2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಹೋಂಡಾ ಇಂಡಿಯಾ ಕಂಪನಿಯು ಇದೇ ತಿಂಗಳ ಕೊನೆಯಲ್ಲಿ 5ನೇ ತಲೆಮಾರಿನ ಸಿಟಿ ಸೆಡಾನ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನಲ್ಲಿ ಪೆಟ್ರೋಲ್ ಆವೃತ್ತಿಯನ್ನು ಮಾತ್ರವೇ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಭಾರತದಲ್ಲಿ ಸದ್ಯ ಬಿಎಸ್-6 ಎಮಿಷನ್ ನಿಯಯವು ಮುಂದಿನ ತಿಂಗಳು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಡೀಸೆಲ್ ಎಂಜಿನ್ ಉನ್ನತೀಕರಣ ಪ್ರಕ್ರಿಯೆ ತುಸು ವಿಳಂಬವಾಗುತ್ತಿದೆ. ಹೀಗಾಗಿ ಹೋಂಡಾ ಕಂಪನಿಯು 5ನೇ ತಲೆಮಾರಿನ ಸಿಟಿ ಆವೃತ್ತಿಯಲ್ಲಿ ಮೊದಲ ಹಂತವಾಗಿ ಪೆಟ್ರೋಲ್ ಮಾದರಿಯನ್ನು ಮಾತ್ರ ಮಾರಾಟ ಮಾಡುವ ಸಾಧ್ಯತೆಗಳಿದ್ದು, ಡೀಸೆಲ್ ಆವೃತ್ತಿಯು ತದನಂತರವಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ ಎನ್ನಲಾಗಿದೆ.

2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಲಭ್ಯವಾಗಿರುವ ಮಾಹಿತಿಗಳ ಪ್ರಕಾರಹೊಸ ಕಾರು ಆವೃತ್ತಿಯಲ್ಲಿ ಒಂದೇ ಒಂದು ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರವೇ ನೀಡಲಾಗಿದ್ದು, 119-ಬಿಎಚ್‌ಪಿ ಉತ್ಪಾದನಾ ಪ್ರೇರಿತ 1.5-ಲೀಟರ್ ಐ-ವಿಟೆಕ್ ಪೆಟ್ರೋಲ್ ಆವೃತ್ತಿಯನ್ನು ಮಾತ್ರವೇ ಬಿಡುಗಡೆಯ ಪಟ್ಟಿಯಲ್ಲಿ ಹೆಸರಿಸಲಾಗಿದೆ.

2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಹೊಸ ಪೆಟ್ರೋಲ್ ಮಾದರಿಯು ಈ ಹಿಂದಿನಂತೆ ವಿ, ವಿಎಕ್ಸ್ ಮತ್ತು ಜೆಡ್ಎಕ್ಸ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಥೈಲ್ಯಾಂಡ್‌ನಲ್ಲಿ ಕಳೆದ ಜನವರಿಯಲ್ಲಿ ಬಿಡುಗಡೆಯಾಗಿದ್ದ ಸಿಟಿ ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಜೊತೆಗೆ 1.5-ಲೀಟರ್ ಪೆಟ್ರೋಲ್ ಹೈಬ್ರಿಡ್, 1.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಭಾರತದಲ್ಲೂ ಹೊಸ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಆಯ್ಕೆಯು ಸಾಮಾನ್ಯ ಪೆಟ್ರೋಲ್ ಮಾದರಿಯ ಬಿಡುಗಡೆಯ ನಂತರವಷ್ಟೇ ಮಾರುಕಟ್ಟೆ ಪ್ರವೇಶಿಸಲಿವೆ.

2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಇನ್ನು 5ನೇ ತಲೆಮಾರಿನ ವಿನ್ಯಾಸಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಹೋಂಡಾ ಸಿಟಿ ಕಾರು ಹಳೆಯ ಆವೃತ್ತಿಗಿಂತಲೂ ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗುತ್ತಿದ್ದು, ಹೊರ ಮತ್ತು ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆಗೊಂಡಿರುವುದಲ್ಲದೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಗಮನಹರಿಸಲಾಗಿದೆ.

2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಹೊಸ ಕಾರಿನಲ್ಲಿ ಮುಂಭಾಗ ಗ್ರೀಲ್ ಡಿಸೈನ್ ಅನ್ನು ಸಿವಿಕ್ ಮತ್ತು ಅಮೆಜ್ ಕಾರಿನ ಡಿಸೈನ್ ಮಾದರಿಯನ್ನು ಸಮ್ಮಿಶ್ರಗೊಳಿಸಿ ಹೊಸ ಲುಕ್ ನೀಡಲಾಗಿದ್ದು, ಈ ಮೂಲಕ ಮಷ್ಟಷ್ಟು ಶಾರ್ಪ್ ಲುಕಿಂಗ್ ಪಡೆದುಕೊಂಡಿರುವ ಹೊಸ ಸಿಟಿ ಕಾರಿನಲ್ಲಿ ಎಲ್ಇಡಿ ಫ್ರೋಜೆಕ್ಟರ್ ಹೆಡ್‌ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್, ಗಮನಸೆಳೆಯುವ ಸ್ಪೋರ್ಟಿ ಸ್ಟೈಲ್ ಬಂಪರ್ ಪಡೆದುಕೊಂಡಿದೆ.

2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಹೊಸ ಕಾರಿನ ಒಳಭಾಗದ ಡಿಸೈನ್‌ಗಳು ಸಹ ಹಳೆಯ ಆವೃತ್ತಿಗಿಂತಲೂ ಸ್ಪೋರ್ಟಿ ಲುಕ್ ಪಡೆದುಕೊಂಡಿದ್ದು, ವಿವಿಧ ಪ್ರೀಮಿಯಂ ಸೌಲಭ್ಯಗಳೊಂದಿಗೆ ಆಲ್ ಬ್ಲ್ಯಾಕ್ ಇಂಟಿರಿಯರ್, 8.0-ಇಂಚಿನ ಟಚ್ ಸ್ಕ್ರೀನ್, ಲೆದರ್ ಹೊದಿಕೆಯುಳ್ಳ ಮಲ್ಟಿ ಫಂಕ್ಷನಲ್ ತ್ರಿ ಸ್ಪೋಕ್ ಸ್ಟಿರಿಂಗ್ ವೀಲ್ಹ್ ನೀಡಲಾಗಿದೆ.

2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಜೊತೆಗೆ ಹೊಸ ಕಾರಿನಲ್ಲಿ ಅಲ್ಯುನಿಯಂ ಪೆಡಲ್, ಇಕೋ ಡ್ರೈವ್ ಮೋಡ್, ಆಟೋಮ್ಯಾಟಿಕ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ, ಮಲ್ಟಿ ಇನ್‌ಫಾರ್ಮೆಷನ್ ಡಿಸ್ಪೈ, 17-ಇಂಚಿನ ಟೈರ್‌ನೊಂದಿಗೆ ಗಮನಸೆಳೆಯಲಿದ್ದು, ಕಾರಿನ ಉದ್ದಳತೆ ಕೂಡಾ ಗಮನಸೆಳೆಯುತ್ತದೆ.

2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಹಳೆಯ ಸಿಟಿ ಆವೃತ್ತಿಗಿಂತಲೂ ಹೊಸ ಕಾರು ಹೆಚ್ಚುವರಿಯಾಗಿ 100-ಎಂಎಂ ಉದ್ದ, 53-ಎಂಎಂ ಅಗಲವಾದ ವಿಸ್ತರಣೆಯನ್ನು ಹೊಂದಿದ್ದು, ಅನಕೂಲಕರ ಆಸನ ಸೌಲಭ್ಯ ಜೋಡಣೆಗಾಗಿ 11-ಎಂಎಂ ನಷ್ಟು ಕಡಿಮೆ ವೀಲ್ಹ್ ಬೇಸ್ ಮತ್ತು 28-ಎಂಎಂ ಎತ್ತರವನ್ನು ತಗ್ಗಿಸಲಾಗಿದೆ.

2020ರ ಸಿಟಿ ಸೆಡಾನ್ ಆವೃತ್ತಿಯಲ್ಲಿ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡಲಿದೆ ಹೋಂಡಾ

ಸದ್ಯಕ್ಕೆ ಹೊಸ ಕಾರಿನಲ್ಲಿ ಪೆಟ್ರೋಲ್ ಆವೃತ್ತಿಯು ಮಾತ್ರವೇ ಬಿಡುಗಡೆಯಾಗಲಿದ್ದು, ತದನಂತರವಷ್ಟೇ ಡೀಸೆಲ್ ಮತ್ತು ಟರ್ಬೋ ಪೆಟ್ರೋಲ್ ಆವೃತ್ತಿಯು ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ಎಂಜಿನ್ ಆಯ್ಕೆಯಿಂದಾಗಿ ಪೆಟ್ರೋಲ್ ಮಾದರಿಯು ಈ ಹಿಂದಿನ ಆವೃತ್ತಿಗಿಂತ ರೂ. 20 ಸಾವಿರದಿಂದ ರೂ.40 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದ್ದರೆ, ಡೀಸೆಲ್ ಎಂಜಿನ್ ಮಾದರಿಯು ರೂ.60 ಸಾವಿರದಿಂದ ರೂ.90 ಸಾವಿರದಷ್ಟು ದುಬಾರಿಯಾಗಿರಲಿದೆ.

Most Read Articles

Kannada
Read more on ಹೋಂಡಾ honda
English summary
Honda will launch 2020 City as a petrol-only model. Read in Kannada.
Story first published: Monday, March 16, 2020, 14:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X