ಈ ಆಗರ್ಭ ಶ್ರೀಮಂತನ ಬಳಿ ಇವೆ ಕೋಟಿ ಬೆಲೆ ಬಾಳುವ ಕಾರುಗಳು

ಯೋಹನ್ ಪೂನವಾಲಾ ದೇಶದ ಅತೀ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ. ಆಗರ್ಭ ಶ್ರೀಮಂತರಾಗಿರುವ ಇವರು ಕೇವಲ ದುಬಾರಿ ಮತ್ತು ಐಷಾರಾಮಿ ಕಾರುಗಳ ಮೇಲೆ ಮಾತ್ರ ಕೇಜ್ ಹೊಂದಿಲ್ಲ. ಇವರು ಸ್ಪೋರ್ಟ್ಸ್ ಕಾರುಗಳ ಮೇಲೆಯು ಹೆಚ್ಚು ಕ್ರೇಜ್ ಹೊಂದಿದ್ದಾರೆ.

ಈ ಆಗರ್ಭ ಶ್ರೀಮಂತನ ಬಳಿ ಇವೆ ಕೋಟಿ ಬೆಲೆ ಬಾಳುವ ಕಾರುಗಳು

ಭಾರತದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಪೂನವಾಲಾ ಕುಟುಂಬವು ಐಷಾರಾಮಿ, ಆಧುನಿಕ ಸ್ಪೋರ್ಟ್ಸ್ ಕಾರುಗಳ ಮತ್ತು ವಿಂಟೇಜ್ ಕಾರುಗಳ ಸಂಗ್ರಹವನ್ನು ಹೊಂದಿದೆ. ಅವರು ಬ್ಯಾಟ್‍‍ಮೊಬೈಲ್ ಕಾರನ್ನು ಕೂಡ ಹೊಂದಿದ್ದಾರೆ. ಈ ಕಾರು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಅನ್ನು ಆಧರಿಸಿದೆ. ಈ ಶ್ರೀಮಂತ ಕುಟಂಬವು 2020ರಲ್ಲಿ ಎರಡೂ ಹೊಸ ದುಬಾರಿ ಕಾರುಗಳನ್ನು ಖರೀದಿಸಿದೆ. ಈ ಹೊಸ ಕಾರುಗಳು ಫೆರಾರಿ ಪೋರ್ಟೊಫಿನೊ ಮತ್ತು ಪೋಲಾರಿಸ್ ಸ್ಲಿಗ್‍‍ಶಾಟ್ ಆಗಿದೆ.

ಈ ಆಗರ್ಭ ಶ್ರೀಮಂತನ ಬಳಿ ಇವೆ ಕೋಟಿ ಬೆಲೆ ಬಾಳುವ ಕಾರುಗಳು

ಫೆರಾರಿ ಫೋರ್ಟೊಫಿನೊ 2018ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಇದು ಎಂಟ್ರಿ ಲೆವೆಲ್ ಫೆರಾರಿ ಕಾರು ಆಗಿದೆ. ಫೆರಾರಿ ಫೋರ್ಟೊಫಿನೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.5 ಕೋಟಿಗಳಾಗಿದೆ. ಮೂಲ ಮಾದರಿಯ ಬೆಲೆಯು ಸುಮಾರು ರೂ.4 ಕೋಟಿಗಳಾಗಿದೆ.

ಈ ಆಗರ್ಭ ಶ್ರೀಮಂತನ ಬಳಿ ಇವೆ ಕೋಟಿ ಬೆಲೆ ಬಾಳುವ ಕಾರುಗಳು

ಇನ್ನೂ ಕಸ್ಟಮೈಸ್ ಆಯ್ಕೆಯ ಕಾರಿನ ಬೆಲೆಯು ಇನ್ನೂ ದುಬಾರಿಯಾಗಿದೆ. ಇಟಲಿಯಲ್ಲಿ ಫೆರಾರಿಯ 70 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪೋರ್ಟೊಫಿನೊವನ್ನು ಬಿಡುಗಡೆಗೊಳಿಸಲಾಗಿತ್ತು. ಈ ಕಾರನ್ನು ಕ್ಯಾಲಿಫೋರ್ನಿಯಾ ಟಿ ಕಾರಿನ ಬದಲಿಗೆ ಬಿಡುಗಡೆಗೊಳಿಸಲಾಗಿತ್ತು.

ಈ ಆಗರ್ಭ ಶ್ರೀಮಂತನ ಬಳಿ ಇವೆ ಕೋಟಿ ಬೆಲೆ ಬಾಳುವ ಕಾರುಗಳು

ಈ ಕಾರು ವಿಶೇಷ ಆವೃತ್ತಿಯ ಫೆರಾರಿಯಾಗಿದೆ. ಕ್ಯಾಲಿಫೋರ್ನಿಯಾ ಟಿ ಕಾರಿನಲ್ಲಿರುವ ಎಂಜಿನ್ ಅನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ ಫೆರಾರಿ ಕಾರಿಗೆ ಹೆಚ್ಚು ಪವರ್ ನೀಡಿದೆ. ಈ ಕಾರನ್ನು ಕ್ಯಾಲಿಫೋರ್ನಿಯಾ ಟಿ ಕಾರಿಗಿಂತ ಹೆಚ್ಚು ಸುಧಾರಣೆಯನ್ನು ಮಾಡಲಾಗಿದೆ. ಇವರ ಬಳಿ ಇರುವ ಚಿತ್ರಗಳನ್ನು ಟೀಂ ಬಿ‍ಹೆಚ್‍‍ಪಿ ಬಹಿರಂಗಪಡಿಸಿದೆ.

ಈ ಆಗರ್ಭ ಶ್ರೀಮಂತನ ಬಳಿ ಇವೆ ಕೋಟಿ ಬೆಲೆ ಬಾಳುವ ಕಾರುಗಳು

ಇದು ಕ್ಯಾಲಿರ್ಫೊರ್ನಿಯಾ ಟಿ ಕಾರಿಗಿಂತ ಶೇ.35ರಷ್ಟು ಗಟ್ಟಿಯಾದ ಚಾಸಿಸ್ ಅನ್ನು ಹೊಂದಿದೆ. ಈ ಕಾರಿನ ತೂಕವನ್ನು 80 ಕೆಜಿಯಷ್ಟು ಹೆಚ್ಚಿಸಲಾಗಿದೆ. ಇದು ಹೈಡ್ರಾಲಿಕ್ ಒಂದರ ಬದಲು ಎಲೆಕ್ಟ್ರೋ ಮೆಕ್ಯಾನಿಕಲ್ ಸ್ಟೀಯರಿಂಗ್ ಸಿಸ್ಟಂ ಅನ್ನು ಸಹ ಹೊಂದಿದೆ. ಈ ಕಾರು 3.9 ಲೀಟರ್ ಟ್ವಿನ್ ಟರ್ಬೊಚಾರ್ಜ್ಡ್ ವಿ8 ಎಂಜಿನ್‍ ಅನ್ನು ಹೊಂದಿದೆ.

ಈ ಆಗರ್ಭ ಶ್ರೀಮಂತನ ಬಳಿ ಇವೆ ಕೋಟಿ ಬೆಲೆ ಬಾಳುವ ಕಾರುಗಳು

ಈ ಎಂಜಿನ್ 600 ಬಿ‍‍ಹೆಚ್‍‍ಪಿ ಪವರ್ ಮತ್ತು 760 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಕೇವಲ 3.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 320 ಕಿ.ಮೀಗಳಿಗೆ ಸೀಮಿತಗೊಳಿಸಲಾಗಿದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್‍‍ಮಿಷನ್ ಜೋಡಿಸಲಾಗಿದೆ.

ಈ ಆಗರ್ಭ ಶ್ರೀಮಂತನ ಬಳಿ ಇವೆ ಕೋಟಿ ಬೆಲೆ ಬಾಳುವ ಕಾರುಗಳು

ಇನ್ನೂ ಭಾರತದ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿಯವರ ಬಳಿ ಮರ್ಸಿಡಿಸ್ ಬೆಂಝ್ ಎಸ್ ಗಾರ್ಡ್, ರೋಲ್ಸ್ ರಾಯ್ಸ್ ಫಾಂಟಮ್ ಡ್ರಾಪ್ ಹೆಡ್ ಕೂಪೆ, ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಹೈ ಸೆಕ್ಯೂರಿಟಿ, ರೋಲ್ಸ್ ರಾಯ್ಸ್ ಕಲಿನನ್, ಬೆಂಟ್ಲಿ ಬೆಂಟಾಯ್ಗ, ಲ್ಯಾಂಬೊರ್ಗಿನಿ ಉರುಸ್ ಮತ್ತು ರಾಯ್ಸ್ ಫಾಂಟಮ್ 8 ಸೀರಿಸ್ ಎಕ್ಸ್ ಡಂಡ್ ವ್ಹೀಲ್ ಬೇಸ್(ಇಡಬ್ಲ್ಯುಬಿ) ಸೇರಿದಂತೆ ಇನ್ನಿತರ ಐಷಾರಾಮಿ ಕಾರುಗಳು ಮತ್ತು ಸ್ಪೋರ್ಟ್ಸ್ ಕಾರುಗಳಿವೆ.

ಈ ಆಗರ್ಭ ಶ್ರೀಮಂತನ ಬಳಿ ಇವೆ ಕೋಟಿ ಬೆಲೆ ಬಾಳುವ ಕಾರುಗಳು

ಪೂನವಾಲಾರವರು ಖರೀದಿಸಿದ ಇನ್ನೊಂದು ಕಾರು ಪೋಲಾರಿಸ್ ಸ್ಲಿಂಗ್‍ಶಾಟ್. ಈ ಕಾರನ್ನು ಭಾರತದ ರಸ್ತೆಗಳಲ್ಲಿ ಡ್ರೈವ್ ಮಾಡಲು ಅನುಮತಿ ಇಲ್ಲ. ಇದೇ ಕಾರಣಕ್ಕಿ ಈ ಕಾರಿನ ಮೇಲೆ ನಂಬರ್ ಪ್ಲೇಟ್ ಅಳವಡಿಸಿಲ್ಲ. ಮೂರು ಟಯರ್‍‍ಗಳ ಓಪನ್ ರೂಫ್ ರೋಡ್‍‍ಸ್ಟಾರ್ ರೇಸ್ ಟ್ರ್ಯಾಕ್‍‍ಗೆ ಈ ಕಾರು ಇದು ಹೆಚ್ಚು ಸೂಕ್ತವಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಮತ್ತು ಅದನ್ನು ಖಾಸಗಿಯಾಗಿ ಆಮದು ಮಾಡಿಕೊಳ್ಳಬೇಕಾಗಿದೆ. ಈ ಕಾರಿನ ತೂಕ ಕೇವಲ 762 ಕೆ.ಜಿಯಾಗಿದೆ. ಈ ಕಾರನ್ನು ಚಲಾಯಿಸುವುದು ಹೆಚ್ಚು ಫನ್ ಆಗಿದೆ.

Most Read Articles

Kannada
English summary
Yohan Poonawalla’s latest cars: Ferrari Portofino & Polaris SlingShot. Read in Kannada.
Story first published: Tuesday, January 28, 2020, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X