Just In
- 14 min ago ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
- 1 hr ago ವಂದೇ ಭಾರತ್ ಸ್ಲೀಪರ್, ಸೂಪರ್ ಆಪ್.. ರೈಲ್ವೆಯಿಂದ ಬಿಗ್ ಪ್ಲ್ಯಾನ್: ನೀವು ತಿಳಿಯಬೇಕಾದ ವಿಚಾರಗಳಿವು!
- 1 hr ago ಕೋಟಿ ಬೆಲೆಯ ಲ್ಯಾಂಡ್ರೋವರ್ ಖರೀದಿಸಿದ ಗಾಯಕಿ: ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದ ನೆಟ್ಟಿಗರು!
- 3 hrs ago Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
Don't Miss!
- News ‘ಸೋಲಿನ ಭೀತಿಯಿಂದ ಕಮಲ-ದಳ ಮೈತ್ರಿ; ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು’
- Finance BMRCL: ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೊಸ ಪಾದಚಾರಿ ಸೇತುವೆ
- Technology ವಿವೋ T3x 5G ಫೋನಿನ ಫಸ್ಟ್ ಸೇಲ್ ಯಾವಾಗ?..ಆಫರ್ ಬೆಲೆ ಎಷ್ಟು?
- Lifestyle ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Movies "ದಪ್ಪ ಇದ್ದೀಯಾ ಅಂದ್ರೆ ದಿನ ಯಾರೊಂದಿಗೋ ಇದ್ದೀಯಾ ಅನ್ನೂ ಕೆಟ್ಟ ಮನ:ಸ್ಥಿತಿಯಿದೆ"; ನಟಿ ನೀತು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಪಾನ್ನಲ್ಲಿ ಸ್ಥಗಿತವಾಗಲಿದೆ ಭಾರತ ನಿರ್ಮಿತ ಮಾರುತಿ ಸುಜುಕಿ ಬಲೆನೊ ಕಾರು
ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಮಾರುತಿ ಫೇಸ್ಲಿಫ್ಟ್ ಕಾರನ್ನು ಮಾರಾಟ ಮಾಡಲಾಗುತ್ತಿದೆ.
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್(ಎಂಎಸ್ಐಎಲ್) ಸಂಸ್ಥೆಯು ರಫ್ತು ಮಾಡುವ ಕಾರುಗಳಲ್ಲಿ ಬಲೆನೂ ಕೂಡ ಒಂದಾಗಿದೆ. ಭಾರತದಲ್ಲಿ ನಿರ್ಮಿತಗೊಂಡ ಸುಜುಕಿ ಬಾಲೆನೊ ಕಾರು ಜಪಾನ್ ನಲ್ಲಿ ಸ್ಥಗಿತವಾಗಲಿದೆ ಎಂದು ವರದಿಗಳು ಪ್ರಕಟವಾಗಿದೆ. ಇದು ಜಾಪಾನಿನ ತಯಾರಕರು ಭಾರತದಿಂದ ಆಮದು ಮಾಡಿಕೊಳ್ಳುವ ಏಕೈಕ ಮಾದರಿಯಾಗಿದೆ. ಜಪಾನಿನ ಮಾರುಕಟ್ಟೆಯಲ್ಲಿ ಬಲನೊ ಕಾರು ಉತ್ತಮವಾಗಿ ಮಾರಾಟವನ್ನು ಕಾಣುತ್ತಿಲ್ಲ. ಜಪಾನ್ ಗ್ರಾಹಕರನ್ನು ಸೆಳೆಯುವಲ್ಲಿ ಭಾರತ ನಿರ್ಮಿತ ಬಲೆನೊ ಕಾರು ವೈಫಲ್ಯ ಕಂಡಿದೆ.
2016ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಬಲೆನೊ ಕಾರು ಜಪಾನ್ ದೇಶದ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ದಿ ಪಡಿಸಲಾಗಿದೆ. ಜಪಾನ್ ದೇಶದಲ್ಲಿ 2016ರಲ್ಲಿ ಬಿಡುಗಡೆಯಾದ ಈ ಕಾರು ಆರಂಭದಲ್ಲಿ ಕೇವಲ ಕೆ 12 ಸಿ 1.2-ಲೀಟರ್ ಡ್ಯುಯಲ್ಜೆಟ್ ಎನ್ಎ ಪೆಟ್ರೋಲ್ ನಾಲ್ಕು ಸಿಲಿಂಡರ್ ಎಂಜಿನ್ನೊಂದಿಗೆ ಮಾರಾಟ ಮಾಡಲಾಗುತ್ತಿತ್ತು.
MOST READ: ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್ಜಿ ಮಾದರಿ
ಈ ಎಂಜಿನ್ ಸುಮಾರು 6,000 ಆರ್ಪಿಎಂನಲ್ಲಿ 90 ಬಿಹೆಚ್ಪಿ ಪವರ್ ಮತ್ತು 4,400 ಆರ್ಪಿಎಂನಲ್ಲಿ 118 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತಿದ್ದರು. ಈ ಎಂಜಿನ್ ನೊಂದಿಗೆ ಸಿವಿಟಿ ಆಯ್ಕೆಯನ್ನು ನೀಡಿದ್ದರು.
ಕೆಲವು ತಿಂಗಳ ನಂತರ ಮಾರುತಿ ಸುಜುಕಿ ಕಂಪನಿಯು ತನ್ನ ಬಲೆನೊ ಮಾದರಿಯಲ್ಲಿ ಕೆ10 ಸಿ 1.0-ಲೀಟರ್ ಬೂಸ್ಟರ್ಜೆಟ್ ಟರ್ಬೊ ಪೆಟ್ರೋಲ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಿದರು. ಭಾರತದಲ್ಲಿ ಈ ಮಾದರಿಯನ್ನು ಬಲೆನೊ ಆರ್ಎಸ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.
MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಮಾರುತಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿ
ಆದರೆ ಮಾರುತಿ ಸುಜುಕಿ ಕಂಪನಿಯು ಈ ಆರ್ಎಸ್ ಮಾದರಿಯನ್ನು ಜನವರಿ ತಿಂಗಳಲ್ಲಿ ಸ್ಥಗಿತಗೊಳಿಸಲಾಯಿತು. ಈ ಕೆ10 ಸಿ 1.0-ಲೀಟರ್ ಬೂಸ್ಟರ್ಜೆಟ್ ಟರ್ಬೊ ಪೆಟ್ರೋಲ್ ಮೂರು-ಸಿಲಿಂಡರ್ ಎಂಜಿನ್ 5,500 ಆರ್ಪಿಎಂನಲ್ಲಿ 100 ಬಿಹೆಚ್ಪಿ ಪವರ್ ಮತ್ತು 4,500 ಆರ್ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಫೀಚರ್ ಗಳ ವಿಷಯದಲ್ಲಿ ಸುಜುಕಿ ಬಲೆನೊ ಭಾರತದಲ್ಲಿರುವ ಮಾದರಿಯಂತೆ ಬಹುತೇಕ ಒಂದೇ ರೀತಿಯಲ್ಲಿದೆ. ಆದರೆ ಜಪಾನ್ ಮಾನದಂಡಗಳ ಅನುಸರಿಸಲು ಮುಂಭಾಗ ಹಿಟಡ್ ಸೀಟುಗಳು, ಕ್ರೂಸ್ ಕಂಟ್ರೋಲ್, ಇಎಸ್ಪಿ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್ಎಲ್6
ಇನ್ನು ಸುಜುಕಿ ಬಲೆನೊ ಎನ್ಎ ಮಾದರಿಯು ಪ್ರತಿ ಲೀಟರ್ ಗೆ 24.6 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಬಲೆನೊ ಟರ್ಬೋ ಮಾದರಿಯು ಪ್ರತಿ ಲೀಟರ್ ಗೆ 19.6 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.
ಜಪಾನ್ ಮಾರುಕಟ್ಟೆಯಲ್ಲಿ ಭಾರತ ನಿರ್ಮಿತ ಸುಜುಕಿ ಬಲೆನೊ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಇದರಿಂದ ಜೂನ್ ತಿಂಗಳಲ್ಲಿ ಜಪಾನ್ ದೇಶದಲ್ಲಿ ಸುಜುಕಿ ಬಲೆನೊ ಕಾರನ್ನು ಸ್ಥಗಿತಗೊಳಿಸಲಿದೆ.