ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಫೇಸ್‌ಲಿಫ್ಟ್

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಫೇಸ್‌ಲಿಫ್ಟೆಡ್ ಕ್ಯಾಮ್ರಿ ಹೈಬ್ರಿಡ್ ಕಾರನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಟೊಯೊಟಾ ಕಂಪನಿಯು ಕ್ಯಾಮ್ರಿ ಫೇಸ್‌ಲಿಫ್ಟ್ ಅನ್ನು ಹಲವಾರು ಹೊಸ ಅಪ್ದೇಡ್ ಗಳೊಂದಿಗೆ ಅನಾವರಣಗೊಳಿಸಲಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಫೇಸ್‌ಲಿಫ್ಟ್

ಟೊಯೊಟಾ ಕ್ಯಾಮ್ರಿ ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮತ್ತು ಹೊಸ ಸುರಕ್ಷತಾ ಫೀಚರ್ ಗಳನ್ನು ಒಳಗೊಂಡಿದೆ. ಮುಂದಿನ ವರ್ಷದ ಆರಂಭದಲ್ಲಿ ಕ್ಯಾಮ್ರಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಟೊಯೊಟಾ ಕ್ಯಾಮ್ರಿ ಫೇಸ್‌ಲಿಫ್ಟ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ವಿಶಿಷ್ಟವಾದ ಟೊಯೊಟಾ ಶೈಲಿಯಲ್ಲಿ ಕಾಸ್ಮೆಟಿಕ್ ನವೀಕರಣಗಳನ್ನು ನಡೆಸಿದೆ. ಆದರೆ ಕಾರಿನ ಗ್ರಿಲ್ ಸೈಡ್ ಸಿಲ್ವರ್‌ ಕ್ರೋಮ್ ಫಿನಿಶಿಂಗ್ ಅನ್ನು ಹೊಂದಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಫೇಸ್‌ಲಿಫ್ಟ್

ಟೊಯೊಟಾ ಕ್ಯಾಮ್ರಿ ಫೇಸ್‌ಲಿಫ್ಟ್ ಕಾರು 17-ಇಂಚು ಮತ್ತು 18-ಇಂಚಿನ ಎರಡು ಗಾತ್ರಗಳಲ್ಲಿ ಲಭ್ಯವಿರುವ ಹೊಸ ಅಲಾಯ್ ವ್ಹೀಲ್ ಗಳನ್ನು ಹೊರತುಪಡಿಸಿ ಸೈಡ್ ಮತ್ತು ಹಿಂಭಾಗದ ಪ್ರೊಫೈಲ್ ಬದಲಾಗದೆ ಉಳಿದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಫೇಸ್‌ಲಿಫ್ಟ್

ಹೊಸ ಟೊಯೊಟಾ ಕ್ಯಾಮ್ರಿ ಫೇಸ್‌ಲಿಫ್ಟ್ ಕಾರಿನ ಒಳಭಾಗದ ವಿನ್ಯಾಸವು ಹೆಚ್ಚಾಗಿ ಬದಲಾಗದೆ ಇದ್ದರೂ, ಅದು ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಅನ್ನು ಪಡೆದುಕೊಂಡಿದೆ. ಪ್ರಿ-ಫೇಸ್‌ಲಿಫ್ಟ್ ಮಾದರಿಯಲ್ಲಿ, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಕೆಳಗಡೆ ಸೆಂಟರ್ ಎಸಿ ವೆಂಟ್ ಗಳನ್ನು ಕೆಳಗೆ ಇರಿಸಲಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಫೇಸ್‌ಲಿಫ್ಟ್

ಇದರೊಂದಿಗೆ ಈ ಹೊಸ ಕಾರಿನ ಇಂಟಿರಿಯರ್ ನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗೆ ಹೊಸ ಫ್ಲೋಟಿಂಗ್ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಫೇಸ್‌ಲಿಫ್ಟ್

ಫೇಸ್‌ಲಿಫ್ಟೆಡ್ ಕ್ಯಾಮ್ರಿ ಹೈಬ್ರಿಡ್‌ನಲ್ಲಿನ ಇತರ ಫೀಚರ್ ಗಳು ಹಿಂದಿನ ಮಾದರಿಗೆ ಹೋಲುತ್ತವೆ. ಇದು ಇದು ಒಂಬತ್ತು ಏರ್‌ಬ್ಯಾಗ್‌ಗಳು, ಎಬಿಎಸ್ ವಿಥ್ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಜೆಬಿಎಲ್ ಸೌಂಡ್ ಸಿಸ್ಟಂ ಅನ್ನು ಹೊಂದಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಫೇಸ್‌ಲಿಫ್ಟ್

ಇದರೊಂದಿಗೆ ಹೆಡ್ಸ್-ಅಪ್ ಡಿಸ್ ಪ್ಲೇ, ಎಲೆಕ್ಟ್ರಿಕ್ ಸನ್‌ರೂಫ್, ವೆಂಟಿಲೆಟಡ್ ಫ್ರಂಟ್ ಸೀಟ್, ಮೋರು ಜೋನ್ ಕ್ಲೈಮೇಂಟ್ ಕಂಟ್ರೋಲ್, ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡಬಹುದಾದ ಸ್ಟೀಯರಿಂಗ್, ಮತ್ತು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅನ್ನು ಒಳಗೊಂಡಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಫೇಸ್‌ಲಿಫ್ಟ್

ಭಾರತದಲ್ಲಿ ಬಿಡುಗಡೆಗೊಳಿಸುವಾಗ ಫೇಸ್‌ಲಿಫ್ಟೆಡ್ ಕ್ಯಾಮ್ರಿ ಹೈಬ್ರಿಡ್ ಕಾರಿನಲ್ಲಿ ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಅದೇ ರೀತಿಯ ಫಿಚರ್ ಗಳನ್ನು ಮುಂದುವರೆಸಬಹುದು ಎಂದು ನಿರೀಕ್ಷಿಸುತ್ತೇವೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಫೇಸ್‌ಲಿಫ್ಟ್

ಟೊಯೊಟಾ ಕ್ಯಾಮ್ರಿ ಫೇಸ್‌ಲಿಫ್ಟ್ ಕಾರಿನಲ್ಲಿ ಅದೇ 2.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್ಗೆ ಸಂಯೋಜಿಸಲಾಗಿದೆ. ಈ ಸಂಯೋಜಿತ ಎಂಜಿನ್ 218 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಸಿವಿಟಿ ಗೇರ್‌ಬಾಕ್ಸ್ ಮೂಲಕ ಮುಂಭಾಗದ ಟಯರ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

Most Read Articles

Kannada
Read more on ಟೊಯೊಟಾ toyota
English summary
India-bound Toyota Camry Hybrid Facelift Unveiled. Read In Kannada.
Story first published: Tuesday, November 24, 2020, 20:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X