ಬಿಡುಗಡೆಯಾಯ್ತು ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿ

ಹ್ಯುಂಡೈ ಕಂಪನಿಯು ತನ್ನ ಬಿಎಸ್-6 ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಗ್ರ್ಯಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿಯನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿ

ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.63 ಲಕ್ಷಗಳಾಗಿದೆ. ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿಯನ್ನು ಮಿಡ್-ಸ್ಪೆಕ್ ಮ್ಯಾಗ್ನಾ ಮತ್ತು ಸ್ಪೋರ್ಟ್ಸ್ ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಗ್ರ್ಯಾಂಡ್ ಐ10 ನಿಯೋಸ್ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗ ಸಿಗ್ನೇಚರ್ ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿ

ಇನ್ನು ಇಂಟಿಗ್ರೇಟೆಡ್ ಟರ್ನ್ ಸಿಗ್ನಿಲ್‍‍ನೊಂದಿಗೆ ಸ್ಲಿಕ್ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ ಅನ್ನು ಹೊಂದಿದೆ. ಈ ಕಾರು ಎಲ್‍ಇಡಿ ಡಿಎಆರ್‍ಎಲ್‍‍ಗಳನ್ನುಹೊಂದಿದೆ. ಇದು ಈ ಹ್ಯಾಚ್‍‍ಬ್ಯಾಕ್‍ಗೆ ಸ್ಪೋರ್ಟಿ ಮತ್ತು ಪ್ರೀಮಿಯಂ ಲುಕ್ ಅನ್ನು ನೀಡಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಬಿಡುಗಡೆಯಾಯ್ತು ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿ

ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರಿನ ಇಂಟಿರಿಯರ್‍‍ನಲ್ಲಿ ಡ್ಯುಯಲ್ ಟೋನ್ ಬ್ಲ್ಯಾಕ್/ಗ್ರೇ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನೂ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿ

ಇದರೊಂದಿಗೆ ಈ ಕಾರಿನ ಇಂಟೆರಿಯರ್‍ನಲ್ಲಿ ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಕೀಲೆಸ್ ಎಂಟ್ರಿ ಮತ್ತು ಸ್ಟೀಯರಿಂಗ್-ಮೌಂಟೆಡ್ ಆಡಿಯೋವನ್ನು ಹೊಂದಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಬಿಡುಗಡೆಯಾಯ್ತು ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿ

ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಇದಕ್ಕಾಗಿ ಕಾರಿನಲ್ಲಿ ಏರ್‍‍ಬ್ಯಾಗಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍‍‍ಗಳು, ಇಬಿಡಿಯೊಂದಿಗೆ ಎಬಿಎಸ್, ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ಅಲರ್ಟ್ ಮತ್ತು ಎಸ್‌ಒಫಿಕ್ಸ್ ಚೈಲ್ಡ್-ಸೀಟ್ ಮೌಂಟ್‍‍ಗಳನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿ

ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಮಾದರಿಯು 1.2-ಲೀಟರ್ ಕಪ್ಪಾ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 66 ಬಿಹೆಚ್‍ಪಿ ಪವರ್ ಮತ್ತು 95 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಡುಗಡೆಯಾಯ್ತು ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿ

ಇದನ್ನು ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ 10 ಬಿಹೆಚ್‍ಪಿ ಪವರ್ ಮತ್ತು 19 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್‍ಜಿ ಎಂಜಿನ್ ನೊಂದಿಗೆ ಐದು ಮ್ಯಾನುವಲ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‍ಜಿ ಆವೃತ್ತಿ

ಭಾರತೀಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಮೂರನೇ ತಲೆಮಾರಿನ ಮಾದರಿಯಾಗಿದೆ, ಈ ಗ್ರಾಂಡ್ ಐ10 ನಿಯೋಸ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ, ಸಿಎನ್‌ಜಿ ಅವೃತ್ತಿಯಲ್ಲಿ ಬಿಡುಗಡೆಗೊಳಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Hyundai i10 Grand NIOS CNG Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X