ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಹ್ಯುಂಡೈ ಕ್ರೆಟಾ

ಹ್ಯುಂಡೈ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿನ ಕಾರು ಮಾರಾಟದಲ್ಲಿ ಮುಂಚೂಣಿ ವಾಹನ ಮಾರಾಟ ಕಂಪನಿಯಾಗಿ ಹೊರಹೊಮ್ಮಿದ್ದು, ಭಾರತದಲ್ಲಿ ನಿರ್ಮಾಣವಾದ ವಿವಿಧ ಕಾರು ಮಾದರಿಗಳನ್ನು ರಫ್ತುಗೊಳಿಸುವ ಮೂಲಕ ರಫ್ತು ಪ್ರಮಾಣದಲ್ಲೂ ಅಗ್ರಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಹ್ಯುಂಡೈ ಕ್ರೆಟಾ

ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಕ್ರೆಟಾ ಕಾರು ಮಾದರಿಯು ಭರ್ಜರಿ ಮಾರಾಟವಾಗುತ್ತಿದ್ದು, ಹೊಸ ಕಾರು ಶೀಘ್ರದಲ್ಲೇ ದಕ್ಷಿಣ ಆಫ್ರಿಕಾದಲ್ಲೂ ಬಿಡುಗಡೆಗೆ ಸಿದ್ದವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತದಲ್ಲಿ ನಿರ್ಮಾಣವಾಗುವ ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರಾ ಪ್ರಮುಖ ಕಾರು ಮಾದರಿಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಕಾರು ಮಾದರಿಯಾದ ಕ್ರೆಟಾ ಆವೃತ್ತಿಯನ್ನು ಇದೀಗ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಲಾಗುತ್ತಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಹ್ಯುಂಡೈ ಕ್ರೆಟಾ

ಕ್ರೆಟಾ ಕಾರು ಮಾದರಿಯು ಈಗಾಗಲೇ ಯುರೋಪ್ ಮತ್ತು ಆಫ್ರಿಕಾದ ಪ್ರಮುಖ 86 ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣಗೊಂಡ ರಫ್ತು ಮಾದರಿಯಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಹ್ಯುಂಡೈ ಕ್ರೆಟಾ

ಭಾರತದಿಂದ ಇದುವರೆಗೆ ಕ್ರೆಟಾ ಕಾರು ಮಾದರಿಯೊಂದೆ ಬರೋಬ್ಬರಿ 2 ಲಕ್ಷ ಯುನಿಟ್ ಮಾರಾಟಗೊಂಡ ದಾಖಲೆಯಿದ್ದು, ಶೀಘ್ರದಲ್ಲೇ ದಕ್ಷಿಣ ಆಫ್ರಿಕಾದಲ್ಲೂ ಹೊಸ ಕಾರಿನ ಮಾರಾಟವು ಚಾಲನೆ ಪಡೆದುಕೊಳ್ಳಲಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಹ್ಯುಂಡೈ ಕ್ರೆಟಾ

ದಕ್ಷಿಣ ಆಫ್ರಿಕಾದಲ್ಲಿ ಹ್ಯುಂಡೈ ನಿರ್ಮಾಣದ ಗ್ರಾಂಡ್ ಐ10, ಐ20 ಮತ್ತು ವೆನ್ಯೂ ಕಾರುಗಳು ಈಗಾಗಲೇ ಮಾರಾಟಗೊಳ್ಳತ್ತಿದ್ದು, ಇದೇ ಮೊದಲ ಬಾರಿಗೆ ಕ್ರೆಟಾ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿರುವ ಕ್ರೆಟಾ ಕಾರು ಮಾದರಿಯು ಭಾರತದಲ್ಲಿನ ಮಾದರಿಗಿಂತಲೂ ತುಸು ಭಿನ್ನವಾಗಿರಲಿದ್ದು, ಎಂಜಿನ್ ಆಯ್ಕೆ ಮತ್ತು ತಾಂತ್ರಿಕ ಅಂಶಗಳು ಅಲ್ಲಿನ ಮಾರುಕಟ್ಟೆಯ ಬೇಡಿಕೆಯನ್ನು ಆಧಾರಿಸಿ ಜೋಡಣೆ ಪಡೆದುಕೊಳ್ಳಲಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಹ್ಯುಂಡೈ ಕ್ರೆಟಾ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿರುವ ಕ್ರೆಟಾ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.81 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.32 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಎಂಜಿನ್ ಆಯ್ಕೆ ಹೊಂದಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಹ್ಯುಂಡೈ ಕ್ರೆಟಾ

ನ್ಯೂ ಜನರೇಷನ್ ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 6 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಆಯ್ಕೆ ಹೊಂದಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಹ್ಯುಂಡೈ ಕ್ರೆಟಾ

1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಲಿದೆ ಮೇಡ್ ಇನ್ ಇಂಡಿಯಾ ಹ್ಯುಂಡೈ ಕ್ರೆಟಾ

ಇದಲ್ಲದೆ ಹ್ಯುಂಡೈ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕ್ರೆಟಾ ಕಾರಿನಲ್ಲಿ ಹೊಸದಾಗಿ 7 ಸೀಟರ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಸಾಮಾನ್ಯ ಕಾರಿನ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಮೂರು ಸಾಲಿನ ಆಸನ ಸೌಲಭ್ಯವನ್ನು ಪಡೆದುಕೊಳ್ಳಲಿದೆ.

Most Read Articles

Kannada
English summary
Hyundai Creta Will Go On Sale In South Africa Within The Week. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X