ಜುಲೈ ತಿಂಗಳ ಕಾರು ಮಾರಾಟದಲ್ಲಿ ಕಿಯಾ ಸೆಲ್ಟೊಸ್ ಹಿಂದಿಕ್ಕಿದ ಹ್ಯುಂಡೈ ಕ್ರೆಟಾ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ತಮ್ಮದೆ ಆದ ಜನಪ್ರಿಯತೆ ಹೊಂದಿರುವ ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಬಿಎಸ್-6 ಎಂಜಿನ್ ಸೇರಿದಂತೆ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಕ್ರೆಟಾ ಮಾದರಿಯು ಮೊದಲ ಬಾರಿಗೆ ಸೆಲ್ಟೊಸ್ ಹಿಂದಿಕ್ಕಿ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದೆ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಕಿಯಾ ಸೆಲ್ಟೊಸ್ ಹಿಂದಿಕ್ಕಿದ ಹ್ಯುಂಡೈ ಕ್ರೆಟಾ

ತಾಂತ್ರಿಕವಾಗಿ ಮತ್ತು ಬೆಲೆ ವಿಚಾರದಲ್ಲಿ ಎರಡು ಕಾರುಗಳು ಸಾಕಷ್ಟು ಪೈಪೋಟಿ ಹೊಂದಿದ್ದು, ಗ್ರಾಹಕರ ಆಯ್ಕೆಯಲ್ಲಿ ಈ ಬಾರಿ ಕ್ರೆಟಾ ಕಾರು ಸೆಲ್ಟೊಸ್ ಹಿಂದಿಕ್ಕಿದೆ. ಜೂನ್ ಅವಧಿಯಲ್ಲಿ ಕ್ರೆಟಾ ಕಾರು ಒಟ್ಟು 11,549 ಯುನಿಟ್ ಮಾರಾಟದೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ವಿಟಾರಾ ಬ್ರೆಝಾ ನಂತರ ಎರಡನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿರುವ ಕಿಯಾ ಸೆಲ್ಟೊಸ್ ಕಾರು ಇದೇ ಅವಧಿಯಲ್ಲಿ 8,270 ಯನಿಟ್ ಮಾರಾಟ ಮಾಡಿದೆ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಕಿಯಾ ಸೆಲ್ಟೊಸ್ ಹಿಂದಿಕ್ಕಿದ ಹ್ಯುಂಡೈ ಕ್ರೆಟಾ

ಸತತ ಮೂರು ತಿಂಗಳಿನಿಂದ ಕಾರು ಮಾರಾಟದಲ್ಲಿ ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ತೀವ್ರ ಪೈಪೋಟಿ ಶುರುವಾಗಿದ್ದು, ಎರಡು ಕಾರಿನಲ್ಲೂ ಎಂಜಿನ್ ಆಯ್ಕೆ ಮತ್ತು ಫೀಚರ್ಸ್, ಬೆಲೆ ಕೂಡಾ ಅಷ್ಟಾಗಿ ವ್ಯತ್ಯಾಸಗಳಿಲ್ಲ ಎನ್ನುವುದು ಗಮನಸರಿಸಬೇಕಾದ ಅಂಶ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಕಿಯಾ ಸೆಲ್ಟೊಸ್ ಹಿಂದಿಕ್ಕಿದ ಹ್ಯುಂಡೈ ಕ್ರೆಟಾ

ಹ್ಯುಂಡೈ ಸಹೋದರ ಸಂಸ್ಥೆಯಾದ ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೊಸ್‌ನಲ್ಲಿ ಬಳಕೆ ಮಾಡುತ್ತಿರುವ ಎಂಜಿನ್ ಆಯ್ಕೆಯನ್ನೇ ಕ್ರೆಟಾದಲ್ಲೂ ಹಂಚಿಕೊಂಡಿದ್ದು, ಆದರೂ ಕೂಡಾ ಬ್ರಾಂಡ್ ಮೌಲ್ಯದ ಆಧಾರದ ಮೇಲೆ ಕ್ರೆಟಾ ಕಾರಿಗೆ ಹೆಚ್ಚು ಬೇಡಿಕೆ ಹರಿದುಬರುತ್ತಿದೆ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಕಿಯಾ ಸೆಲ್ಟೊಸ್ ಹಿಂದಿಕ್ಕಿದ ಹ್ಯುಂಡೈ ಕ್ರೆಟಾ

ಕ್ರೆಟಾ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 17.20 ಲಕ್ಷ ಬೆಲೆ ಪಡೆದುಕೊಂಡಿದೆ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಕಿಯಾ ಸೆಲ್ಟೊಸ್ ಹಿಂದಿಕ್ಕಿದ ಹ್ಯುಂಡೈ ಕ್ರೆಟಾ

ಕಿಯಾ ಸೆಲ್ಟೊಸ್ ಕೂಡಾ ಕ್ರೆಟಾ ಮಾದರಿಯುಲ್ಲೇ ಎಂಜಿನ್ ಆಯ್ಕೆ ಹೊಂದಿದ್ದು, ಸೆಲ್ಟೊಸ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.34 ಲಕ್ಷ ಬೆಲೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಜುಲೈ ತಿಂಗಳ ಕಾರು ಮಾರಾಟದಲ್ಲಿ ಕಿಯಾ ಸೆಲ್ಟೊಸ್ ಹಿಂದಿಕ್ಕಿದ ಹ್ಯುಂಡೈ ಕ್ರೆಟಾ

ಕ್ರೆಟಾ ಕಾರು ಸದ್ಯ ಹಳೆಯ ಮಾದರಿಗಿಂತಲೂ ಹೆಚ್ಚು ಬದಲಾವಣೆಯೊಂದಿಗೆ ರಸ್ತೆಗಿಳಿದಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಹೊಸ ಕಾರು ಕಳೆದ ಮಾರ್ಚ್‌ನಲ್ಲಿ ಬಿಡುಗಡೆಗೊಂಡ ನಂತರ ಇದುವರೆಗೆ ಸುಮಾರು 60 ಸಾವಿರ ಬುಕ್ಕಿಂಗ್ ಪಡೆದುಕೊಂಡಿದೆ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಕಿಯಾ ಸೆಲ್ಟೊಸ್ ಹಿಂದಿಕ್ಕಿದ ಹ್ಯುಂಡೈ ಕ್ರೆಟಾ

ಇನ್ನು ಹ್ಯುಂಡೈ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕ್ರೆಟಾ ಕಾರಿನಲ್ಲಿ ಹೊಸದಾಗಿ 7 ಸೀಟರ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಸಾಮಾನ್ಯ ಕಾರಿನ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಮೂರು ಸಾಲಿನ ಆಸನ ಸೌಲಭ್ಯವನ್ನು ಪಡೆದುಕೊಳ್ಳಲಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಜುಲೈ ತಿಂಗಳ ಕಾರು ಮಾರಾಟದಲ್ಲಿ ಕಿಯಾ ಸೆಲ್ಟೊಸ್ ಹಿಂದಿಕ್ಕಿದ ಹ್ಯುಂಡೈ ಕ್ರೆಟಾ

2+3+2 ಆಸನ ಸೌಲಭ್ಯ ಪಡೆದುಕೊಳ್ಳಲಿರುವ 7 ಸೀಟರ್ ಕ್ರೆಟಾ ಮಾದರಿಯು ಸಾಮಾನ್ಯ ಕಾರಿನಲ್ಲಿರುವಂತೆಯೇ ಎಂಜಿನ್ ಆಯ್ಕೆ ಹೊಂದಿಲಿದ್ದು, ಹೊಸ ಕಾರು ತುಸು ದುಬಾರಿ ಬೆಲೆ ಹೊಂದಿರಲಿದೆ. ಮುಂಬರುವ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಹೊಸ ಕಾರು ಬಿಡುಗಡೆಯಾಗಲಿದ್ದು, ದುಬಾರಿ ಬೆಲೆಯ ಎಂಪಿವಿ ಕಾರುಗಳಿಗೆ ಹೊಸ ಕಾರು ಪೈಪೋಟಿ ನೀಡಲಿದೆ.

Most Read Articles

Kannada
English summary
Hyundai Creta Beats Kia Seltos In 2020 July Sales. Read in Kannada.
Story first published: Tuesday, August 4, 2020, 21:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X