ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಒರಾ

ಹ್ಯುಂಡೈ ಕಂಪನಿಯು ತನ್ನ ಹೊಸ ಒರಾ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೊದಲು ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಒರಾ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಜನವರಿ 21ರಂದು ಬಿಡುಗಡೆಗೊಳಿಸಲಾಗುತ್ತದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಒರಾ

ಒರಾ ಕಾಂಪ್ಯಾಕ್ಟ್ ಸೆಡಾನ್ ಕಾರಿನ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ. ರೂ.10,000 ಪಾವತಿಸಿ ಒರಾ ಕಾರ್ ಅನ್ನು ಬುಕ್ ಮಾಡಬಹುದಾಗಿದೆ. ಈ ಕಾರಿನ ವಿತರಣೆಯನ್ನು ಕಾರು ಬಿಡುಗಡೆಯಾದ ತಕ್ಷಣ ನೀಡಲಾಗುವುದು. ಹ್ಯುಂಡೈ ಒರಾ ಗ್ರಾಂಡ್ ಐ10 ನಿಯೋಸ್‍‍ನಲ್ಲಿರುವಂತಹ ಕ್ಯಾಬಿನ್ ಲೇ‍ಔಟ್ ಅನ್ನು ಹೊಂದಿದೆ. ನಿಯೋಸ್ ಕಾರಿಗೆ ಹೋಲಿಸಿದರೆ ಒರಾ ಕಾರು ಹೆಚ್ಚು ಡಾರ್ಕ್ ಬಣ್ಣವನ್ನು ಹೊಂದಿರಲಿದೆ. ಹ್ಯುಂಡೈ ಒರಾ ಕ್ಯಾಬಿನ್ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿರಲಿದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಒರಾ

ಹೊಸ ಹ್ಯುಂಡೈ ಒರಾ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ರಶ್‍‍ಲೇನ್ ಬಹಿರಂಗಪಡಿಸಿದೆ. ಡ್ಯಾಶ್‍‍ಬೋರ್ಡ್ ಮೇಲೆ ಡಾರ್ಕ್ ಶೇಡ್‍‍ಗಳಿರಲಿದ್ದು, ಫ್ಯಾಬ್ರಿಕ್ ಅಪ್‍‍ಹೋಲೆಸ್ಟರಿ ಸೀಟುಗಳು ಬೀಜ್ ಬಣ್ಣವನ್ನು ಹೊಂದಿವೆ. ಸೆಂಟ್ರಲ್ ಕಂಸೋಲ್‍‍ನಲ್ಲಿರುವ ಡ್ಯಾಶ್‍‍ಬೋರ್ಡ್ 8.0 ಇಂಚಿನ ಆಪಲ್ ಕಾರ್‍‍ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗಳಿಗೆ ಹೊಂದಿಕೊಳ್ಳುವ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹೊಂದಿದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಒರಾ

ಈ ಕ್ಯಾಬಿನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿ 5.3 ಇಂಚಿನ ಡಿಜಿಟಲ್ ಡಿಸ್‍‍ಪ್ಲೇ ಹಾಗೂ ಅನಲಾಗ್ ಟಾಚೋಮೀಟರ್‍‍ಗಳನ್ನು ಹೊಂದಿದೆ. ಇವುಗಳನ್ನು ಗ್ರಾಂಡ್ ಐ10 ನಿಯೋಸ್ ಕಾರಿನಲ್ಲಿಯೂ ಸಹ ಅಳವಡಿಸಲಾಗಿದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಒರಾ

ಹ್ಯುಂಡೈ ಒರಾ ಕಾರಿನಲ್ಲಿ ವೈರ್‍‍ಲೆಸ್ ಚಾರ್ಜಿಂಗ್, ರೇರ್ ಎಸಿ ವೆಂಟ್ಸ್, ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಇಬಿಡಿ ಹೊಂದಿರುವ ಎ‍‍ಬಿ‍ಎಸ್, ಏರ್‍‍ಬ್ಯಾಗ್ ಸೇರಿದಂತೆ ಹಲವಾರು ಫೀಚರ್‍‍ಗಳಿವೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಒರಾ

ಒರಾ ಕಾರ್ ಅನ್ನು ಮೂರು ರೀತಿಯ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುವುದು. ಈ ಎಲ್ಲಾ ಮೂರು ಎಂಜಿನ್‍‍ಗಳು ಬಿ‍ಎಸ್ 6 ಆಗಿವೆ. ಹ್ಯುಂಡೈ ವೆನ್ಯೂ ಕಾರಿನಲ್ಲೂ ಇದೇ ರೀತಿಯ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಒರಾ

ಇದರಲ್ಲಿ 1.2 ಲೀಟರಿನ ಪೆಟ್ರೋಲ್ ಎಂಜಿನ್ 82 ಬಿ‍‍ಹೆಚ್‍ಪಿ ಪವರ್ ಹಾಗೂ 114 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 100 ಬಿ‍‍ಹೆಚ್‍‍ಪಿ ಪವರ್ ಹಾಗೂ 172 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.2 ಲೀಟರಿನ ಡೀಸೆಲ್ ಎಂಜಿನ್ 75 ಬಿ‍‍ಹೆಚ್‍‍ಪಿ ಪವರ್ ಹಾಗೂ 190 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಒರಾ

ಈ ಎಲ್ಲಾ ಎಂಜಿನ್‍‍ಗಳಲ್ಲೂ 5 ಸ್ಪೀಡಿನ ಸ್ಟಾಂಡರ್ಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಹ್ಯುಂಡೈ ಕಂಪನಿಯು 1.2 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ನಲ್ಲಿ ಎ‍ಎಂಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ. 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್‍‍ನಲ್ಲಿ ಎ‍ಎಂಟಿ ಗೇರ್‍‍ಬಾಕ್ಸ್ ಅಳವಡಿಸುವುದಿಲ್ಲ.

ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹ್ಯುಂಡೈ ಒರಾ

ಒರಾ ಕಾರು ಬಿಡುಗಡೆಯಾದ ನಂತರ ಹ್ಯುಂಡೈನ ಮತ್ತೊಂದು ಕಾರ್ ಆದ ಎಕ್ಸೆಂಟ್ ಕಾರ್ ಅನ್ನು ಸ್ಥಗಿತಗೊಳಿಸಲಾಗುವುದು. ಈ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.6 ಲಕ್ಷಗಳಿಂದ ರೂ.8 ಲಕ್ಷಗಳವರೆಗೆ ಇರಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಒರಾ ಬಿಡುಗಡೆಯಾದ ಬಳಿಕ ಹೋಂಡಾ ಅಮೇಜ್, ಫೋರ್ಡ್ ಆಸ್ಪೈರ್ ಮತ್ತು ಟಾಟಾ ಟೀಗೊರ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Hyundai Aura interiors spied undisguised ahead of launch. Read in Kannada
Story first published: Sunday, January 19, 2020, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X