನಾ ಜನಕ ವುಹಾನ್ ನಗರದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ

ಇದು ಆಶ್ಚರ್ಯವನ್ನುಂಟು ಮಾಡಿದರೂ, ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಈ ವೈರಸ್ ಅನ್ನು ಹರಡಿರುವ ಆರೋಪವನ್ನು ಚೀನಾ ಮೇಲೆ ಹೊರಿಸಲಾಗಿದೆ. ಚೀನಾದ ಕೆಲ ಕಾರ್ಯಗಳು ಈ ಅನುಮಾನವನ್ನು ಹುಟ್ಟುಹಾಕಿವೆ. ಆದರೆ, ಚೀನಾ ಇದನ್ನು ಸಂಪೂರ್ಣವಾಗಿ ನಿರಾಕರಿಸಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ಜನಕ ವುಹಾನ್ ನಗರದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ

ಚೀನಾದಲ್ಲಿನ ದೈನಂದಿನ ಕೆಲಸ ಕಾರ್ಯಗಳು ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಲಾಗುತ್ತಿದೆ. ಈ ವರದಿಯು ಚೀನಾ ದೇಶದ ಮೇಲಿರುವ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ. ಕರೋನಾ ವೈರಸ್ ಮೊದಲಿಗೆ ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಲ್ಲಿ.

ಕರೋನಾ ಜನಕ ವುಹಾನ್ ನಗರದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ

ಈ ಕಾರಣಕ್ಕೆ ಈ ವೈರಸ್ ಅನ್ನು ಚೀನಾ ವೈರಸ್ ಅಥವಾ ವುಹಾನ್ ವೈರಸ್ ಎಂದು ಕರೆಯಲಾಗುತ್ತದೆ. ಅಮೆರಿಕಾದ ಅಧ್ಯಕ್ಷರು ಸಹ ಇದೇ ಆರೋಪವನ್ನು ಮಾಡಿದ್ದಾರೆ. ಚೀನಾದಲ್ಲಿ ವೈರಸ್ ಹರಡುವಿಕೆ ಪ್ರಮಾಣ ಹಾಗೂ ಅದರ ತೀವ್ರತೆ ಹೆಚ್ಚಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಕರೋನಾ ಜನಕ ವುಹಾನ್ ನಗರದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ

ಚೀನಾ ಹೊರತುಪಡಿಸಿ ಬೇರೆಲ್ಲಾ ದೇಶಗಳಲ್ಲಿ ವೈರಸ್‌ನ ತೀವ್ರತೆ ಹೆಚ್ಚಾಗಿದೆ. ಇತ್ತೀಚಿಗಷ್ಟೇ ವುಹಾನ್‌ ನಗರದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಅನ್ನು ತೆಗೆದುಹಾಕಲಾಯಿತು. ಇದರಿಂದಾಗಿ ಆ ನಗರದಲ್ಲಿ ವ್ಯವಹಾರಗಳು ಸಹಜ ಸ್ಥಿತಿಗೆ ಮರಳಿವೆ.

ಕರೋನಾ ಜನಕ ವುಹಾನ್ ನಗರದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ

ಹೋಂಡಾ ಕಂಪನಿಯು ವುಹಾನ್‌ನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ವಾಹನಗಳ ಉತ್ಪಾದನೆಯನ್ನು ಆರಂಭಿಸಿದೆ. ಆದರೆ ಈಗ ಹಿಂದೆಂದಿಗಿಂತಲೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಉತ್ಪಾದನಾ ಘಟಕದಲ್ಲಿರುವ ನೌಕರರಿಗೆ ಮಾಸ್ಕ್ ಹಾಗೂ ಗ್ಲೌಸ್ ಗಳನ್ನು ಒದಗಿಸಲಾಗಿದೆ. ಇವುಗಳನ್ನು ಧರಿಸಿದ ನಂತರವೇ ಒಳಗೆ ಬಿಡಲಾಗುತ್ತದೆ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಕರೋನಾ ಜನಕ ವುಹಾನ್ ನಗರದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ

ಜನವರಿಯಲ್ಲಿ ಮುಚ್ಚಲಾಗಿದ್ದ ಉತ್ಪಾದನಾ ಘಟಕವು ಈಗ ಮತ್ತೆ ಶುರುವಾಗಿದೆ. ಮಾರ್ಚ್ 11ರಂದು ಈ ಉತ್ಪಾದನಾ ಘಟಕವನ್ನು ತೆಗೆಯಲಾಗಿದ್ದರೂ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ತಯಾರಿಸಲಾಗುತ್ತಿತ್ತು. ಈಗ ವಾಹನಗಳನ್ನು ಉತ್ಪಾದಿಸಲಾಗುತ್ತಿದೆ.

ಕರೋನಾ ಜನಕ ವುಹಾನ್ ನಗರದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ

ಹೋಂಡಾ ಈ ಉತ್ಪಾದನೆಯನ್ನು ಚೀನಾದ ಡೊಹ್ಫೆಂಗ್ ಮೋಟಾರ್ ಗ್ರೂಪ್ ಸಹಭಾಗಿತ್ವದಲ್ಲಿ ಆರಂಭಿಸಿದೆ. ಈ ಎರಡೂ ಕಂಪನಿಗಳು ಒಟ್ಟಾಗಿ ವರ್ಷಕ್ಕೆ 8 ಲಕ್ಷ ವಾಹನಗಳನ್ನು ಉತ್ಪಾದಿಸುತ್ತವೆ. ಸದ್ಯಕ್ಕೆ 12,000 ಉದ್ಯೋಗಿಗಳಿಗೆ ಅನುಮತಿ ನೀಡಲಾಗಿದ್ದು, ಉತ್ಪಾದನೆಯನ್ನು ಪುನರಾರಂಭಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ಜನಕ ವುಹಾನ್ ನಗರದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ

ಈ ಎಲ್ಲಾ ಉದ್ಯೋಗಿಗಳಿಗೆ ಸುರಕ್ಷತಾ ಉಪಕರಣಗಳನ್ನು ನೀಡಿ, ಉದ್ಯೋಗಿಗಳನ್ನು ಪರೀಕ್ಷಿಸಲು ಎರಡೂ ಕಂಪನಿಗಳು ನಿರ್ಧರಿಸಿವೆ. ಪ್ರತಿ ಉದ್ಯೋಗಿ ಉತ್ಪಾದನಾ ಘಟಕವನ್ನು ಪ್ರವೇಶಿಸುವ ಮೊದಲು ಹಾಗೂ ಹೊರ ಹೋಗುವ ಸಮಯದಲ್ಲಿ ವಿಶೇಷ ಉಪಕರಣಗಳೊಂದಿಗೆ ಪರೀಕ್ಷಿಸಲಾಗುತ್ತದೆ.

Most Read Articles

Kannada
Read more on ಹೋಂಡಾ honda
English summary
Honda resumes production work in Wuhan. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X