ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಆವೃತ್ತಿಯ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಹೋಂಡಾ ಕಂಪನಿಯು ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಆವೃತ್ತಿಯ ಬುಕ್ಕಿಂಗ್ ಅನ್ನು ಅಧಿಕೃತವಾಗಿ ಸ್ವೀಕರಿಸಲು ಪ್ರಾರಂಭಿಸಿದೆ.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿಗಾಗಿ ರೂ.21 ಸಾವಿರ ಪಾವತಿಸಿ ಬುಕ್ಕಿಂಗ್ ಅನ್ನು ಮಾಡಿಕೊಳ್ಳಬಹುದಾಗಿದೆ. ಶೀಘ್ರದಲ್ಲೇ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಬೆಲೆಯನ್ನು ಘೋಷಿಸಬಹುದು. ಹೋಂಡಾ ಕಂಪನಿಯ ಹಿಂದಿನ ಡಬ್ಲ್ಯುಆರ್‍-ವಿ ಮಾದರಿಗೆ ಹೊಸ ಫೇಸ್‍‍ಲಿಫ್ಟ್ ಕಾರನ್ನು ಹೋಲಿಸಿದರೆ ಹಲವಾರು ಬದಲಾವಣೆಗಳಾಗಿರುವುದನ್ನು ಕಾಣಬಹುದು. ಫೇಸ್‍‍ಲಿಫ್ಟ್ ಆವೃತ್ತಿಯಲ್ಲಿ ಹೊಸ ಬಿ‍ಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಇದರ ಜೊತೆಗೆ ವಿನ್ಯಾಸ ಹಾಗೂ ಫೀಚರ್‍‍ಗಳನ್ನು ಸಹ ನವೀಕರಿಸಲಾಗಿದೆ.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹೊಸ ಕಾರಿನ ಗ್ರಿಲ್ ಹಾಗೂ ಬಂಪರ್‍‍ಗಳು ಹೊಸ ಲುಕ್ ಅನ್ನು ಹೊಂದಿದೆ. ಇದರ ಜೊತೆಗೆ ಎಲ್‍ಇ‍‍ಡಿ ಟೇಲ್‍‍ಲೈಟ್ ಹಾಗೂ ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ ಹೊಂದಿರುವ ಫಾಗ್‍ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಫಾಗ್ ಲ್ಯಾಂಪ್ ಹೌಸಿಂಗ್‍‍ಗಳು ಕಪ್ಪು ಬಣ್ಣವನ್ನು ಹೊಂದಿವೆ. ಇಂಟಿರಿಯರ್ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗದೇ ಇದ್ದರೂ ಫೇಸ್‍‍ಲಿಫ್ಟ್ ಆವೃತ್ತಿಯಲ್ಲಿ ಹೊಸ ಫ್ಯಾಬ್ರಿಕ್ ಸೀಟುಗಳನ್ನು ಅಳವಡಿಸಲಾಗುವುದು.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಇವುಗಳ ಜೊತೆಗೆ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್‍‍‍ಗಳನ್ನು ನೀಡಲಾಗುವುದು. ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಹೋಂಡಾ ಡಬ್ಲ್ಯು‍ಆರ್-ವಿಯಲ್ಲಿರುವ ಎಲೆಕ್ಟ್ರಾನಿಕ್ ಸನ್‍‍ರೂಫ್ ಹಾಗೂ ಕ್ರೂಸ್ ಕಂಟ್ರೋಲ್‍‍ಗಳನ್ನು ಫೇಸ್‍‍ಲಿಫ್ಟ್ ಆವೃತ್ತಿಯಲ್ಲಿಯೂ ಸಹ ನೀಡಲಾಗುವುದು.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಆವೃತ್ತಿಯನ್ನು 1.2 ಲೀಟರಿನ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಲಾಗುವುದು. ಹಳೆಯ ತಲೆಮಾರಿನ ಕಾರಿನಂತೆ ಫೇಸ್‍‍ಲಿಫ್ಟ್ ಕಾರಿನಲ್ಲಿಯೂ ಸಹ 5 ಸ್ಪೀಡ್ ಹಾಗೂ 6 ಸ್ಪೀಡಿನ ಗೇರ್‍‍ಬಾಕ್ಸ್ ಆಯ್ಕೆಗಳನ್ನು ನೀಡಲಾಗುವುದು.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೊಸ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾತಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300, ಹ್ಯುಂಡೈ ವೆನ್ಯೂ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಖರೀದಿಗೆ ಅಧಿಕೃತ ಬುಕ್ಕಿಂಗ್ ಆರಂಭ

ಹೋಂಡಾ ಕಂಪನಿಯು ಹೊಸ ಸಿಟಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇದರೊಂದಿಗೆ ಶೀಘ್ರದಲ್ಲೇ ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರನ್ನು ಅನಾವರಣಗೊಳಿಸಿ ಬೆಲೆಯನ್ನು ಘೋಷಿಸಲಿದೆ.

Most Read Articles

Kannada
Read more on ಹೋಂಡಾ honda
English summary
Honda WR-V facelift bookings open. Read in Kannada.
Story first published: Friday, March 6, 2020, 19:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X