ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಾದ ವೆನ್ಯೂ ಬೆಲೆ ಹೆಚ್ಚಳ ಮಾಡಿದ್ದು, ಬೆಲೆ ಹೆಚ್ಚಳದ ನಂತರ ವೆನ್ಯೂ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.75 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.59 ಲಕ್ಷ ಬೆಲೆ ಪಡೆದುಕೊಂಡಿದೆ.

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ

ವೆನ್ಯೂ ಕಾರಿನ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹ್ಯುಂಡೈ ಕಂಪನಿಯು ರೂ. 5 ಸಾವಿರದಿಂದ ರೂ.12 ಸಾವಿರ ತನಕ ಹೆಚ್ಚಳ ಮಾಡಿದ್ದು, ಪ್ರಮುಖ 5 ವೆರಿಯೆಂಟ್‌ಗಳನ್ನು ಬೇಡಿಕೆಯ ಆಧಾರದ ಮೇಲೆ ಸ್ಥಗಿತಗೊಳಿಸಿದೆ. ವೆನ್ಯೂ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಈ ಹಿಂದೆ ಒಟ್ಟು 5 ಪ್ರಮುಖ ವೆರಿಯೆಂಟ್‌ಗಳೊಂದಿಗೆ 21 ಸಬ್ ವೆರಿಯೆಂಟ್ ಪರಿಚಯಿಸಿದ್ದ ಹ್ಯುಂಡೈ ಕಂಪನಿಯು ಇದೀಗ ಸಬ್ ವೆರಿಯೆಂಟ್‌ಗಳ ಸಂಖ್ಯೆಯನ್ನು 19ಕ್ಕೆ ಇಳಿಕೆ ಮಾಡುವ ಮೂಲಕ ಬೇಡಿಕೆಯಿಲ್ಲದ ಮಧ್ಯಮ ಕ್ರಮಾಂಕದ ವೆರಿಯೆಂಟ್‌ಗಳನ್ನು ತೆಗೆದುಹಾಕಿದೆ.

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ

ದೇಶಿಯ ಮಾರುಕಟ್ಟೆಯ ಕಾರು ಮಾರಾಟದಲ್ಲಿನ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ವೆನ್ಯೂ ನಂ.1 ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಇತ್ತೀಚೆಗೆ ಬಿಡುಗಡೆಯಾದ ಕಿಯಾ ಸೊನೆಟ್ ಕಾರು ಮಾದರಿಗಳ ನಡುವೆ ಭಾರೀ ಪೈಪೋಟಿಯಿದೆ.

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ

2019 ಮೇ ಅವಧಿಯಲ್ಲಿ ಬಿಡುಗಡೆಗೊಂಡಿದ್ದ ಹ್ಯುಂಡೈ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಬಿಡುಗಡೆಯಾದ ಕೆಲವೇ ಒಂದೇ ವರ್ಷದ ಅವಧಿಯಲ್ಲಿ 1 ಲಕ್ಷಕ್ಕೂ ಅಧಿಕ ಕಾರು ಮಾರಾಟ ದಾಖಲೆ ಕಂಡಿದ್ದು, ಟಾಪ್ ಎಂಡ್ ಮಾದರಿಯಾದ 1.0-ಲೀಟರ್ ಟರ್ಬೋ ಎಂಜಿನ್ ಮಾದರಿಗೆ ಅತಿ ಹೆಚ್ಚು ಬೇಡಿಕೆ ಹೊಂದಿದೆ.

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವೆನ್ಯೂ ಮಾದರಿಯಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಇದು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಿಂತಲೂ ಹೆಚ್ಚಿನ ಪರ್ಫಾಮೆನ್ಸ್ ಮತ್ತು ತಾಂತ್ರಿಕವಾಗಿ ಬಲಿಷ್ಠ ಕಾರು ಮಾದರಿಯಾಗಿದೆ. ಹೀಗಾಗಿ ಸಾಕಷ್ಟು ಗ್ರಾಹಕರು ಬೆಲೆ ದುಬಾರಿಯಾಗಿದ್ದರೂ ಸಹ ಟಾಪ್ ಎಂಡ್ ಮಾದರಿಯ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹ್ಯುಂಡೈ ಕಂಪನಿಗೂ ಇದು ಭಾರೀ ಪ್ರಮಾಣದ ಲಾಭ ತಂದುಕೊಟ್ಟಿದೆ.

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ

ವೆನ್ಯೂ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದರೆ ಡಿಸೇಲ್ ಎಂಜಿನ್‌ನಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದ್ದು, ಇ, ಎಸ್, ಎಸ್ಎಕ್ಸ್, ಎಸ್ಎಕ್ಸ್(0) ಮತ್ತು ಎಸ್ಎಕ್ಸ್ ಪ್ಲಸ್ ವೆರಿಯೆಂಟ್‌ಗಳಲ್ಲಿ ಹೊಸ ವೆನ್ಯೂ ಕಾರು ಖರೀದಿಗೆ ಲಭ್ಯವಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ

ಮೊದಲ ಬಾರಿಗೆ ಬಿಡುಗಡೆಯಾದ ಸಂದರ್ಭದಲ್ಲಿ ಬಿಎಸ್-4 ಎಂಜಿನ್ ಹೊಂದಿದ್ದ ವೆನ್ಯೂ ಕಾರು ಇದೀಗ ಹೊಸ ಎಮಿಷನ್ ನಿಯಮದಂತೆ ಬಿಎಸ್-6 ಎಂಜಿನ್ ಆಯ್ಕೆ ಹೊಂದಿದ್ದು, 1.2-ಲೀಟರ್ ಕಪ್ಪಾ ಪೆಟ್ರೋಲ್, 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಜೋಡಣೆ ಮಾಡಲಾಗಿದೆ.

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ

ಬಿಎಸ್-4 ಎಂಜಿನ್ ಆಯ್ಕೆಯಲ್ಲಿ 1.2-ಲೀಟರ್ ಪೆಟ್ರೋಲ್, 1.4-ಲೀಟರ್ ಡೀಸೆಲ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದ ವೆನ್ಯೂ ಕಾರಿನಲ್ಲಿ ಬಿಎಸ್-6 ಎಮಿಷನ್ ಕಡ್ಡಾಯ ನಂತರ 1.4-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಹೊಸದಾಗಿ ಅಭಿವೃದ್ದಿಪಡಿಸಲಾಗಿದ್ದ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ

ಈ ಮೂಲಕ ತಾಂತ್ರಿಕವಾಗಿ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿರುವ ವೆನ್ಯೂ ಕಾರು 33 ಫೀಚರ್ಸ್‌ಗಳನ್ನು ಹೊಂದಿರುವ ಬ್ಯೂ ಲಿಂಕ್ ಕನೆಕ್ಟಿವಿಟಿ ಸೌಲಭ್ಯವನ್ನು ಸಹ ಹೊಂದಿದ್ದು, ಹೊಸ ಕಾರಿಗೆ ಗರಿಷ್ಠ ಭದ್ರತೆಯನ್ನು ದೊರೆಯಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ

ಹೊಸ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್, ISOFIX ಸೀಟ್, ಹೊಂದಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

Most Read Articles

Kannada
English summary
Hyundai Venue Compact SUV Price Hiked. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X