Just In
Don't Miss!
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Movies
ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಗಲಿದೆ 520 ಕಿ.ಮೀ ಮೈಲೇಜ್ ನೀಡುವ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು
ಮಹಾಮಾರಿ ಕೊರೊನಾ ಅಟ್ಟಹಾಸದಿಂದ ಈ ವರ್ಷ ನಡೆಯಬೇಕಿದ್ದ ಹಲವು ಮೋಟಾರ್ ಶೋಗಳು ರದ್ದುಗೊಳಿಸಿದ್ದರು. ಇದೀಗ ಕೊರೊನಾ ಮಹಮಾರಿ ಅಟ್ಟಹಾಸ ಇಳಿಕೆಯಾಗಿರುವುದರಿಂದ ಅದರ ತಾಯಿನಾಡು ಚೀನಾದಲ್ಲೇ 2020ರ ಗುವಾಂಝು ಮೋಟಾರ್ ನಡೆಯುತ್ತಿದೆ.

ಚೀನಾದಲ್ಲಿ ನಡೆಯುತ್ತಿರುವ ಈ ಮೋಟಾರ್ ಶೋನಲ್ಲಿ ಹಲವಾರು ಜನಪ್ರಿಯ ವಾಹನ ತಯಾರಕರು ಪಾಲ್ಗೊಂಡಿದ್ದಾರೆ. ಅಲ್ಲಿ ಅವರು ತಮ್ಮ ಇತ್ತೀಚಿನ ಮಾದರಿಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಿಸುತ್ತಾರೆ. ಈ ಆಟೋ ಶೋನಲ್ಲಿ ಹ್ಯುಂಡೈ ಕಂಪನಿಯು ತನ್ನ ಹೊಸ ಮಿಸ್ಟ್ರಾ ಎಲೆಕ್ಟ್ರಿಕ್ ಸೆಡಾನ್ ಅನ್ನು ಪ್ರದರ್ಶಿಸಲಾಗಿದೆ. ಈ ಹೊಸ ಮಿಸ್ಟ್ರಾ ಎಲೆಕ್ಟ್ರಿಕ್ ಸೆಡಾನ್ ಅನ್ನು ಹ್ಯುಂಡೈ ಕಂಪನಿಯು ಚೀನಾ ಮಾರುಕಟ್ಟೆಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಹೊಸ ಹ್ಯುಂಡೈ ಮಿಸ್ಟ್ರಾ ಎಲೆಕ್ಟ್ರಿಕ್ ಕಾರು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಹೊಸ ಹ್ಯುಂಡೈ ಮಿಸ್ಟ್ರಾ ಎಲೆಕ್ಟ್ರಿಕ್ ಕಾರು ಸುಮಾರು 520 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹ್ಯುಂಡೈ ಮತ್ತು ಬಿಎಐಸಿ ಕಂಪನಿಗಳು ಜಂಟಿಯಾಗಿ ಮಿಸ್ಟ್ರಾ ಎಲೆಕ್ಟ್ರಿಕ್ ಕಾರನ್ನು ತಯಾರಿಸಲಾಗುತ್ತದೆ. ಇನ್ನು ಹೊಸ ಹ್ಯುಂಡೈ ಮಿಸ್ಟ್ರಾ ಎಲೆಕ್ಟ್ರಿಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹ್ಯುಂಡೈ ತನ್ನ ಆ ಪರಂಪರಾಗತ ವಿನ್ಯಾಸ ಶೈಲಿಯನ್ನು ಈ ಹೊಸ ಮಿಸ್ಟ್ರಾ ಎಲೆಕ್ಟ್ರಿಕ್ ಕಾರಿಗೂ ನೀಡಿದೆ.

ಈ ಹೊಸ ಹ್ಯುಂಡೈ ಮಿಸ್ಟ್ರಾ ಎಲೆಕ್ಟ್ರಿಕ್ ಕಾರು ಫಾಸಿಕ ನಯವಾದ ಸ್ಟೈಲಿಂಗ್ ಅನ್ನು ಹೊಂದಿದ್ದು, ಇದು ಕ್ರೋಮ್ ಫಿನಿಶಿಂಗ್ ಅನ್ನು ಹೊಂದಿದ್ದರೆ, ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಈ ಕಾರಿನ ಮುಂಭಾಗದಲ್ಲಿ ಉದ್ದಕ್ಕೆ ಗ್ರಿಲ್ ಅನ್ನು ಹೊಂದಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹ್ಯುಂಡೈ ಮಿಸ್ಟ್ರಾ ಎಲೆಕ್ಟ್ರಿಕ್ ಸೆಡಾನ್ 4,780 ಎಂಎಂ ಉದ್ದ, 1,815 ಎಂಎಂ ಅಗಲ ಮತ್ತು 1,460 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು 2,770 ಎಂಎಂ ಉದ್ದದ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಹೊಸ ಹ್ಯುಂಡೈ ಮಿಸ್ಟ್ರಾ ಎಲೆಕ್ಟ್ರಿಕ್ ಕಾರಿನ ಕ್ಯಾಬಿನ್ ನಲ್ಲಿ ಸೌಕರ್ಯಗಳು ಮತ್ತು ತಂತ್ರಜ್ಞಾನಗಳನ್ನು ಪಡೆಯುತ್ತದೆ. ಈ ಕಾರಿನ ಇಂಟಿರಿಯರ್ ನಲ್ಲಿ ಇದು 12.3 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 12.3 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಡ್ರೈವರ್ ಅಸಿಸ್ಟ್ ಗಳನ್ನು ಹೊಂದಿವೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದರೊಂದಿಗೆ ನೋರಮಿಕ್ ಸನ್‌ರೂಫ್ ಮತ್ತು ಸರೌಂಡ್ ವ್ಯೂ ಮಾನಿಟರ್ ಅನ್ನು ಒಳಗೊಂಡಿವೆ, ಇನ್ನು ಸುರಕ್ಷತೆಗಾಗಿ ಫಾರ್ವರ್ಡ್ ಕಾಲಿಷನ್ ಅವೈಡನ್ಸ್ ಸಿಸ್ಟಂ, ಹೈವೇ ಡ್ರೈವಿಂಗ್ ಅಸಿಸ್ಟ್ ಮತ್ತು ನ್ಯಾವಿಗೇಷನ್ ಆಧಾರಿತ ಕ್ರೂಸ್ ಕಂಟ್ರೋಲ್ ಜೊತೆಗೆ ಹಿಂಭಾಗದ ಕ್ರಾಸ್ ಟ್ರಾಫಿಕ್ ಅಲರ್ಟ್ ಅನ್ನು ಹೊಂದಿದೆ.

ಹೊಸ ಹ್ಯುಂಡೈ ಮಿಸ್ಟ್ರಾ ಎಲೆಕ್ಟ್ರಿಕ್ ಕಾರು 56.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಮೂಲಕ ಪವರ್ ಮತ್ತು ಟಾರ್ಕ್ ಫಿಗರ್‌ಗಳನ್ನು ಕ್ರಮವಾಗಿ 181 ಬಿಹೆಚ್‍ಪಿ ಪವರ್ ಮತ್ತು 310 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಹ್ಯುಂಡೈ ಮಿಸ್ಟ್ರಾ ಎಲೆಕ್ಟ್ರಿಕ್ ಕಾರು ಪೂರ್ಣ ಪ್ರಮಾಣದ ಚಾರ್ಜ್ ಆಗಲು 9.5 ಗಂಟೆಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತದೆ. ಇನ್ನು 40 ನಿಮಿಷಗಳ ಅವಧಿಯಲ್ಲಿ ಶೇ.30-80 ರಷ್ಟು ಚಾರ್ಜ ಆಗುತದೆ.