ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ವಿಟಾರಾ ಬ್ರೆಝಾ ಹಿಂದಿಕ್ಕಿದ ವೆನ್ಯೂ

ಕರೋನಾ ವೈರಸ್ ಹಿನ್ನಲೆಯಲ್ಲಿ ಸದ್ಯಕ್ಕೆ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಗೊಳಿಸಿದ್ದು, ಆಟೋ ಉದ್ಯಮದಲ್ಲಿನ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿವೆ. ಆದರೆ ಕಳೆದ ತಿಂಗಳು ಲಾಕ್ ಡೌನ್ ವಿಧಿಸುವುದಕ್ಕೂ ಮುನ್ನ ಮಾರಾಟಗೊಂಡ ಕಾರುಗಳ ಮಾರಾಟ ಪಟ್ಟಿ ಲಭ್ಯವಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ವೆನ್ಯೂ ಕಾರು ವಿಟಾರಾ ಬ್ರೆಝಾ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ವಿಟಾರಾ ಬ್ರೆಝಾ ಹಿಂದಿಕ್ಕಿದ ವೆನ್ಯೂ

ಮಾರ್ಚ್ ತಿಂಗಳ ಮೊದಲ 15 ದಿನಗಳ ಅವಧಿಯಲ್ಲಿ ಮಾತ್ರ ಕಾರು ಮಾರಾಟ ಪ್ರಕ್ರಿಯೆ ನಡೆದಿದ್ದು, ಈ ವೇಳೆ ಹ್ಯುಂಡೈ ವೆನ್ಯೂ ಕಾರು ಮಾದರಿಯು ಮಾರುತಿ ಸುಜುಕಿ ಹೊಸ ವಿಟಾರಾ ಬ್ರೆಝಾ ಆವೃತ್ತಿಯನ್ನು ಹಿಂದಿಕ್ಕಿ 6,127 ಯುನಿಟ್ ಮಾರಾಟಗೊಂಡಿದೆ. ಇದೇ ವೇಳೆ ವಿಟಾರಾ ಬ್ರೆಝಾ ಕಾರು 5,513 ಯುನಿಟ್ ಮಾರಾಟಗೊಂಡಿದ್ದು, ಅವಧಿಯಗೂ ಮುನ್ನವೇ ಬಿಎಸ್-6 ವೈಶಿಷ್ಟ್ಯತೆಯ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಬಿಡುಗಡೆಗೊಂಡ ವೆನ್ಯೂ ಕಾರು ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನಕ್ಕೇರಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ವಿಟಾರಾ ಬ್ರೆಝಾ ಹಿಂದಿಕ್ಕಿದ ವೆನ್ಯೂ

ಆದರೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು ಸದ್ಯಕ್ಕೆ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಬಿಎಸ್-6 ಜಾರಿಗೂ ಮುನ್ನವೇ ಬ್ರೆಝಾ ಕಾರಿನಲ್ಲಿ ಡೀಸೆಲ್ ಎಂಜಿನ್ ತೆಗೆದುಹಾಕಿರುವ ಮಾರುತಿ ಸುಜುಕಿಯು ಪೆಟ್ರೋಲ್ ಕಾರುಗಳ ಮೇಲೆ ಹೆಚ್ಚು ಗಮನಹರಿಸಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ವಿಟಾರಾ ಬ್ರೆಝಾ ಹಿಂದಿಕ್ಕಿದ ವೆನ್ಯೂ

ಇನ್ನು ಹ್ಯುಂಡೈ ವೆನ್ಯೂ ಕಾರು ಸದ್ಯ ಬಿಎಸ್-6 ಎಂಜಿನ್ ಖರೀದಿಗೆ ಲಭ್ಯವಾಗಿದ್ದು, ವೆನ್ಯೂ ಕಾರಿನಲ್ಲಿ ಇನ್ಮುಂದೆ ಹೊಸದಾಗಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ ಖರೀದಿಗೆ ಲಭ್ಯವಿರಲಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ವಿಟಾರಾ ಬ್ರೆಝಾ ಹಿಂದಿಕ್ಕಿದ ವೆನ್ಯೂ

ಹಾಗೆಯೇ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆವೃತ್ತಿಯು ಸಹ ಖರೀದಿಗೆ ಲಭ್ಯವಿರಲಿದ್ದು, ಈ ಮೂಲಕ ಹೊಸ ವೆನ್ಯೂ ಡೀಸೆಲ್ ಮಾದರಿಯು ಕ್ರೆಟಾ ಮತ್ತು ಸೆಲ್ಟೊಸ್ ಡೀಸೆಲ್ ಕಾರುಗಳಿಗೆ ಸರಿಸಮನಾಗಿದೆ. ಜೊತೆಗೆ ಪೆಟ್ರೋಲ್ ಎಂಜಿನ್‌ನಲ್ಲೂ ಮಹತ್ವದ ಬದಲಾವಣೆ ತರಲಾಗಿದ್ದು, 1.2-ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದರೂ ಹೊಸ ಎಮಿಷನ್ ನಿಯಮದಿಂದಾಗಿ ಪರ್ಫಾಮೆನ್ಸ್‌ನಲ್ಲಿ ತುಸು ಹೆಚ್ಚಳ ಮಾಡಲಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ವಿಟಾರಾ ಬ್ರೆಝಾ ಹಿಂದಿಕ್ಕಿದ ವೆನ್ಯೂ

ಇದರಲ್ಲಿ ಹೊಸದಾಗಿ ಪರಿಚಯಿಸಿರುವ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಸದ್ಯ ಮಾರುಕಟ್ಟೆಯಲ್ಲಿರುವ ಸೆಲ್ಟೊಸ್‌ನಿಂದ ಎರವಲು ಪಡೆಯಲಾಗಿದ್ದು,ಕಾರು ಮಾದರಿಯ ಅನುಗುಣವಾಗಿ ಹಾರ್ಸ್ ಪವರ್ ಉತ್ಪಾದನೆಯಲ್ಲಿ ಬದಲಾವಣೆ ಮಾಡಲಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ವಿಟಾರಾ ಬ್ರೆಝಾ ಹಿಂದಿಕ್ಕಿದ ವೆನ್ಯೂ

ಬಿಎಸ್-6 ವೆನ್ಯೂ ಕಾರು ಬಿಎಸ್-6 ನಂತರ ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.70 ಲಕ್ಷದಿಂದ(ಪೆಟ್ರೋಲ್) ಟಾಪ್ ಎಂಡ್ ಮಾದರಿಯು ರೂ.11.50 ಲಕ್ಷ(ಪೆಟ್ರೋಲ್) ಬೆಲೆ ಪಡೆದುಕೊಂಡಿದ್ದು, 1.5-ಲೀಟರ್ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 8.09 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.11.49 ಲಕ್ಷ ಬೆಲೆ ಹೊಂದಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ವಿಟಾರಾ ಬ್ರೆಝಾ ಹಿಂದಿಕ್ಕಿದ ವೆನ್ಯೂ

ಹೊಸ ಎಂಜಿನ್ ನಂತರ ವೆನ್ಯೂ ಕಾರು ರೂ. 19 ಸಾವಿರದಿಂದ ರೂ.55 ಸಾವಿರದಷ್ಟು ಹೆಚ್ಚಳವಾಗಿದ್ದು, ಎಂಜಿನ್ ಹೊರತಾಗಿ ಹೊಸ ಕಾರಿನಲ್ಲಿ ಯಾವುದೇ ಹೆಚ್ಚುವರಿ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡಲಾಗಿಲ್ಲ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ವಿಟಾರಾ ಬ್ರೆಝಾ ಹಿಂದಿಕ್ಕಿದ ವೆನ್ಯೂ

ವೆನ್ಯೂ ಸದ್ಯ ಹ್ಯುಂಡೈ ನಿರ್ಮಾಣದ ಇತರೆ ಕಾರುಗಳಿಂತಲೂ ಅತಿ ವಿನೂತನ ತಂತ್ರಜ್ಞಾನ ಸೌಲಭ್ಯಗಳನ್ನು ಹೊತ್ತು ಬಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 5 ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಹೊಸ ಕಾರು ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ವಿಟಾರಾ ಬ್ರೆಝಾ ಹಿಂದಿಕ್ಕಿದ ವೆನ್ಯೂ

ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್, ISOFIX ಸೀಟ್, ಹೊಂದಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

Most Read Articles

Kannada
English summary
Hyundai Venue Beats Maruti Suzuki Vitara Brezza to Become Best-Selling Compact SUV in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X