ಹ್ಯುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಕ್ಸೆಂಟ್ ಕಾರಿನ ಹೆಸರು

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಎಕ್ಸೆಂಟ್ ಕಾರಿನ ಹೆಸರನ್ನು ತೆಗೆದುಹಕಲಾಗಿದೆ. ಹ್ಯುಂಡೈ ಕಂಪನಿಯು ಈ ಎಕ್ಸೆಂಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸುವ ಸಾಧ್ಯತೆಗಳಿದೆ.

ಹ್ಯುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಕ್ಸೆಂಟ್ ಕಾರಿನ ಹೆಸರು

ಹ್ಯುಂಡೈ ಕಂಪನಿಯು ಎಕ್ಸೆಂಟ್ ಕಾರಿನ ಉತ್ತರಾಧಿಕಾರಿಯಾಗಿ ಒರಾ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು, ಆದರೆ ಕೆಲವು ಹ್ಯುಂಡೈ ಫ್ಲೀಟ್ ಆಪರೇಟರ್‌ಗಳು ಎಕ್ಸೆಂಟ್ ಕಾರಿನ ಮಾರಾಟವನ್ನು ಮುಂದುವರಿಸಿದೆ. ಇದೀಗ ತನ್ನ ವೆಬ್‌ಸೈಟ್‌ನಿಂದ ಎಕ್ಸೆಂಟ್ ಕಾರಿನ ಹೆಸರನ್ನು ತೆಗೆದುಹಾಕಿರುವುದರಿಂದ ಅಧಿಕೃತವಾಗಿ ಸ್ಥಗಿತಗೊಳಿಸುವ ಸಾಧ್ಯತೆಗಳಿದೆ.

ಹ್ಯುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಕ್ಸೆಂಟ್ ಕಾರಿನ ಹೆಸರು

ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಕಾಂಪ್ಯಾಕ್ಟ್ ಸೆಡಾನ್‍ ಸೆಗ್‍‍ಮೆಂಟ್‍‍ನಲ್ಲಿ ಹ್ಯುಂಡೈ ಎಕ್ಸೆಂಟ್ ಸಾಕಷ್ಟು ಜನಪ್ರಿಯತೆಗಳಿಸಿತ್ತು. ಹ್ಯುಂಡೈ ಎಕ್ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಮಾರುತಿ ಸುಜುಕಿ ಡಿಜೈರ್ ಮತ್ತು ಹೋಂಡಾ ಅಮೇಝ್‍ ಕಾರುಗೆ ಪೈಪೋಟಿಯನ್ನು ನೀಡುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹ್ಯುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಕ್ಸೆಂಟ್ ಕಾರಿನ ಹೆಸರು

ಹ್ಯುಂಡೈ ಎಕ್ಸೆಂಟ್ ಹೆಚ್ಚಾಗಿ ಟ್ಯಾಕ್ಸಿ ಕ್ಯಾಬ್ ಆಗಿ ಬಳಸುತ್ತಾರೆ. ಹ್ಯುಂಡೈ ಕಂಪನಿಯು ಮಾರಾಟವನ್ನು ಹೆಚ್ಚಿಸುವ ಪ್ರಯತ್ನದಿಂದ ಈ ಕಾರನ್ನು ಟಾಕ್ಸಿ ವಿಭಾಗದಲ್ಲಿ ಮಾರಾಟ ಮಾಡಲಾಯಿತು. ಈ ಕಾರಣದಿಂದಾಗಿ ವೈಯಕ್ತಿಕ ಬಳಕೆಗೆ ಕಾರು ಖರೀದಿಸುವವರ ಸಂಖ್ಯೆ ಕಡಿಮೆಯಾಯ್ತು.

ಹ್ಯುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಕ್ಸೆಂಟ್ ಕಾರಿನ ಹೆಸರು

ಹ್ಯುಂಡೈ ಎಕ್ಸೆಂಡ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು. ಈ ಎಂಜಿನ್ 83 ಬಿಹೆಚ್‍‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹ್ಯುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಕ್ಸೆಂಟ್ ಕಾರಿನ ಹೆಸರು

ಇನ್ನು 1.2 ಲೀಟರ್ ಮೂರು-ಸಿಲಿಂಡರ್ ಡೀಸೆಲ್ ಎಂಜಿನ್ 75 ಬಿ‍ಹೆಚ್‍‍ಪಿ ಪವರ್ ಮತ್ತು 190 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಕ್ಸೆಂಟ್ ಕಾರಿನ ಹೆಸರು

ಹ್ಯುಂಡೈ ಎಕ್ಸೆಂಟ್ ಕಾರು 7 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಆ್ಯಪಲ್ ಕಾರ್‍‍ಪ್ಲೇ, ಆಂಡಾಯ್ಡ್ ಆಟೋ, ಎಸಿ ವೆಂಟ್ಸ್, ರಿವರ್ಸಿಂಗ್ ಕ್ಯಾಮೆರಾವನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹ್ಯುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಕ್ಸೆಂಟ್ ಕಾರಿನ ಹೆಸರು

ಈ ಕಾಂಪ್ಯಾಕ್ಟ್ ಸೆಡಾನ್‍‍‍ನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಲಾಗಿದೆ. ಸುರಕ್ಷತೆಗಾಗಿ ಸ್ಟ್ಯಾಂಡರ್ಡ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಜೊತೆಗೆ ಡ್ಯಯಲ್ ಏರ್‍‍ಬ್ಯಾಗ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ವೆಬ್‌ಸೈಟ್‌ನಿಂದ ಮರೆಯಾಯ್ತು ಎಕ್ಸೆಂಟ್ ಕಾರಿನ ಹೆಸರು

ಮುಖ್ಯವಾಗಿ ಟ್ಯಾಕ್ಸಿ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿರುವ ಎಕ್ಸೆಂಟ್ ಪ್ರೈಮ್ ಇನ್ನು ಲಭ್ಯವಿದೆ. ಈ ಕಾರು ಫ್ಯಾಕ್ಟ್ರಿ-ಫಿಟಡ್ ಸಿಎನ್‌ಜಿ ಕಿಟ್ ಅನ್ನು ಸಹ ಪಡೆಯುತ್ತದೆ. ಹ್ಯುಂಡೈ ಎಕ್ಸೆಂಟ್ ಪ್ರೈಮ್ ಕಾರಿನಲ್ಲಿ ಎಲೆಕ್ಟ್ರಾನಿಕ್ ಸ್ಪೀಡ್ ಲಿಮಿಟರ್ ಗಂಟೆಗೆ 80 ಕಿ.ಮೀ ಹೊಂದಿದೆ.

Most Read Articles

Kannada
English summary
Hyundai Xcent Removed From The Brand's Website. Read In Kannada.
Story first published: Friday, October 23, 2020, 20:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X