2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಕರೋನಾ ಅಬ್ಬರದ ನಡುವೆಯೇ ಈ ವರ್ಷ ಕೊನೆಗೊಳ್ಳುತ್ತಿದ್ದು, 2020ರಲ್ಲಿ ಭಾರತೀಯ ಆಟೋ ಉತ್ಪಾದನಾ ವಲಯವು ಕೂಡಾ ಹಲವಾರು ಏರಿಳಿತಗಳನ್ನು ಕಂಡಿದೆ. ಸಂಕಷ್ಟ ಪರಿಸ್ಥಿತಿಯಲ್ಲೂ ಆಟೋ ಉದ್ಯಮವು ಹಲವಾರು ಹೊಸ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, 2020ರ ಪ್ರಮುಖ ಸುದ್ದಿಗಳ ಹೈಲೆಟ್ಸ್ ಇಲ್ಲಿ ಚರ್ಚಿಸಲಾಗಿದೆ.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಆರ್ಥಿಕ ಹಿಂಜರಿತ, ಆಟೋ ಎಕ್ಸ್‌ಪೋ ಆಯೋಜನೆ, ಕರೋನಾ ವೈರಸ್ ಅಬ್ಬರದಿಂದ ಸೊನ್ನೆ ಸುತ್ತಿದ ವಾಹನ ಮಾರಾಟ, ಬಿಎಸ್-6 ಎಮಿಷನ್ ಜಾರಿ ಮತ್ತು ಕರೋನಾ ವೈರಸ್ ಅಬ್ಬರದ ನಡುವೆಯೂ ವಾಹನ ಮಾರಾಟದಲ್ಲಿ ಮತ್ತೆ ಚೇತರಿಕೆಯು ಕಂಡಿರುವುದು ಆಟೋ ಉದ್ಯಮದಲ್ಲಿನ ಈ ವರ್ಷದ ಪ್ರಮುಖ ಬೆಳವಣಿಗೆಗಳಾಗಿದ್ದು, ಪ್ರಸ್ತಕ ವರ್ಷದಲ್ಲಿ ಹಲವಾರು ಹೊಸ ವಾಹನಗಳು ಮಾರುಕಟ್ಟೆ ಪ್ರವೇಶಿಸಿದರೆ ಅಷ್ಟೇ ಪ್ರಮಾಣದಲ್ಲಿ ಹಲವು ವಾಹನಗಳ ಮಾರಾಟವು ಸ್ಥಗಿತಗೊಂಡಿವೆ. ಹಾಗಾದ್ರೆ 2020ರಲ್ಲಿ ನಡೆದ ಪ್ರಮುಖ ಆಟೋ ಉದ್ಯಮದಲ್ಲಿ ಘಟನೆಗಳು ಯಾವುವು ಎನ್ನುವುದನ್ನು ಇಲ್ಲಿ ನೋಡೋಣ.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಆಟೋ ಎಕ್ಸ್‌ಪೋ 2020

ಫೆಬ್ರುವರಿ 7ರಂದು ಆರಂಭಗೊಂಡ ದೆಹಲಿ ಆಟೋ ಎಕ್ಸ್‌ಪೋ ಹಲವಾರು ಹೊಸ ಮಾದರಿಯ ವಾಹನಗಳ ಅನಾವರಣಕ್ಕೆ ಪ್ರಮುಖ ವೇದಿಕೆಯಾಗಿತ್ತು. ಆಟೋ ಎಕ್ಸ್‌ಪೋದಲ್ಲಿ ಈ ಬಾರಿ ಅತಿ ಹೆಚ್ಚು ಗಮನಸೆಳೆದಿದ್ದು, ನ್ಯೂ ಜನರೇಷನ್ ವಾಹನ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳು ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಹಲವಾರು ವಾಹನಗಳು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದ್ದು, ಇನ್ನು ಹಲವು ವಾಹನಗಳು ಕರೋನಾ ವೈರಸ್ ಮಾಹಾಮಾರಿಯಿಂದಾಗಿ ಮುಂದೂಡಿಕೆಯಾಗಿವೆ. 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಹಲವು ಹೊಸ ವಾಹನಗಳು ಇದೀಗ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯ ಸಿದ್ದತೆಯಲ್ಲಿವೆ.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಬಿಎಸ್-6 ಎಮಿಷನ್ ಕಡ್ಡಾಯ

ಆಟೋ ಎಕ್ಸ್‌ಪೋ ನಂತರ ಆಟೋ ಉದ್ಯಮದಲ್ಲಿ ಜರುಗಿದ ಪ್ರಮಖ ಘಟನೆ ಅಂದರೆ ಬಿಎಸ್-6 ಎಮಿಷನ್‌ನತ್ತ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ. ಹೌದು, ಮಾಲಿನ್ಯ ತಡೆ ಉದ್ದೇಶದಿಂದ 2017ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶ ಅನ್ವಯ 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಹೊಸ ಎಮಿಷನ್ ಜಾರಿಗೆ ತರಲಾಯಿತು. ಆದರೆ ಹೊಸ ಆದೇಶ ಜಾರಿಗೆ ಮುನ್ನ ಬಿಎಸ್-4 ಸ್ಟಾಕ್ ಮಾರಾಟವನ್ನು ಪೂರ್ಣಗೊಳಿಸುವ ತವಕದಲ್ಲಿದ್ದ ಆಟೋ ಕಂಪನಿಗಳಿಗೆ ಲಾಕ್‌ಡೌನ್ ಬಿಸಿತುಪ್ಪವಾಗಿ ಪರಿಣಮಿಸಿತು.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಹೊಸ ಎಮಿಷನ್ ಜಾರಿಗೆ ಕೇವಲ 10 ದಿನ ಬಾಕಿಯಿರುವಾಗ ಕರೋನಾ ವೈರಸ್ ಪರಿಣಾಮ ಲಾಕ್‌ಡೌನ್ ಮಾಡಿದ ಪರಿಣಾಮ ಇಡೀ ಸ್ತಬ್ಧಗೊಳ್ಳುವ ಮೂಲಕ ಆಟೋ ಉದ್ಯಮವು ಸಂಕಷ್ಟಕ್ಕೆ ಸಿಲುಕಿತು. ಲಾಕ್‌ಡೌನ್ ಸಡಿಕೆಯ ನಂತರ ಹೆಚ್ಚುವರಿಯಾಗಿ 10 ಕಾಲ ಬಿಎಸ್-4 ವಾಹನಗಳ ಮಾರಾಟಕ್ಕೆ ಅವಕಾಶ ನೀಡಿದರೂ ಕೂಡಾ ಹಲವು ನಿರ್ಬಂಧಗಳ ನಡುವೆ ವಾಹನ ಕಂಪನಿಗಳು ಭಾರೀ ಸಂಕಷ್ಟ ಎದುರಿಸುವಂತಾಯಿತು.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಇದರ ನಡುವೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆರೋಪ ಎದುರಿಸಿದ ಆಟೋ ಕಂಪನಿಗಳು ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿನ ಮಟ್ಟದ ಬಿಎಸ್-4 ವಾಹನ ಮಾರಾಟ ಮಾಡಿ ಸಂಕಷ್ಟಕ್ಕೆ ಸಿಲುಕಿದವು. ಸುಮಾರು ಆರು ತಿಂಗಳ ಕಾಲ ನಡೆದ ವಿಚಾರಣೆ ನಂತರ ಹಲವು ಷರತ್ತುಗಳೊಂದಿಗೆ ಹೆಚ್ಚುವರಿ ಮಾರಾಟ ಮಾಡಲಾದ ವಾಹನಗಳ ನೋಂದಣಿ ಬಿಕ್ಕಟ್ಟನ್ನು ಬಗೆಹರಿಸಲಾಯಿತು.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಕರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಆಟೋ ಕಂಪನಿಗಳು

ಬಿಎಸ್-4 ವಾಹನಗಳ ಮಾರಾಟದ ಬಿಕ್ಕಟ್ಟು ಮತ್ತು ಕರೋನಾ ವೈರಸ್ ಕುಸಿದ ಮಾರಾಟದ ನಡುವೆಯೂ ಹಲವು ಆಟೋ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ನೀರಿಕ್ಷೆಗೂ ಮೀರಿ ಸರ್ಕಾರಕ್ಕೆ ಸಹಾಯಹಸ್ತ ಚಾಚಿದವು.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ವಾಹನಗಳ ಉತ್ಪಾದನೆಯು ಸಂಪೂರ್ಣವಾಗಿ ಸ್ತಬ್ಧವಾಗಿದ್ದರಿಂದ ಕರೋನಾ ವೈರಸ್ ಹೋರಾಟಕ್ಕೆ ಬೇಕಾದ ಮಾಸ್ಕ್, ಸ್ಯಾನಿಟೈಜರ್, ಪಿಪಿಇ ಕಿಟ್ ಮತ್ತು ವೆಂಟಿಲೆಟರ್ ಉತ್ಪಾದನೆಗೆ ಚಾಲನೆ ನೀಡಿದ ಆಟೋ ಕಂಪನಿಗಳು ಹೆಚ್ಚಿನ ಮಟ್ಟದ ದೇಣಿಗೆ ನೀಡಿದವು.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಟಾಟಾ ಮೋಟಾರ್ಸ್, ಟಿವಿಎಸ್ ಮೋಟಾರ್ಸ್, ಮಹೀಂದ್ರಾ, ಬಜಾಜ್ ಆಟೋ, ಹೀರೋ ಮೋಟೊಕಾರ್ಪ್ ಸೇರಿದಂತೆ ಹಲವು ಕಂಪನಿಗಳು ಹೆಚ್ಚಿನ ಮಟ್ಟದಲ್ಲಿ ದೇಣಿಗೆ ಸಲ್ಲಿಸುವ ಮೂಲಕ ಸಂಕಷ್ಟದಲ್ಲೂ ಸರ್ಕಾರದ ಜೊತೆಗೆ ಕೈಜೋಡಿಸಿದವು.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಏಪ್ರಿಲ್‌ನಲ್ಲಿ ಸೊನ್ನೆ ಸುತ್ತಿದ ವಾಹನ ಮಾರಾಟ

ಯುಗಾದಿಗೂ ಮುನ್ನ ಸ್ತಬ್ದವಾದ ಹೊಸ ವಾಹನ ಮಾರಾಟವು ಲಾಕ್‌ಡೌನ್ ವಿಸ್ತರಣೆಯಾಗುತ್ತಿದ್ದಂತೆ ಭಾರೀ ಸಂಕಷ್ಟಕ್ಕೆ ಸಿಲುಕಿದ ಆಟೋ ಕಂಪನಿಗಳಿಗೆ ಏಪ್ರಿಲ್‌ನಲ್ಲಿ ಒಂದೇ ಒಂದು ವಾಹನವನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಆಟೋ ಉದ್ಯಮದ ಇತಿಹಾಸದಲ್ಲೇ ಇಡೀ ಒಂದು ತಿಂಗಳ ಕಾಲ ವಾಹನ ಮಾರಾಟ ಸ್ಥಗಿತ ಪರಿಣಾಮ ಭಾರೀ ಪ್ರಮಾಣದ ಆರ್ಥಿಕ ಸಂಕಷ್ಟ ಎದುರಾಯಿತು. ಪರಿಣಾಮ ಉದ್ಯೋಗ ಕಡಿತ, ವೇತನದಲ್ಲಿ ಏರಿಳಿತವು ಆಟೋ ಉದ್ಯಮದಲ್ಲಿನ ಉದ್ಯೋಗಿಗಳಿಗೆ ಉದ್ಯೋಗದ ಅಭದ್ರತೆ ಭಾರೀ ತಲೆನೋವಾಗಿ ಪರಿಣಮಿಸುವಂತೆ ಮಾಡಿತ್ತು.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಮೇ 4ರಿಂದ ಸಡಿಕೆಯಾದ ಲಾಕ್‌ಡೌನ್ ನಂತರ ವಾಹನ ಮಾರಾಟವು ಪುನಾರಂಭವಾದರೂ ಆರ್ಥಿಕ ಸಂಕಷ್ಟವು ಹೊಸ ವಾಹನಗಳ ಖರೀದಿ ಮೇಲೆ ಭಾರೀ ಪರಿಣಾಮ ಉಂಟುಮಾಡಿತು. ವಾಹನ ಮಾರಾಟ ಸುಧಾರಣೆ ಆಟೋ ಉತ್ಪಾದನಾ ಕೈಗೊಂಡ ಹಲವಾರು ಆಕರ್ಷಕ ಆಫರ್‌ಗಳು ಮಾರಾಟವನ್ನು ಹಂತ ಹಂತವಾಗಿ ಸುಧಾರಣೆಗೊಳ್ಳುವಂತೆ ಮಾಡಿತು.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಆಟೋ ಕಂಪನಿಗಳಿಗೆ ವರವಾದ ದಸರಾ ಮತ್ತು ದೀಪಾವಳಿ

ಕರೋನಾ ವೈರಸ್ ಪರಿಣಾಮ ತೀವ್ರವಾಗಿ ಕುಸಿತ ಕಂಡಿದ್ದ ಭಾರತೀಯ ಆಟೋ ಉದ್ಯಮವು ಪರಿಸ್ಥಿತಿಗೆ ಅನುಗುಣವಾಗಿ ಇದೀಗ ಚೇತರಿಸಿಕೊಂಡಿದೆ. ಕೆಲವೇ ಕೆಲವು ಆಟೋ ಕಂಪನಿಗಳ ವಾಹನ ಮಾರಾಟದಲ್ಲಿ ಕುಸಿತ ಹೊರತುಪಡಿಸಿ ಹಲವು ಆಟೋ ಕಂಪನಿಗಳ ವಾಹನ ಮಾರಾಟವು ಸಾಕಷ್ಟು ಏರಿಕೆಯಾಗಿದೆ.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಕರೋನಾ ವೈರಸ್ ಭೀತಿಯ ನಡುವೆಯೂ ಹೊಸದಾಗಿ ಮಾರುಕಟ್ಟೆಗೆ ಪ್ರವೇಶಿಸಿರುವ ವಾಹನಗಳ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಹಲವು ಹೊಸ ವಾಹನ ಮಾರಾಟವು ಶೇ.50 ಕ್ಕಿಂತಲೂ ಹೆಚ್ಚು ಬೆಳವಣಿಗೆ ಸಾಧಿಸಿವೆ.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಮೇ ನಂತರದ ವಾಹನ ಮಾರಾಟವು ಕುಸಿತ ನಡುವೆಯೂ ಜೂನ್, ಜುಲೈ ಅಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಒಂದು ನಿಗದಿತ ಮಟ್ಟದಲ್ಲಿ ಬೇಡಿಕೆ ಪಡೆದುಕೊಂಡರೂ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿನ ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ ಆಟೋ ಉತ್ಪದನಾ ಕಂಪನಿಗಳು ನೀರಿಕ್ಷೆ ಮೀರಿ ವಾಹನಗಳನ್ನು ಮಾರಾಟ ಮಾಡಿದವು.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ದ್ವಿಚಕ್ರ ವಾಹನ, ಕಾರು ಮಾರಾಟ ಮತ್ತು ಕೃಷಿ ಚಟುವಟಿಕೆ ಪೂರಕವಾದ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಿನ ಮಟ್ಟದ ಬೆಳವಣಿಗೆ ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹರಿದುಬರುವ ನೀರಿಕ್ಷೆಯಿದೆ.

2020 ಫ್ಲ್ಯಾಶ್‌ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..

ಇದರೊಂದಿಗೆ ಹೊಸ ವಾಹನಗಳ ಮಾರಾಟ ಚೇತರಿಕೆ ಪೂರಕವಾದ ಅಂಶವೆಂದರೆ ಅದು ಕರೋನಾ ವೈರಸ್ ಪರಿಣಾಮ ಸಾರ್ವಜನಿಕ ಸಾರಿಗೆ ಬಳಕೆಗೆ ಹಿಂದೇಟು ಹಾಕುತ್ತಿರುವ ಸಾರ್ವಜನಿಕರು ಸ್ವಂತ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿರುವುದು ಕೂಡಾ ವಾಹನ ಮಾರಾಟದಲ್ಲಿ ಭಾರೀ ಹೆಚ್ಚಳವಾಗಿರುವುದಕ್ಕೆ ಮತ್ತೊಂದು ಕಾರಣ ಎನ್ನಬಹುದು.

Most Read Articles

Kannada
English summary
Indian Auto Industry In 2020: A Look Back At All The Positives & Negatives. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X