ಹ್ಯುಂಡೈ 'ಕ್ಲಿಕ್ ಟು ಬೈ'ನಲ್ಲಿ ಖರೀದಿಸುವ ಕಾರುಗಳಿಗೆ ಐಸಿಐಸಿಐನಿಂದ ಹೊಸ ಲೋನ್ ಆಫರ್

ಹ್ಯುಂಡೈ ಕಂಪನಿಯು ತನ್ನ ಆನ್‌ಲೈನ್ ಕಾರು ಮಾರಾಟ ವೇದಿಕೆಯಾದ ಕ್ಲಿಕ್ ಟು ಬೈ ನಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ಐಸಿಐಸಿಐ ಬ್ಯಾಂಕ್ ಜೊತೆಗೂಡಿ ಹೊಸ ಲೋನ್ ಆಫರ್ ನೀಡುತ್ತಿದ್ದು, ಕಾರು ಖರೀದಿ ಮಾಡಿದ ಆರಂಭದ ಮೂರು ತಿಂಗಳಲ್ಲಿ ಅತಿ ಕಡಿಮೆ ಇಎಂಐ, ಧೀರ್ಘಾವಧಿಯ ಸಾಲಸೌಲಭ್ಯ ಮತ್ತು ಶೇ.100 ರಷ್ಟು ಆನ್‌ರೋಡ್ ಸಾಲ ಸೌಲಭ್ಯ ನೀಡಲಾಗುತ್ತಿದೆ.

ಹ್ಯುಂಡೈ ಕಾರುಗಳಿಗೆ ಐಸಿಐಸಿಐನಿಂದ ಹೊಸ ಲೋನ್ ಆಫರ್

ಹ್ಯುಂಡೈ ಕಂಪನಿಯು ಕೇವಲ ಐಸಿಐಸಿಐ ಬ್ಯಾಂಕ್‌ನೊಂದಿಗೆ ಮಾತ್ರವಲ್ಲದೆ ಹೆಚ್‌ಡಿಎಫ್‌ಸಿ ಸೇರಿದಂತೆ ವಿವಿಧ ಬ್ಯಾಂಕ್‌ಗಳೊಂದಿಗೆ ಹಲವಾರು ಲೋನ್ ಆಫರ್ ನೀಡುತ್ತಿದ್ದು, ಹೊಸ ವಾಹನ ಖರೀದಿದಾರರಿಗೆ ಇಎಂಐ ಹೊರೆ ತಗ್ಗಿಸಲು ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೊಸ ಲೋನ್ ಆಫರ್‌ಗಳು ಕಾರು ಮಾರಾಟ ಸುಧಾರಿಸಲು ಮತ್ತಷ್ಟು ಸಹಕಾರಿಯಾಗಿದ್ದು, ಮಾಹಾಮಾರಿ ಕರೋನಾ ಅಬ್ಬರದ ನಡುವೆ ಸುರಕ್ಷಿತ ಕಾರು ಮಾರಾಟವು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

ಹ್ಯುಂಡೈ ಕಾರುಗಳಿಗೆ ಐಸಿಐಸಿಐನಿಂದ ಹೊಸ ಲೋನ್ ಆಫರ್

ವೈರಸ್ ಭೀತಿಯಿಂದಾಗಿ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ವಹಿವಾಟಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಗ್ರಾಹಕರು ಕೂಡಾ ವೈರಸ್ ಭಯದಿಂದ ಆನ್‌ಲೈನ್ ಪ್ಲ್ಯಾಟ್‌‌‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಹ್ಯುಂಡೈ ಕಾರುಗಳಿಗೆ ಐಸಿಐಸಿಐನಿಂದ ಹೊಸ ಲೋನ್ ಆಫರ್

ಲಾಕ್‌ಡೌನ್ ವಿನಾಯ್ತಿ ನಂತರ ವಾಹನ ಮಾರಾಟದಲ್ಲಿ ಹಲವು ಹೊಸ ಬದಲಾಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಸುರಕ್ಷಿತ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲಿ ತುಸು ಚೇತರಿಕೆ ಕಂಡುಬರುತ್ತಿದೆ.

ಹ್ಯುಂಡೈ ಕಾರುಗಳಿಗೆ ಐಸಿಐಸಿಐನಿಂದ ಹೊಸ ಲೋನ್ ಆಫರ್

ಕಾರು ಮಾರಾಟದಲ್ಲಿ ಎರಡನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಕೂಡಾ ಇದೀಗ ಇದೀಗ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿದ್ದು, ಮೇ 4 ರಿಂದ ಇದುವರೆಗೆ ಸುಮಾರು 25 ಸಾವಿರ ಬುಕ್ಕಿಂಗ್‌ಗಳನ್ನು ಕ್ಲಿಕ್ ಟು ಬೈ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಪಡೆದುಕೊಂಡಿದೆ.

ಹ್ಯುಂಡೈ ಕಾರುಗಳಿಗೆ ಐಸಿಐಸಿಐನಿಂದ ಹೊಸ ಲೋನ್ ಆಫರ್

ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಕಾರು ಖರೀದಿ ಪ್ರಕ್ರಿಯೆಯೂ ವೈರಸ್ ಭೀತಿ ನಡುವೆ ಉತ್ತಮ ಬೆಳವಣಿಯಾಗಿದ್ದು, ಹ್ಯುಂಡೈ ಸೇರಿದಂತೆ ಹಲವು ವಾಹನ ಕಂಪನಿಗಳು ಪ್ರತ್ಯೇಕ ಆನ್‌ಲೈನ್ ಮಾರಾಟ ಮಳಿಗೆಗಳನ್ನು ತೆರೆದಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹ್ಯುಂಡೈ ಕಾರುಗಳಿಗೆ ಐಸಿಐಸಿಐನಿಂದ ಹೊಸ ಲೋನ್ ಆಫರ್

ಇನ್ನು ಕಾರು ಮಾರಾಟ ಮತ್ತು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಯು ಟಾಪ್ 10 ಕಾರು ಮಾರಾಟದಲ್ಲಿ ಒಟ್ಟು 7 ಕಾರುಗಳನ್ನು ಹೊಂದಿದ್ದು, ಹ್ಯುಂಡೈ ನಿರ್ಮಾಣದ ಎರಡು ಕಾರು ಮತ್ತು ಕಿಯಾ ನಿರ್ಮಾಣದ ಒಂದು ಕಾರು ಟಾಪ್ ಹತ್ತರ ಸ್ಥಾನದಲ್ಲಿವೆ.

ಹ್ಯುಂಡೈ ಕಾರುಗಳಿಗೆ ಐಸಿಐಸಿಐನಿಂದ ಹೊಸ ಲೋನ್ ಆಫರ್

ಇದರಲ್ಲಿ ಮೊದಲ ಬಾರಿಗೆ ಆರು ಮತ್ತು ಏಳನೇ ಸ್ಥಾನದಲ್ಲಿರುತ್ತಿದ್ದ ಕ್ರೆಟಾ ಕಾರು ಇದೇ ಮೊದಲ ಬಾರಿಗೆ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದು, ಮೇ ಅವಧಿಯಲ್ಲಿ 3,212 ಯುನಿಟ್ ಮಾರಾಟಗೊಂಡಿದೆ. ಹ್ಯುಂಡೈ ಕಂಪನಿಯು ಸದ್ಯ ಕಾರು ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಮೇ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಮಾತ್ರ ಮೊದಲ ಸ್ಥಾನದಲ್ಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹ್ಯುಂಡೈ ಕಾರುಗಳಿಗೆ ಐಸಿಐಸಿಐನಿಂದ ಹೊಸ ಲೋನ್ ಆಫರ್

ಮೇ 4ರಂದು ಘೋಷಣೆಯಾದ ಲಾಕ್‌ಡೌನ್ ವಿನಾಯ್ತಿ ನಂತರ ಮೇ 31ರ ತನಕ ಬರೋಬ್ಬರಿ 12,583 ಕಾರುಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 6,883 ಯುನಿಟ್ ಮಾರಾಟ ಮಾಡಿದ್ದಲ್ಲಿ 5,700 ಯುನಿಟ್ ರಫ್ತುಗೊಳಿಸಿದೆ.

Most Read Articles

Kannada
English summary
Hyundai & ICICI Partners To Offer Hassle-Free Finance On Click To Buy Online Sales Platform. Read in Kannada.
Story first published: Tuesday, June 23, 2020, 22:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X