ಎಲೆಕ್ಟ್ರಿಕ್ ರೂಪದಲ್ಲಿ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಜನರಲ್ ಮೋಟಾರ್ಸ್ ಕಂಪನಿಯು ತನ್ನ ಹಮ್ಮರ್ ಎಸ್‍‍ಯುವಿಯನ್ನು ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಆದರೆ ಈ ಬಾರಿ ಜನಪ್ರಿಯ ಹಮ್ಮರ್ ಎಸ್‍‍ಯುವಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಪರಿಚಯಿಸಲಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮತ್ತೊಮ್ಮೆ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಈ ಹೊಸ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಮುಂದಿನ ಮೇ 20ರಂದು ಅನಾವರಣಗೊಳಿಸಲು ಜಿ‍ಎಂಸಿಯು ನಿರ್ಧರಿಸಿದೆ. ಹಲವು ಪ್ರಮುಖ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳನ್ನು ಎಲೆಕ್ಟ್ರಿಕ್ ರೂಪಾಂತರವಾಗಿ ಪರಿವರ್ತಿಸುತ್ತಿವೆ. ಇದರಲ್ಲಿ ಪ್ರಮುಖವಾಗಿ ಸೂಪರ್‍‍ಬೈಕ್ ಮತ್ತು ಸೂಪರ್‍‍‍‍‍ಕಾರುಗಳನ್ನು ಕೂಡ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಕೆಲವು ಕಂಪನಿಗಳು ತಮ್ಮ ದೊಡ್ಡ ಎಸ್‍‍ಯುವಿಗಳನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಚಿಂತಿಸುತ್ತಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮತ್ತೊಮ್ಮೆ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಹಮ್ಮರ್ ಎಲೆಕ್ಟ್ರಿಕ್ ಆವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಹಮ್ಮರ್ ಎಲೆಕ್ಟ್ರಿಕ್ ಎಸ್‍‍ಯುವಿಯ ಟೀಸರ್ ವೀಡಿಯೋವನ್ನು ಜಿ‍ಎಂಸಿ ಬಿಡುಗಡೆಗೊಳಿಸಿದೆ. ಹಮ್ಮರ್ ಎಸ್‍‍ಯುವಿಯ ವಿನ್ಯಾಸವು ಹಿಂದಿನ ಮಾದರಿಗಿಂತ ಆಕರ್ಷಕವಾಗಿರಲಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮತ್ತೊಮ್ಮೆ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಈ ಟೀಸರ್‍‍ನಲ್ಲಿ ಹೊಸ ಎಸ್‍‍ಯುವಿಯು ಶಾರ್ಪ್ ಲೈನ್ ವಿನ್ಯಾಸವನ್ನು ಹೊಂದಿದೆ. ಹಳೆಯ ಮಾದರಿಯಿಂದ ಹೊಸ ಮಾದರಿಯು ಪ್ರತ್ಯೇಕಿಸುವ ಅಂಶವೆಂದರೆ ಎಲ್‍ಇಡಿ ಲೈಟಿಂಗ್, ಹೆಡ್‍‍ಲ್ಯಾಂಪ್‍, ಗ್ರಿಲ್ ಮತ್ತು ಡೇ ಟೈಮ್ ರನ್ನಿಂಗ್ ಲೈಟ್ ಆಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮತ್ತೊಮ್ಮೆ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಎಲೆಕ್ಟ್ರಿಕ್ ಹಮ್ಮರ್ ಎಸ್‍ಯುವಿಯ ವಿನ್ಯಾಸ ಮತ್ತು ಸ್ಟೈಲಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಹೊಸ ಹಮ್ಮರ್ ಆಫ್-ರೋಡ್ ಎಸ್‍‍ಯುವಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮತ್ತೊಮ್ಮೆ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಹಮ್ಮರ್ ಸರಳವಾದ ಆಫ್-ರೋಡ್ ಎಸ್‍‍ಯುವಿಯಾಗಿದೆ. ಈ ಎಸ್‍‍ಯುವಿಯು ಕಠಿಣವಾದ ಅಡೆತಡೆಗಳಲ್ಲಿ ಸುಲಭವಾಗಿ ಸಾಗುತ್ತದೆ. ಆಫ್ ರೋಡ್ ವಾಹನ ಪ್ರಿಯರ ಮೆಚ್ಚಿನ ಎಸ್‍‍ಯುವಿಯಾಗಿದೆ. ಅಮೆರಿಕಾದ ಸೈನ್ಯ ಯುಎಸ್ ಸೈನ್ಯ, ಯುಎಸ್ ಮೆರೈನ್ ಕಾಪ್ಸ್ ಮತ್ತು ಇತರ ಅರೆಸೈನಿಕ ಪಡೆಗಳಿಗೂ ಇದು ಮೆಚ್ಚಿನ ಎಸ್‍ಯುವಿಯಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮತ್ತೊಮ್ಮೆ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಅಮೆರಿಕಾದ ಪಡೆಗಳು ಕಾರ್ಯಾಚರಣೆಗಾಗಿ ವಿಶೇಷವಾಗಿ ತಯಾರಿಸಿ ಹಮ್ಮರ್ ಅನ್ನು ಬಳಸುತ್ತಿದ್ದರು. ಹಮ್ಮರ್ ಎಸ್‍‍ಯುವಿಯನ್ನು ಮೊದಲ ಬಾರಿಗೆ 1992ರಲ್ಲಿ ಬಿಡುಗಡೆ ಮಾಡಿದ್ದರು. ಹಮ್ಮರ್‍‍ನ ಉತ್ಪಾದನೆಯನ್ನು 2010ರಲ್ಲಿ ಸ್ಥಗಿತಗೊಳಿಸಲಾಗಿತ್ತು.

ಎಲೆಕ್ಟ್ರಿಕ್ ರೂಪದಲ್ಲಿ ಮತ್ತೊಮ್ಮೆ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಇಂದಿಗೂ ಹಳೆಯ ಹಮ್ಮರ್ ಎಸ್‍‍ಯುವಿಯು ಉತ್ತಮ ಸ್ಥಿತಿಯಲ್ಲಿ ಚಲಿಸುತ್ತಿದೆ. ಈ ಅವಧಿಯಲ್ಲಿ ಮಾರಾಟವಾದ ಹಮ್ಮರ್‍‍ಗಳನ್ನು ಅಮೇರಿಕಾದ ಸೈನ್ಯ ಬಳಿಸುತ್ತಿದೆ. ಈ ಎಸ್‍ಯುವಿಯಲ್ಲಿ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮತ್ತೊಮ್ಮೆ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಈ ಎಂಜಿನ್ ಅಪಾರ ಪ್ರಮಾಣದ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದನ್ನು ಪರಿಸರವಾದಿಗಳು ತೀವ್ರವಾಗಿ ಟೀಕಿಸಿದರು. ಈ ಟೀಕೆಗಳಿಂದ ಹೊರಗೆ ಬರಲು ಹಮ್ಮರ್ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಜಿ‍ಎಂಸಿ ಕಂಪನಿಯು ಹಮ್ಮರ್ ಎಲೆಕ್ಟ್ರಿಕ್ ಎಸ್‍‍ಯುವಿಯನ್ನು ಅಭಿವೃದ್ದಿಪಡಿಸುವುದರಲ್ಲಿ ನಿರತವಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮತ್ತೊಮ್ಮೆ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಎಲೆಕ್ಟ್ರಿಕ್ ಹಮ್ಮರ್ ಎಸ್‍‍ಯುವಿಯ ಮೋಟಾರ್ 1,000 ಬಿ‍‍ಹೆಚ್‍‍ಪಿ ಪವರ್ ಮತ್ತು 15,000 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಷ್ಟು ಪವರ್ ಅನ್ನು ಉತ್ಪಾದಿಸಲು ದೊಡ್ಡ ಬ್ಯಾಟರಿ ಪ್ಯಾಕ್‍‍ಗಳನ್ನು ಅಳವಡಿಸಲಾಗಿದೆ.

ಕೇವಲ 0-100 ಕಿ.ಮೀ ಅನ್ನು ಕೇವಲ 3 ಸೆಕೆಂಡು‍‍ಗಳಲ್ಲಿ ಉತ್ಪಾದಿಸುತ್ತದೆ. ಮುಂದಿನ 2-3 ತಿಂಗಳುಗಳಲ್ಲಿ ಎಲೆಕ್ಟ್ರಿಕ್ ಹಮ್ಮರ್ ಎಸ್‍‍ಯುವಿಯ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಬಹುದು. ಹಮ್ಮರ್ ಹೆಚ್ಚು ಜನಪ್ರಿಯ ಎಸ್‍‍ಯುವಿಯಾಗಿದೆ.

ಎಲೆಕ್ಟ್ರಿಕ್ ರೂಪದಲ್ಲಿ ಮತ್ತೊಮ್ಮೆ ಲಗ್ಗೆ ಇಡಲಿದೆ ಜನಪ್ರಿಯ ಹಮ್ಮರ್ ಎಸ್‍‍ಯುವಿ

ಹಮ್ಮರ್‍ ಎಸ್‍‍ಯುವಿಯು ಹೆಚ್ಚು ತೂಕ , ಇಂಧನ ದಕ್ಷತೆ ಅಂಕಿ ಅಂಶಗಳು, ಪವರ್ ಮತ್ತು ಟಾರ್ಕ್ ಉತ್ಪಾದನೆಯು ಅಂಕಿ ಅಂಶಗಳು ಹೆಚ್ಚಿದೆ. ಪವರ್‍‍ಫುಲ್ ಹಮ್ಮರ್ ಎಸ್‍‍ಯುವಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗುವ ಮೂಲಕ ಪರಿಸರ ಸ್ನೇಹಿಯಾಗಿರಲಿದೆ.

Most Read Articles

Kannada
Read more on ಹಮ್ಮರ್ hummer
English summary
Hummer EV Teaser Video Released: GMC Confirms May 2020 Launch. Read in Kannada.
Story first published: Monday, February 3, 2020, 16:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X