ಲಾಕ್‌ಡೌನ್ ಸಂಕಷ್ಟದಲ್ಲೂ 9 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಇಂಡಿಯಾ

ಕರೋನಾ ವೈರಸ್ ಭೀತಿ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ಸುರಕ್ಷಿತ ವ್ಯಾಪಾರ-ವಹಿವಾಟು ಆಟೋ ಕಂಪನಿಗಳು ಆರ್ಥಿಕ ಸಂಕಷ್ಟದ ನಡುವೆಯೂ ಗ್ರಾಹಕರನ್ನು ಸೆಳೆಯುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ಭಾರೀ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡಿದೆ.

ಲಾಕ್‌ಡೌನ್ ಸಂಕಷ್ಟದಲ್ಲೂ 9 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಇಂಡಿಯಾ

ಕಾರು ಮಾರಾಟದಲ್ಲಿ ಎರಡನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಇಂಡಿಯಾ ಕಂಪನಿಯು ಮೇ 4 ರಿಂದ ಇದುವರೆಗೆ ಸುಮಾರು 9 ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದೆ. ಸದ್ಯ ಲಾಕ್‌ಡೌನ್‌ಗೂ ಮುನ್ನ ಬುಕ್ಕಿಂಗ್ ದಾಖಲಿಸಿದ್ದ ಗ್ರಾಹಕರಿಗೆ ಹೊಸ ಕಾರುಗಳನ್ನು ವಿತರಣೆ ಮಾಡಲಾಗುತ್ತಿದ್ದು, ಹ್ಯುಂಡೈ ಘೋಷಣೆ ಮಾಡಿರುವ ಹೊಸ ಆಫರ್‌ಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಲಾಕ್‌ಡೌನ್ ಸಂಕಷ್ಟದಲ್ಲೂ 9 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಇಂಡಿಯಾ

ದೇಶಾದ್ಯಂತ 806 ಮಾರಾಟ ಮಳಿಗೆಗಳನ್ನು ತೆರೆದಿರುವ ಹ್ಯುಂಡೈ ಕಂಪನಿಯು ಗ್ರಾಹಕರ ಸೆಳೆಯಲು ವಿವಿಧ ಮಾದರಿಯ ಹಲವಾರು ಹಣಕಾಸು ಆಫರ್‌ಗಳನ್ನು ನೀಡುತ್ತಿದ್ದು, ಸಂಕಷ್ಟದ ಸಮಯದಲ್ಲೂ ಗ್ರಾಹಕರಿಗೆ ಆರ್ಥಿಕವಾಗಿ ಸಹಕಾರಿಯಾಗುವ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದೆ.

ಲಾಕ್‌ಡೌನ್ ಸಂಕಷ್ಟದಲ್ಲೂ 9 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಇಂಡಿಯಾ

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಲಾಕ್‌ಡೌನಿಂದಾಗಿ ಕುಸಿದುಬಿದ್ದಿರುವ ವ್ಯಾಪಾರ ಅಭಿವೃದ್ದಿಯನ್ನು ಸರಿದಾರಿಗೆ ತರುವುದು ಒಂದು ಸವಾಲಾಗಿ ಪರಿಣಿಮಿಸಿದ್ದು, ಹ್ಯುಂಡೈ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿತ್ತು.

ಲಾಕ್‌ಡೌನ್ ಸಂಕಷ್ಟದಲ್ಲೂ 9 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಇಂಡಿಯಾ

ಆಕರ್ಷಕ ಇಎಂಐ ಮರುಪಾವತಿ, ಸಾಲ ಮರುಪಾವತಿಗಾಗಿ ಧೀರ್ಘಾವಧಿಯ ಸಾಲ, ಕಡಿಮೆ ಬಡ್ಡಿದರದ ಸಾಲ, ಬಲೂನ್ ಸ್ಕೀಮ್ ಸೇರಿದಂತೆ ವಿವಿಧ ಮಾದರಿಯ ಆಫರ್‌ಗಳನ್ನು ನೀಡಲಾಗುತ್ತಿದ್ದು, ಆಯ್ದ ಕಾರುಗಳ ಖರೀದಿ ಮೇಲೆ ಮೊದಲ ವರ್ಷದ ಮೂರು ತಿಂಗಳು ಇಎಂಐ ಮರುಪಾವತಿಗೆ ಸಹಕರಿಸುವ ಯೋಜನೆಯನ್ನು ಸಹ ಹ್ಯುಂಡೈ ಆಫರ್ ಮಾಡುತ್ತಿದೆ.

ಲಾಕ್‌ಡೌನ್ ಸಂಕಷ್ಟದಲ್ಲೂ 9 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಇಂಡಿಯಾ

ಹೀಗಾಗಿ ಕಾರು ಮಾರಾಟದಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಹ್ಯುಂಡೈ ಕಂಪನಿಯ ಪ್ರಮುಖ ಕಾರು ಮಾದರಿಗಳಾದ ಗ್ರ್ಯಾಂಡ್ ಐ10 ಮತ್ತು ನ್ಯೂ ಜನರೇಷನ್ ಕ್ರೆಟಾ ಕಾರುಗಳಿಗಾಗಿ ಹೆಚ್ಚು ಬೇಡಿಕೆ ಕಂಡುಬಂದಿದೆ.

ಲಾಕ್‌ಡೌನ್ ಸಂಕಷ್ಟದಲ್ಲೂ 9 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಇಂಡಿಯಾ

ಕಳೆದ ಮಾರ್ಚ್ 16ರಂದು ಬಿಡುಗಡೆಗೊಂಡಿದ್ದ ನ್ಯೂ ಜನರೇಷನ್ ಕ್ರೆಟಾ ಕಾರು ಇದುವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರು ಮಾರಾಟವು ಹ್ಯುಂಡೈ ಕಂಪನಿಗೆ ಭಾರೀ ಲಾಭಾಂಶ ತಂದುಕೊಡುವ ನೀರಿಕ್ಷೆಯಿದೆ.

ಲಾಕ್‌ಡೌನ್ ಸಂಕಷ್ಟದಲ್ಲೂ 9 ಸಾವಿರ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ ಇಂಡಿಯಾ

ಗ್ರ್ಯಾಂಡ್ ಐ10, ಕ್ರೆಟಾ, ಮತ್ತು ವೆನ್ಯೂ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳ ಮಾರಾಟವು ಹ್ಯುಂಡೈ ಕಂಪನಿಗೆ ನೀರಿಕ್ಷಿತ ಮಟ್ಟದ ಲಾಭಾಂಶ ತಂದುಕೊಡದಿದ್ದರೂ ಬ್ರಾಂಡ್ ಮೌಲ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಹೊಸ ಲೋನ್ ಆಫರ್‌ಗಳು ಸದ್ಯ ಕಾರು ಮಾರಾಟ ಚೇತರಿಕೆಗೆ ಸಾಕಷ್ಟು ಸಹಕಾರಿಯಾಗಿದೆ ಎನ್ನಬಹುದು.

Most Read Articles

Kannada
English summary
Hyundai Receives 9,000 Bookings Post Lockdown. Read in Kannada.
Story first published: Tuesday, May 26, 2020, 20:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X