Just In
- 1 hr ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 2 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 4 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 4 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Movies Puttakkana Makkalu:ಸ್ನೇಹಾ ಕೈ ಸೇರಿಯೇ ಬಿಡ್ತು ವಿಚ್ಛೇದನದ ಪೇಪರ್; ಮುಂದೇನು?
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಥಗಿತವಾಗಲಿದೆ ಹ್ಯುಂಡೈ ಐ20 ಸಿವಿಟಿ
ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ 2020ರ ಐ20 ಕಾರ್ ಅನ್ನು ಭಾರತದಲ್ಲಿ ಜೂನ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಹೊಸ ಹ್ಯುಂಡೈ ಐ20 ಕಾರನ್ನು ಬಿಡುಗಡೆಗೊಳಿಸಲಾಗುತ್ತದೆ.
ಹ್ಯುಂಡೈ ಕಂಪನಿಯು ಐ20 ಸಿವಿಟಿ ಆವೃತ್ತಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ಡೀಲರ್ಗಳ ಬಳಿ ಸ್ಟಾಕ್ ಮುಗಿಯುವರೆಗೆ ಬುಕ್ಕಿಂಗ್ ಅನ್ನು ಸ್ವಕರಿಸುತ್ತಿದೆ ನಂತರದಲ್ಲಿ ಸ್ಥಗಿತಗೊಳಿಸಬಹುದು ಎಂದು ರಶ್ಲೇನ್ ವರದಿ ಮಾಡಿದೆ. ಇಲ್ಲಿಯವರೆಗೆ ಲಭ್ಯವಿದ್ದ ಹ್ಯುಂಡೈ ಐ20ಯ ಏಳು ಪೆಟ್ರೋಲ್ ರೂಪಾಂತರಗಳಲ್ಲಿ ಎಂಟ್ರಿ ಲೆವೆಲ್ ಇಆರ್ಎ ಮ್ಯಾನುವಲ್, ಮಿಡ್ ಲೆವೆಲ್ ಸ್ಪೋರ್ಟ್ಸ್ ಪ್ಲಸ್ ಸಿವಿಟಿ, ಆಸ್ಟ(ಒ) ಸಿವಿಟಿ ಸ್ಥಗಿತಗೊಂಡಿವೆ. ಡೀಸೆಲ್ ಎಂಜಿನ್ನ ಎಲ್ಲಾ ರೂಪಾಂತರಗಳನ್ನು ಸ್ಥಗಿತಗೊಳಿಸಲಾಗಿದೆ.
ಒಟ್ಟಾರೆಯಾಗಿ 12 ರೂಪಾಂತರಗಳಲ್ಲಿರುವ ಹ್ಯುಂಡೈ ಐ20 ಆವೃತ್ತಿಗಳಲ್ಲಿ 4 ಆವೃತ್ತಿಗಳನ್ನು ಮಾತ್ರ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಉಳಿದ ರೂಪಾಂತರಗಳನ್ನು ಸ್ಥಗಿತಗೊಳಿಸಲಾಗುತ್ತದೆ.
ಬಿಡುಗಡೆಯಾಗಲಿರುವ ಹೊಸ ತಲೆಮಾರಿನ ಐ20 ಕಾರಿನಲ್ಲಿ ಸನ್ರೂಫ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಇದರಲ್ಲಿ ಹೊಸ ಐ20 ಕಾರು ಹೊಸದಾಗಿ ಫ್ರಂಟ್ ಬಂಪರ್, ಮೆಶ್ ಗ್ರಿಲ್, ಹ್ಯಾಲೊಜೆನ್ ಹೆಡ್ಲ್ಯಾಂಪ್, ಹೆಡ್ಲ್ಯಾಂಪ್ ಕ್ಲಸ್ಟರ್, ಅಲಾಯ್ ವ್ಹೀಲ್, ವೈಡರ್ ಒಆರ್ವಿಎಂ ಮತ್ತು ಡಿಸ್ಕ್ ಬ್ರೇಕ್ಗಳನ್ನು ಅಳವಡಿಸಲಾಗಿದೆ.
ಹೊಸ ಐ20 ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರಲೆಸ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ದೊಡ್ಡ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ಮತ್ತು ಹ್ಯುಂಡೈನ ಬ್ಲೂಲಿಂಕ್ ಕನಕ್ಟಿವಿಟಿ ತಂತ್ರಜ್ಞಾನವನ್ನು ಹೊಂದಿರಲಿದೆ.
ಹೊಸ ಹ್ಯುಂಡೈ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಪ್ರಸ್ತುತ ಕಾರಿನಲ್ಲಿರುವ 1.4 ಲೀಟರ್ ಡೀಸೆಲ್ ಯುನಿಟ್ ಎಂಜಿನ್ ಅನ್ನು ಬದಲಾಯಿಸಲಾಗುತ್ತದೆ. ಹೊಸ ಡೀಸೆಲ್ ಎಂಜಿನ್ ಕಿಯಾ ಸೆಲ್ಟೋಸ್ನ ಎಂಜಿನ್ ಮಾದರಿಯಲ್ಲಿರಲಿದೆ. ಸೆಲ್ಟೋಸ್ ಕಾರಿನ ಎಂಜಿನ್ 115 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಪ್ರಸ್ತುತ ತಲೆಮಾರಿನ ಐ20 ಮೂರು ಪೆಟ್ರೋಲ್ ಮಾದರಿ ಮತ್ತು ಒಂದು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮಾದರಿಗಳು 1.2 ಲೀಟರ್ ಎಂಜಿನ್ ಅನ್ನು ಹೊಂದಿದೆ ಮತ್ತು ಡೀಸೆಲ್ ಮಾದರಿಯು 1.4 ಲೀಟರ್ ಎಂಜಿನ್ ಅನ್ನು ಹೊಂದಿದೆ. ಪ್ರಸ್ತುತ ಹ್ಯುಂಡೈ ಐ20 ಕಾರು ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.7.74 ಲಕ್ಷದಿಂದ 9.93 ಲಕ್ಷ ಬೆಲೆಯನ್ನು ಹೊಂದಿದೆ.
ಹ್ಯುಂಡೈ ಐ20 ಕಾರ್ ಅನ್ನು ಮೊದಲ ಬಾರಿಗೆ ಪ್ಯಾರಿಸ್ ಮೋಟಾರ್ ಶೋದಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಜಾಗತಿಕವಾಗಿ ಮೂರು ಮತ್ತು ಐದು ಡೋರ್ ಆವೃತ್ತಿಗಳಲ್ಲಿ ಲಭ್ಯವಿದೆ. ಎರಡನೇ ತಲೆಮಾರಿನ ಐ20 ಕಾರನ್ನು 2014ರಲ್ಲ ಬಿಡುಗಡೆಗೊಳಿಸಲಾಗಿತ್ತು ಮತ್ತು 2015ರಲ್ಲಿ ಇಂಡಿಯಾ ಕಾರ್ ಆಫ್ ದಿ ಇಯರ್ ಅನ್ನು ಗೆದ್ದುಕೊಂಡಿತ್ತು.
ಎರಡನೇ ತಲೆಮಾರಿನ ಐ20 ಮಾದರಿಗಳು ಹ್ಯುಂಡೈನ 'ಫ್ಲೂಯಿಡಿಕ್ ಸ್ಕಲ್ಪ್ಚರ್ 2.0' ವಿನ್ಯಾಸವನ್ನು ಹೊಂದಿದೆ. ಇದನ್ನು ಜರ್ಮನಿಯ ರಸ್ಸೆಲ್ಶೈಮ್ನಲ್ಲಿರುವ ಹ್ಯುಂಡೈನ ವಿನ್ಯಾಸ ಕೇಂದ್ರದಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ಐ20 ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಬಲೆನೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡಲಿದೆ.