ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರನ್ನು ಬಳಕೆ ಮಾಡುತ್ತಿರುವ ಮಾಲೀಕರು ಕೊನಾ ಕಾರ್ಯಕ್ಷಮತೆ ಮತ್ತು ಮೈಲೇಜ್ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಕೊನಾ ಕಾರು ಸದ್ಯ ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ಹೊಂದಿರುವ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯಾಗಿದ್ದು, ಇದುವರೆಗೆ ಸುಮಾರು 500ಕ್ಕೂ ಗ್ರಾಹಕರು ಕೊನಾ ಕಾರು ಖರೀದಿ ಮಾಡಿದ್ದಾರೆ. ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿ ನಿಧಾನವಾಗಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ದುಬಾರಿ ಬೆಲೆಯ ನಡುವೆಯೂ ಹೊಸ ಕಾರು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ. ಹಾಗಾದ್ರೆ ಕೊನಾ ಮಾಲೀಕರ ಅನುಭವದ ಪ್ರಕಾರ ಹೊಸ ಕಾರಿನ ಕಾರ್ಯಕ್ಷಮತೆ ಹೇಗಿದೆ? ನಿಜವಾಗಿಯೂ ಕೊನಾ ಕಾರಿನ ಮೈಲೇಜ್ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಬೆಂಗಳೂರಿನಲ್ಲಿ ನೆಲೆಸಿರುವ ತಮಿಳುನಾಡು ಮೂಲದ ಅಖಿಲ್ ವೆಂಕಟೇಶ್ವರನ್ ಅವರು ಕಳೆದ ವಾರ ಕೊಯಿಮತ್ತೂರು ಬಳಿಯ ಕೊವೈಪೂದುರು ಗ್ರಾಮಕ್ಕೆ ತಮ್ಮ ಹೊಸ ಕೊನಾ ಮೂಲಕ ಪ್ರಯಾಣ ಬೆಳೆಸಿದ್ದರು. ಲಾಂಗ್ ಡ್ರೈವ್‌ನಲ್ಲಿ ತಮ್ಮ ಅನುಭವಕ್ಕೆ ಬಂದ ಕೊನಾ ಕಾರ್ಯಕ್ಷಮತೆ ಕುರಿತಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಹ್ಯುಂಡೈ ಕೊನಾ ಕಾರು ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ಒಂದು ಉತ್ತಮ ಆಯ್ಕೆಯಾಗಿರುವುದಕ್ಕೆ ಹಲವಾರು ಕಾರಣಗಳನ್ನು ನೀಡಿರುವ ಅಖಿಲ್ ವೆಂಕಟೇಶ್ವರನ್ ಅವರು, ದೂರದ ಪ್ರಯಾಣದಲ್ಲಿ ಕೊನಾ ಕಾರ್ಯಕ್ಷಮತೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಬೆಂಗಳೂರಿನಿಂದ ಕೊಯಿಮತ್ತೂರು ನಡುವಿನ 365 ಕಿ.ಮೀ ಪ್ರಯಾಣದಲ್ಲಿ ಕೊನಾ ಕಾರು ಪ್ರತಿ ಚಾರ್ಜ್‌ಗೆ ಸರಾಸರಿಯಾಗಿ 405 ಕಿ.ಮೀ ನೀಡುವುದಾಗಿ ಹೇಳಿಕೊಳ್ಳಲಾಗಿದ್ದು, ಎರಡು ಕಡೆಯ ಪ್ರಯಾಣಕ್ಕಾಗಿ ಅಖಿಲ್ ವೆಂಕಟೇಶ್ವರನ್ ಅವರು ಖರ್ಚು ಮಾಡಿರುವುದು ಕೇವಲ ರೂ.500ಕ್ಕಿಂತಲೂ ಕಡಿಮೆ ಎನ್ನುವುದು ಪ್ರಮುಖ ವಿಚಾರ. ಬೆಂಗಳೂರಿನಲ್ಲಿರುವ ಮನೆಯಲ್ಲಿ ಸೋಲಾರ್ ವಿದ್ಯುತ್ ಬಳಕೆ ಮಾಡಲಾಗುತ್ತಿದ್ದು, ಕೊವೈಪೂದುರು ಗ್ರಾಮದ ಮನೆಯಲ್ಲಿ ಸಾಮಾನ್ಯ ಚಾರ್ಜಿಂಗ್ ಸಾಕೆಟ್ ಮೂಲಕ ಚಾರ್ಜಿಂಗ್ ಮಾಡಿಕೊಂಡಿದ್ದರು.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಈ ನಡುವೆ ಬೆಂಗಳೂರು ಟು ಕೊಯಿಮತ್ತೂರು ನಡುವಿನ ಪ್ರಯಾಣದಲ್ಲಿ ಐದಕ್ಕೂ ಹೆಚ್ಚು ಬಾರಿ ಬ್ರೇಕ್ ತಗೆದುಕೊಂಡಿದ್ದಲ್ಲದೆ ಶೇ.50ರಷ್ಟು ಪ್ರಯಾಣದ ಅವಧಿಯಲ್ಲಿ ಎಸಿ ಸೌಲಭ್ಯವನ್ನು ಕೂಡಾ ಬಳಕೆ ಮಾಡಲಾಗಿದೆ.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಇದರಿಂದಲೂ ಮೈಲೇಜ್ ಪ್ರಮಾಣ ತುಸು ಕಡಿಮೆ ಎನ್ನಿಸಿದರೂ ಕೊನಾ ಕಾರು ಪ್ರತಿ ಚಾರ್ಜ್‌ಗೆ 405 ಕಿ.ಮೀ ಸರಾಸರಿ ಮೈಲೇಜ್ ಹಿಂದಿರುಗಿಸುವಲ್ಲಿ ಶಕ್ತವಾಗಿದ್ದು, ARAI ಸಂಸ್ಥೆಯು ದೃಡಪಡಿಸಿರುವಂತೆ ಹೊಸ ಕೊನಾ ಕಾರು ಪ್ರತಿ ಚಾರ್ಜ್‌ಗೆ 452ಕಿ.ಮೀ ನೀಡುವಲ್ಲಿ ತುಸು ಹಿನ್ನಡೆ ಅನುಭವಿಸುತ್ತದೆ.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಆದರೆ ಇದು ಡೀಸೆಲ್ ಕಾರುಗಳ ಇಂಧನ ವೆಚ್ಚಕ್ಕಿಂತಲೂ ಶೇ.80ರಷ್ಟು ಕಡಿಮೆ ಎನ್ನಲಾಗಿದ್ದು, ಅಖಿಲ್ ವೆಂಕಟೇಶ್ವರನ್ ಪ್ರಕಾರ ತಮ್ಮ ಈ ಹಿಂದಿನ ಡೀಸೆಲ್ ಎಸ್‌ಯುವಿಗಿಂತಲೂ ಹೊಸ ಕೊನಾ ಕಾರಿನ ವೆಚ್ಚವು ಪ್ರತಿ ಕಿ.ಮೀ ಗೆ ಕೇವಲ 70 ಪೈಸೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಕೊನಾ ಎಲೆಕ್ಟ್ರಿಕ್ ಕಾರು 64kWh ಮತ್ತು 39.2kWh ಬ್ಯಾಟರಿ ವೈಶಿಷ್ಟ್ಯತೆಗಳನ್ನು ಹೊಂದಿದೆ.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಇದರಲ್ಲಿ ಸದ್ಯಕ್ಕೆ 39.2kWh ಬ್ಯಾಟರಿ ಸಾಮಾರ್ಥ್ಯ ಮಾದರಿಯನ್ನು ಮಾತ್ರವೇ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, 52 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್‌ ಆಗಬಲ್ಲ ಫಾಸ್ಟ್ ಚಾರ್ಜರ್ ಸೌಲಭ್ಯ ಈ ಕಾರಿನಲ್ಲಿದೆ.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಸಾಮಾರ್ಥ್ಯ ಕಾರುಗಳಂತೆಯೇ ಪರ್ಫಾಮೆನ್ಸ್‌ನಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

ಹ್ಯುಂಡೈ ಕೊನಾ ಮೂಲಕ 385 ಕಿ.ಮೀ ಪ್ರಯಾಣವು ಮುಗಿದಿದ್ದು ಕೇವಲ ರೂ.250ಕ್ಕೆ..

ಹ್ಯುಂಡೈ ಸಂಸ್ಥೆಯು ಸದ್ಯ ವಿದೇಶಿ ಮಾರುಕಟ್ಟೆಗಳಿಂದ ಕೋನಾ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿರುವುದರಿಂದ ಹೊಸ ಕಾರು ತುಸು ದುಬಾರಿ ಎನ್ನಿಸಲಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 23.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹಾಗೆಯೇ ಹೊಸ ಕಾರಿನ ಮೇಲೆ ರೂ.1.50 ಲಕ್ಷ ತೆರಿಗೆ ವಿನಾಯ್ತಿ ಸಹ ಸಿಗಲಿದ್ದು, ಬ್ಯಾಟರಿ ಮೇಲೆ 8 ವರ್ಷಗಳ ವಾರಂಟಿ ನೀಡಲಾಗಿದೆ.

Most Read Articles

Kannada
English summary
Hyundai Kona electric car owner has shared his Bangalore to Coimbatore long journey experience on social media. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X