ಮಧ್ಯಮ ಕ್ರಮಾಂಕದ ಸೆಡಾನ್‌ಗಳಲ್ಲಿ ಡೀಸೆಲ್ ಎಂಜಿನ್ ಹೊಂದಿರುವುದು ಇದೊಂದೆ ಕಾರು

ಬಿಎಸ್-6 ಎಮಿಷನ್ ಜಾರಿ ನಂತರ ಬಹುತೇಕ ಕಾರು ಉತ್ಪಾದನಾ ಕಂಪನಿಗಳು ಈ ಹಿಂದಿನ ಡೀಸೆಲ್ ಎಂಜಿನ್ ಮಾದರಿಗಳ ಮಾರಾಟವನ್ನೇ ಸ್ಥಗಿತಗೊಳಿಸಿದ್ದು, ಬಹುತೇಕ ಸಿ ಸೆಡಾನ್ ಸೆಗ್ಮೆಂಟ್ ಕಾರುಗಳಲ್ಲಿ ಇದೀಗ ಪೆಟ್ರೋಲ್ ಎಂಜಿನ್ ಮಾತ್ರ ಖರೀದಿಗೆ ಲಭ್ಯವಿದೆ.

ಸಿ ಸೆಗ್ಮೆಂಟ್ ಸೆಡಾನ್‌ನಲ್ಲಿ ಡೀಸೆಲ್ ಹೊಂದಿರುವುದು ಇದೊಂದೆ ಕಾರು

ಹ್ಯುಂಡೈ ಬಿಎಸ್-6 ವೆರ್ನಾ ಮಾದರಿಯೊಂದನ್ನು ಹೊರತುಪಡಿಸಿ ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ, ಟೊಯೊಟಾ ಯಾರಿಸ್, ಸ್ಕೋಡಾ ರ‍್ಯಾಪಿಡ್ ಸೇರಿದಂತೆ ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲೂ ಇದೀಗ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿಲ್ಲ. ಹ್ಯುಂಡೈ ವೆರ್ನಾ ಕಾರು ಮಾತ್ರವೇ ಹೊಸದಾಗಿ ಅಭಿವೃದ್ದಿಗೊಳಿಸಲಾದ 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಇನ್ನುಳಿದ ಕಾರು ಮಾದರಿಗಳಲ್ಲಿ ಸಾಮಾನ್ಯ ಹಾಗೂ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿವೆ.

ಸಿ ಸೆಗ್ಮೆಂಟ್ ಸೆಡಾನ್‌ನಲ್ಲಿ ಡೀಸೆಲ್ ಹೊಂದಿರುವುದು ಇದೊಂದೆ ಕಾರು

ಮಾರುತಿ ಸುಜುಕಿ ಸಿಯಾಜ್‌ನಲ್ಲಿ 1.5-ಲೀಟರ್ ಪೆಟ್ರೋಲ್, ಹೋಂಡಾ ಸಿಟಿನಲ್ಲಿ 1.5-ಲೀಟರ್ ಪೆಟ್ರೋಲ್, ಟೊಯೊಟಾ ಯಾರಿಸ್‌ನಲ್ಲಿ 1.5-ಲೀಟರ್, ಸ್ಕೋಡಾ ರ‍್ಯಾಪಿಡ್‌ನಲ್ಲಿ 1.0-ಟರ್ಬೋ ಪೆಟ್ರೋಲ್ ಮತ್ತು ಡಿಜೈರ್ ಕಂಪ್ಯಾಕ್ಟ್ ಸೆಡಾನ್‌ನಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ.

ಸಿ ಸೆಗ್ಮೆಂಟ್ ಸೆಡಾನ್‌ನಲ್ಲಿ ಡೀಸೆಲ್ ಹೊಂದಿರುವುದು ಇದೊಂದೆ ಕಾರು

ವೆರ್ನಾ ಸೆಡಾನ್‌ನಲ್ಲಿ ಮಾತ್ರವೇ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಜೋಡಣೆ ಮಾಡಲಾಗಿದ್ದು, ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿದೆ.

ಸಿ ಸೆಗ್ಮೆಂಟ್ ಸೆಡಾನ್‌ನಲ್ಲಿ ಡೀಸೆಲ್ ಹೊಂದಿರುವುದು ಇದೊಂದೆ ಕಾರು

ಮುಂಬರುವ ದಿನಗಳಲ್ಲಿ ಮಾರುತಿ ಸುಜುಕಿ ಸಿಯಾಜ್ ಮತ್ತು ಹೋಂಡಾ ಸಿಟಿ ಕಾರುಗಳ ಹೊಸ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ರ‍್ಯಾಪಿಡ್ ಕಾರಿನಲ್ಲಿ ಮಾತ್ರ ಇನ್ಮುಂದೆ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರವೇ ಲಭ್ಯವಿರಲಿದೆ.

ಸಿ ಸೆಗ್ಮೆಂಟ್ ಸೆಡಾನ್‌ನಲ್ಲಿ ಡೀಸೆಲ್ ಹೊಂದಿರುವುದು ಇದೊಂದೆ ಕಾರು

ಹೊಸ ಎಮಿಷನ್‌ನಿಂದಾಗಿ ಬಿಎಸ್-4 ಮಾದರಿಯ ಡೀಸೆಲ್ ಕಾರುಗಳು ಹೊಸ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸುವುದು ಆರ್ಥಿಕವಾಗಿ ಹೊರೆಯಾಗಲಿದ್ದು, ಈ ಹಿನ್ನಲೆಯಲ್ಲಿ ಹಲವು ಕಾರು ಕಂಪನಿಗಳು ಹಳೆಯ ಎಂಜಿನ್ ಉನ್ನತೀಕರಣ ಕೈಬಿಟ್ಟು ಹೊಸದಾಗಿ ನಿರ್ಮಾಣವಾದ ಎಂಜಿನ್ ಆಯ್ಕೆಯತ್ತ ಮುಂದಾಗಿವೆ.

ಸಿ ಸೆಗ್ಮೆಂಟ್ ಸೆಡಾನ್‌ನಲ್ಲಿ ಡೀಸೆಲ್ ಹೊಂದಿರುವುದು ಇದೊಂದೆ ಕಾರು

ಇದರಿಂದಾಗಿಯೇ ಬಹುತೇಕ ಸೆಡಾನ್ ಮಾದರಿಗಳಲ್ಲಿ ಸದ್ಯ ಪೆಟ್ರೋಲ್ ಮಾದರಿಗಳು ಮಾತ್ರವೇ ಖರೀದಿಗೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಂಡ ಡೀಸೆಲ್ ಎಂಜಿನ್ ಆಯ್ಕೆಯು ಲಭ್ಯವಾಗಬಹುದು.

ಸಿ ಸೆಗ್ಮೆಂಟ್ ಸೆಡಾನ್‌ನಲ್ಲಿ ಡೀಸೆಲ್ ಹೊಂದಿರುವುದು ಇದೊಂದೆ ಕಾರು

ಮತ್ತೊಂದು ಪ್ರಮುಖ ವಿಚಾರವೆಂದರೆ ಬಹುತೇಕ ಹೊಸ ಕಾರುಗಳ ಖರೀದಿದಾರರು ಡೀಸೆಲ್ ಎಂಜಿನ್ ಕಾರುಗಳಿಂತ ಹೆಚ್ಚಾಗಿ ಪೆಟ್ರೋಲ್ ಕಾರುಗಳ ಆಯ್ಕೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಡೀಸೆಲ್ ಕಾರುಗಳ ಆಯ್ಕೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎನ್ನಬಹುದು.

ಸಿ ಸೆಗ್ಮೆಂಟ್ ಸೆಡಾನ್‌ನಲ್ಲಿ ಡೀಸೆಲ್ ಹೊಂದಿರುವುದು ಇದೊಂದೆ ಕಾರು

ಇದಕ್ಕೆ ಕಾರಣ, ಮುಂಬರುವ ದಿನಗಳಲ್ಲಿ ಮಾಲಿನ್ಯದ ಕಾರಣಗಳಿಂದ ಡೀಸೆಲ್ ಕಾರು ಮಾದರಿಗಳ ಮೇಲೆ ನಿರ್ಬಂಧಗಳನ್ನು ವಿಧಿಸುತ್ತಿರುವುದು ಸಹ ಪೆಟ್ರೋಲ್ ಕಾರುಗಳ ಆಯ್ಕೆ ಹೆಚ್ಚಲು ಕಾರಣವಾಗಿದ್ದು, ಪೆಟ್ರೋಲ್ ಕಾರು ಮಾದರಿಗಳು ಡೀಸೆಲ್‌ಗಿಂತ ಮೈಲೇಜ್ ಕಡಿಮೆ ಎಂಬುವುದನ್ನು ಹೊರತುಪಡಿಸಿ ಹೈ ಪರ್ಫಾಮೆನ್ಸ್‌‌ನಿಂದಾಗಿ ಮತ್ತು ಕಡಿಮೆ ನಿರ್ವಹಣಾ ವೆಚ್ಚವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

Most Read Articles

Kannada
English summary
Hyundai Verna Is The Only C-Segment Diesel model In India Right Now. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X