ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹ್ಯುಂಡೈನಿಂದ 'ಫ್ರೀಡಂ ಡ್ರೈವ್' ಅಭಿಯಾನ

ಹ್ಯುಂಡೈ ಕಂಪನಿಯು ತನ್ನ ನೆಚ್ಚಿನ ಗ್ರಾಹಕರಿಗೆ ರಿಯಾಯ್ತಿ ದರದಲ್ಲಿ ಕಾರ್ ಸರ್ವಿಸ್ ಯೋಜನೆಗಳಿಗಾಗಿ ಫ್ರೀಡಂ ಡ್ರೈವ್ ಅಭಿಯಾನ ಆರಂಭಿಸಿದ್ದು, ವಿವಿಧ ಮಾದರಿಯ ಕಾರ್ ಸ್ಯಾನಿಟೈಜ್ ಸರ್ವಿಸ್‌ಗಳನ್ನು ಅತಿ ದರದಲ್ಲಿ ಸಿಮಿತ ಅವಧಿಗಾಗಿ ಪರಿಚಯಿಸಿದೆ.

ಹ್ಯುಂಡೈನಿಂದ 'ಫ್ರೀಡಂ ಡ್ರೈವ್' ಅಭಿಯಾನ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆರಂಭಿಸಲಾಗಿರುವ ಫ್ರೀಡಂ ಡ್ರೈವ್ ಅಭಿಯಾನದಲ್ಲಿ ಹ್ಯುಂಡೈ ಕಾರ್ ಸರ್ವಿಸ್ ಸೆಂಟರ್‌ಗಳಲ್ಲಿ ವಿವಿಧ ಕಾರು ಮಾದರಿಗಳಿಗೆ ರಿಯಾಯ್ತಿ ದರದಲ್ಲಿ ಸ್ಯಾನಿಟೈಜ್ ಸರ್ವಿಸ್ ನೀಡಲಾಗುತ್ತಿದ್ದು, 50ಕ್ಕೂ ಹೆಚ್ಚು ಟಚ್ ಪಾಯಿಂಟ್‌ಗಳನ್ನು ಹೊಸ ಅಭಿಯಾನದಡಿ ಸ್ಯಾನಿಟೈಜ್ ಮಾಡಿಕೊಡಲಾಗುತ್ತಿದೆ. ರೂ.599 ದಿಂದ ಆರಂಭವಾಗುವ ಸ್ಯಾನಿಟೈಜ್ ಸರ್ವಿಸ್ ಸೇವೆಗಳಿಗೆ ಕಾರ್ಮಿಕರ ಶುಲ್ಕದ ಮೇಲೆ ಶೇ. 20ರಷ್ಟು ವಿನಾಯ್ತಿ ನೀಡುತ್ತಿದ್ದು, ಅಂಡರ್‌ಬಾಡಿ ಸ್ಯಾನಿಟೈಜ್ ಶುಲ್ಕದ ಮೇಲೆ ಶೇ.15ರಷ್ಟು ವಿನಾಯ್ತಿ ನೀಡಲಾಗುತ್ತಿದೆ.

ಹ್ಯುಂಡೈನಿಂದ 'ಫ್ರೀಡಂ ಡ್ರೈವ್' ಅಭಿಯಾನ

ಹೊಸ ಫ್ರೀಡಂ ಡ್ರೈವ್ ಅಭಿಯಾನವು ಇಂದಿನಿಂದ 21ರ ತನಕ ಲಭ್ಯವಿರಲಿದ್ದು, ಆಸಕ್ತ ಗ್ರಾಹಕರ ತಮ್ಮ ಹತ್ತಿರ ಹ್ಯುಂಡೈ ಸರ್ವಿಸ್ ಸ್ಟೇಷನ್‌ಗಳು ಭೇಟಿ ನೀಡಿ ರಿಯಾಯ್ತಿ ದರದಲ್ಲಿ ಸ್ಯಾನೆಟೈಜ್ ಸೇವೆಗಳನ್ನು ಪಡೆಯಬಹುದಾಗಿದೆ.

ಹ್ಯುಂಡೈನಿಂದ 'ಫ್ರೀಡಂ ಡ್ರೈವ್' ಅಭಿಯಾನ

ಇನ್ನು ಹ್ಯುಂಡೈ ಕಂಪನಿಯು ನೆಚ್ಚಿನ ಗ್ರಾಹಕರಿಗೆ ಮೊಬಿಲಿಟಿ ಮೆಂಬರ್‌ಶಿಷ್ ಅಭಿಯಾನವನ್ನು ಸಹ ಶುರು ಮಾಡಿದ್ದು, ಹೊಸ ಮೊಲಿಬಿಟಿ ಸದಸ್ಯತ್ವದಡಿ ಹಲವಾರು ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಹ್ಯುಂಡೈನಿಂದ 'ಫ್ರೀಡಂ ಡ್ರೈವ್' ಅಭಿಯಾನ

ಆಟೋಮೊಬೈಲ್‌ಗೆ ಸಂಬಂಧಿಸಿದ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸಲಿರುವ ಹ್ಯುಂಡೈ ಕಂಪನಿಯು ಉಚಿತವಾಗಿ ಮೊಲಿಬಿಟಿ ಸದಸ್ಯತ್ವವನ್ನು ನೀಡುತ್ತಿದ್ದು, ಹ್ಯುಂಡೈ ಗ್ರಾಹಕರು ಹೊಸ ಸದಸ್ಯತ್ವದ ಮೂಲಕ ವಿವಿಧ ಆಟೋ ಸೇವೆಗಳು ರಿಯಾಯ್ತಿ ದರ ಪಡೆದುಕೊಳ್ಳಬಹುದು.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಹ್ಯುಂಡೈನಿಂದ 'ಫ್ರೀಡಂ ಡ್ರೈವ್' ಅಭಿಯಾನ

ಮೊಬಿಲಿಟಿ ಸದಸ್ಯತ್ವದಡಿ ಗ್ರಾಹಕರಿಗೆ ಅಂಕಗಳನ್ನು ನೀಡುವ ಹ್ಯುಂಡೈ ಕಂಪನಿಯು ಅಂಕಗಳ ಆಧಾರದ ಮೇಲೆ ವಿವಿಧ ಆಟೋಮೊಬೈಲ್ ಸೇವೆಗಳ ಮೇಲೆ ರಿಯಾಯ್ತಿ ಪಡೆದುಕೊಳ್ಳುವ ಅವಕಾಶ ನೀಡಲಿದ್ದು, ಹೊಸ ಸದಸ್ಯತ್ವಕ್ಕೆ ಯಾವುದೇ ಹೆಚ್ಚುವರಿ ಶುಲ್ಕಪಾವತಿ ಮಾಡಬೇಕಿಲ್ಲ.

ಹ್ಯುಂಡೈನಿಂದ 'ಫ್ರೀಡಂ ಡ್ರೈವ್' ಅಭಿಯಾನ

ಹೀಗಾಗಿ ವಾಹನದ ಪರಿಕರಗಳು, ಇಂಧನ, ಲೂಬ್ರಿಕಂಟ್ ಮತ್ತು ಟೈರ್‌ಗಳಿಗೆ ಸಂಬಂಧಿಸಿದ ಸೇವೆಗಳನ್ನು ರಿಯಾಯ್ತಿ ದರದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಇದು ವಾಹನ ಚಂದಾದಾರಿಕೆಯ ಪ್ರಕ್ರಿಯೆಯನ್ನು ಸಹ ಸರಳಗೊಳಿಸುತ್ತದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹ್ಯುಂಡೈನಿಂದ 'ಫ್ರೀಡಂ ಡ್ರೈವ್' ಅಭಿಯಾನ

ಒಂದು ನೀವು ಬಾಡಿಗೆ ವಾಹನಗಳನ್ನು ನೇರವಾಗಿ ಆಯಾ ಕಂಪನಿಗಳ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕಿಂತ ಹ್ಯುಂಡೈ ಮೊಲಿಬಿಟಿ ಆ್ಯಪ್ ಮೂಲಕ ನೋಂದಣಿ ಮಾಡಿದ್ದಲ್ಲಿ ಹಲವಾರು ಆಫರ್‌ಗಳ ಲಭ್ಯವಾಗಲಿದ್ದು, ಕ್ಯಾಶ್‌ಬ್ಯಾಕ್ ಆಫರ್ ಜೊತೆಗೆ ಅಂಕಗಳು ಕೂಡಾ ಹೆಚ್ಚಳವಾಗುವುದರೊಂದಿಗೆ ಆಫರ್ ಪಡೆದುಕೊಳ್ಳಬಹುದಾಗಿದೆ.

Most Read Articles

Kannada
English summary
Hyundai launches freedom drive sanitisation campaign. Read in Kannada.
Story first published: Saturday, August 15, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X