Just In
- 1 hr ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 2 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 3 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- 4 hrs ago ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Movies ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಎಸ್-6 ಹೋಂಡಾ ಜಾಝ್ ಕಾರಿನ ಟೀಸರ್ ಬಿಡುಗಡೆ
ಹೋಂಡಾ ಕಂಪನಿಯು ತನ್ನ ಬಹುನಿರೀಕ್ಷಿತ ಬಿಎಸ್-6 ಜಾಝ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಹೋಂಡಾ ಕಂಪನಿಯು ಬಿಎಸ್-6 ಜಾಝ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿದೆ.
ಹೋಂಡಾ ಕಂಪನಿಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಿಎಸ್-6 ಜಾಝ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಹೋಂಡಾ ಜಾಝ್ ಕಾರಿನ ಕೆಲವು ಬದಲಾವಣೆಗಳೊಂದಿಗೆ ಹೊಸ ಫೀಚರ್ಸ್ಗಳನ್ನು ಅಳವಡಿಸಲಾಗುತ್ತದೆ ಎಂಬ ನಿರೀಕ್ಷೆಯಿದೆ. ಈ ಕಾರಿನ ಇಂಟಿರಿಯರ್ ನಲ್ಲಿ ಕೆಲವು ಬದಲಾವಣೆಗಳನ್ನು ನಡೆಸಬಹುದು ಎಂದು ನಿರೀಕ್ಷಿಸುತ್ತೇವೆ. ಹಿಂದಿನ ಮಾದರಿಗಳಲ್ಲಿ ಕಂಡುಬರುವ ಟಚ್ಪ್ಯಾಡ್ ಏರ್-ಕಾನ್ ಯುನಿಟ್ ಅನ್ನು ಹೊಸ ಮಾದರಿಯಲ್ಲಿ ಬದಲಾವಣೆಯನ್ನು ಮಾಡುವ ಸಾಧ್ಯತೆಗಳಿದೆ.
ಹೊಸ ಹೋಂಡಾ ಜಾಝ್ ಕಾರಿನ ಡ್ಯಾಶ್ಬೋರ್ಡ್ ನಲ್ಲಿ ಸಣ್ಣ ಮಟ್ಟದ ಬದಲಾವಣೆಗಳನ್ನು ನಿರೀಕ್ಷಿಸುತ್ತೇವೆ. ಈ ಹೊಸ ಹೋಂಡಾ ಜಾಜ್ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ಪ್ಲೇಯನ್ನು ಕನೆಕ್ಟ್ ಆಗಿರುವ ಏಳು ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.
ಇದರೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ, ಕ್ರೂಸ್ ಕಂಟ್ರೋಲ್, ಸೆಮಿ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕ್ಲೈಮೆಂಟ್ ಕಂಟ್ರೋಲ್ ಮತ್ತು ಪುಶ್ ಬಟನ್ ಅನ್ನು ಹೊಂದಿರಲಿದೆ. ಹೊಸ ಹೋಂಡಾ ಜಾಝ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ.
ಈ ಕಾರಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್-ಏರ್ಬ್ಯಾಗ್ಗಳು, ಇಬಿಡಿಯೊಂದಿಗೆ ಎಬಿಎಸ್, ಪಾರ್ಕಿಂಗ್ ಸೆನ್ಸರ್ಗಳೊಂದಿಗೆ ರೇರ್ ಕ್ಯಾಮೆರಾ, ಐಎಸ್ಒಫಿಕ್ಸ್ ಮೌಂಟ್ಸ್ ಅನ್ನು ಹೊಂದಿರುತ್ತದೆ. ಈ ಕಾರಿನಲ್ಲಿ ಒಟ್ಟು ಆರು ಏರ್ಬ್ಯಾಗ್ಗಳನ್ನು ಅಳವಡಿಸಲಾಗುತ್ತದೆ.
ಹೂಸ ಹೋಂಡಾ ಜಾಝ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಐ20, ಫೋಕ್ಸ್ವ್ಯಾಗನ್ ಪೊಲೊ, ಮಾರುತಿ ಬಲೆನೊ, ಟೊಯೊಟಾ ಗ್ಲಾಂಝಾ ಮತ್ತು ಟಾಟಾ ಆಲ್ಟ್ರೋಜ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ..
ಹೊಸ ಹೋಂಡಾ ಜಾಝ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಈ ಕಾರನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಭಿವೃದ್ದಿಪಡಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಜಾಝ್ ಕಾರು ಹಿಂದಿನ ಮಾದರಿಗಿಂತ ತುಸು ಹೆಚ್ಚು ಬೆಲೆಯನ್ನು ಹೊಂದಿರಲಿದೆ. ಕಂಪನಿಯು ಈ ಹೊಸ ಕಾರಿನ ಬೆಲೆಯನ್ನು ಬಹಿರಂಗಪಡಿಸಿಲ್ಲ.
ಹೋಂಡಾ ಜಾಝ್ ಕಾರಿನ ಒಳ ಭಾಗದಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿರುವುದರಿಂದ ಆರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದಾಗಿದೆ. ಹೊಸ ಹೋಂಡಾ ಜಾಝ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.