7 ಸೀಟರ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಎಸ್‌ಯವಿ

ಹ್ಯುಂಡೈ ಮೋಟಾರ್ಸ್ ಕಂಪನಿಯು ಕಳೆದ ತಿಂಗಳ ಹಿಂದಷ್ಟೇ ನ್ಯೂ ಜನರೇಷನ್ ಕ್ರೆಟಾ(5 ಸೀಟರ್) ಮಾದರಿಯನ್ನು ಪ್ರದರ್ಶನಗೊಳಿಸಿ ಬಿಡುಗಡೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

7 ಸೀಟರ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಎಸ್‌ಯವಿ

ಕ್ರೆಟಾ 7 ಸೀಟರ್ ಮಾದರಿಯನ್ನು ಈ ಹಿಂದೆ ಭಾರತದಲ್ಲೂ ಕೆಲವು ಬಾರಿ ರೋಡ್ ಟೆಸ್ಟಿಂಗ್ ನಡೆಸಿರುವ ಹ್ಯುಂಡೈ ಕಂಪನಿಯು ಇದೀಗ ದಕ್ಷಿಣ ಕೊರಿಯಾದಲ್ಲಿ ಉತ್ಪಾದನಾ ಆವೃತ್ತಿಯನ್ನು ಟೆಸ್ಟಿಂಗ್ ಮಾಡುತ್ತಿದ್ದು, ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ. ಇದಲ್ಲದೇ ಹ್ಯುಂಡೈ ಕಂಪನಿಯ ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಹೊಸ ಎಸ್‌ಯುವಿ ಮತ್ತು ಎಂಪಿವಿ ಕಾರುಗಳ ಬಿಡುಗಡೆ ಮಾಡುತ್ತಿದ್ದು, ಕ್ರೆಟಾ 7 ಸೀಟರ್ ಕಾರು ಮಾದರಿಯೇ ಹೊಸ ಹೆಸರಿನೊಂದಿಗೆ ಬಿಡುಗಡೆಯಾಗಬಹುದು.

7 ಸೀಟರ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಎಸ್‌ಯವಿ

ಹೊಸ ಆಮದು ನೀತಿ ಅಡಿ ಐಷಾರಾಮಿ ಎಸ್‌ಯುವಿ ಮತ್ತು ಎಂಪಿವಿ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ ಕಂಪನಿಯು ಮಾರುಕಟ್ಟೆ ವಿಸ್ತರಣೆಗಾಗಿ ಪ್ರೀಮಿಯಂ ಮಾದರಿಯ ಎಂಪಿವಿ ಮತ್ತು ಎಸ್‌ಯುವಿ ಕಾರುಗಳ ಮಾರಾಟದತ್ತ ಎದುರು ನೋಡುತ್ತಿದೆ.

7 ಸೀಟರ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಎಸ್‌ಯವಿ

ಮಾರುಕಟ್ಟೆಯಲ್ಲಿ ಸದ್ಯ ಭಾರೀ ಜನಪ್ರಿಯತೆ ಹೊಂದಿರುವ ಟೊಯೊಟಾ ಫಾರ್ಚೂನರ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳಿಗೆ ಪೈಪೋಟಿಯಾಗಿ ಹ್ಯುಂಡೈ ಹೊಸ ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸಲಿವೆ.

7 ಸೀಟರ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಎಸ್‌ಯವಿ

ಹೊಸ ಕಾರುಗಳ ಬಿಡುಗಡೆ ಕುರಿತಂತೆ ಕ್ರೆಟಾ ನ್ಯೂ ಜನರೇಷನ್ ಆವೃತ್ತಿಯ ಬಿಡುಗಡೆಯ ವೇಳೆ ಮಾಹಿತಿ ಹಂಚಿಕೊಂಡಿದ್ದ ಹ್ಯುಂಡೈ ಕಂಪನಿಯು ಪ್ರೀಮಿಯಂ ಮಾದರಿಯ ಎಂಪಿವಿ ಮತ್ತು ಎಸ್‌ಯುವಿ ಕಾರುಗಳ ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸುತ್ತಿರುವುದಾಗಿ ಹೇಳಿಕೊಂಡಿತ್ತು. ಭಾರತದಲ್ಲಿ ಪ್ರೀಮಿಯಂ ಆವೃತ್ತಿಗಳ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಇರುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಸಂಸ್ಥೆಯು ಯುರೋಪ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಲ್ಲಿರುವ ಫುಲ್ ಸೈಜ್ 7 ಸೀಟರ್ ಎಸ್‌ಯುವಿ ಮತ್ತು 9 ಸೀಟರ್ ಎಂಪಿವಿ ಕಾರನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ.

7 ಸೀಟರ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಎಸ್‌ಯವಿ

ಮಾಹಿತಿಗಳ ಪ್ರಕಾರ, ಎಸ್‌ಯುವಿ ಮಾದರಿಯಾಗಿ ಪಾಲಿಸೆಡ್ ಮತ್ತು ಎಂಪಿವಿ ಆವೃತ್ತಿಯಾಗಿ ಸ್ಟಾರೆಕ್ಸ್ ಕಾರುಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಪಾಲಿಸೆಡ್ ಕಾರು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಲಿದ್ದರೆ ಸ್ಟಾರೆಕ್ಸ್ ಎಂಪಿವಿ ಕಾರು ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಕಿಯಾ ಕಾರ್ನಿವಾಲ್ ಕಾರುಗಳ ನಡುವಿನ ಸ್ಥಾನದೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

7 ಸೀಟರ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಎಸ್‌ಯವಿ

ಹೀಗಾಗಿ ಹೊಸ ಕಾರುಗಳು ಭಾರತದಲ್ಲಿ ಉತ್ತಮ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತಂದಿರುವ ಆಮದು ನೀತಿಯಲ್ಲಿನ ತಿದ್ದುಪಡಿ ಕೂಡಾ ಹ್ಯುಂಡೈ ಸೇರಿದಂತೆ ಹಲವು ವಿದೇಶಿ ವಾಹನ ಕಂಪನಿಗಳಿಗೆ ವರದಾನವಾಗಿದೆ.

7 ಸೀಟರ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಎಸ್‌ಯವಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಆಮದು ನೀತಿಯಡಿ ವಿದೇಶಿ ಮಾರುಕಟ್ಟೆಗಳಿಂದ ವಾಹನ ಕಂಪನಿಗಳು ತಮ್ಮದೆ ಉತ್ಪಾದನೆಯ 2500 ವಾಹನಗಳನ್ನು ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಬಹುದಾಗಿದ್ದು, ಇದೀಗ ಹ್ಯುಂಡೈ ಸೇರಿದಂತೆ ಹಲವು ಕಾರು ಕಂಪನಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಕೆಲವು ಕಾರು ಮಾದರಿಗಳನ್ನು ಸೀಮಿತ ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿವೆ.

7 ಸೀಟರ್ ವರ್ಷನ್‌ನಲ್ಲೂ ಬಿಡುಗಡೆಯಾಗಲಿದೆ ಹ್ಯುಂಡೈ ಕ್ರೆಟಾ ಎಸ್‌ಯವಿ

ಮಾಹಿತಿಗಳ ಪ್ರಕಾರ, ಹೊಸ ಕಾರುಗಳನ್ನು 2021-22 ಹಣಕಾಸು ವರ್ಷದ ಅವಧಿಯೊಳಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಕಂಪನಿಯು ಬಿಡುಗಡೆಗೂ ಎಂಜಿನ್ ಆಯ್ಕೆ ಮತ್ತು ಬೆಲೆ ವಿಚಾರದಲ್ಲಿ ಮಾರುಕಟ್ಟೆ ಅಧ್ಯಯನವನ್ನು ಪರಿಸಿಲಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

Image Courtesy: Palisade Owners Club Korea

Most Read Articles

Kannada
English summary
Most anticipated Hyundai Creta 7-seater model first spy shot image has surfaced online. Read in Kannada.
Story first published: Wednesday, April 1, 2020, 20:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X