Just In
Don't Miss!
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತೀಯ ಸೆಲೆಬ್ರಿಟಿಗಳ ಮೊದಲ ಕಾರುಗಳಿವು..!
ಯಾರಿಗೇ ಆಗಲಿ ಅವರಿಗೆ ಅವರ ಜೀವನದ ಮೊದಲ ಕಾರು ವಿಶೇಷವಾಗಿರುತ್ತದೆ. ಪ್ರತಿಯೊಬ್ಬರೂ ಅತ್ಯುತ್ತಮವಾದ ಕಾರು ಹೊಂದಲು ಬಯಸುತ್ತಾರೆ. ಸೆಲೆಬ್ರಿಟಿಗಳಿಗೆ ಅವರ ಮೊದಲ ಕಾರಿಗೆ ಸಂಬಂಧಿಸಿದ ಹಲವು ನೆನಪುಗಳಿರುತ್ತವೆ. ಭಾರತದ ಸೆಲೆಬ್ರಿಟಿಗಳು ಹಾಗೂ ಅವರ ಮೊದಲ ಕಾರಿನ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಸಚಿನ್ ತೆಂಡೂಲ್ಕರ್- ಮಾರುತಿ ಸುಜುಕಿ 800
ಕ್ರಿಕೆಟ್ನಿಂದ ನಿವೃತ್ತಿ ಬಳಿಕವೂ ಒಂದಲ್ಲ ಒಂದು ವಿಶೇಷ ಕಾರ್ಯ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಕೇವಲ ಬ್ರಾಂಡ್ ಅಂಬಾಸಿಡರ್ ಆಗಿ ಅಷ್ಟೇ ಅಲ್ಲದೇ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ತಮ್ಮ ಜನಪ್ರಿಯತೆಯಿಂದಲೇ ಹತ್ತಾರು ಬಗೆಯ ವಿಲಾಸಿ ಕಾರ್ ಕಲೆಕ್ಷನ್ ಹೊಂದಿರುವ ಸಚಿನ್ ತೆಂಡೂಲ್ಕರ್, ವಿಶ್ವದ ಇತರೆ ಕ್ರಿಕೆಟ್ ದಿಗ್ಗಜರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ ಎಂದ್ರೆ ನೀವು ನಂಬಲೇಬೇಕು.

ಸಚಿನ್ ತೆಂಡೂಲ್ಕರ್ರವರು ಇಂದು ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಫೆರಾರಿ ಹಾಗೂ ಬಿಎಂಡಬ್ಲ್ಯು ಕಾರುಗಳು ಸೇರಿವೆ. ಆದರೆ ಸಚಿನ್ರವರು ಮೊದಲ ಬಾರಿಗೆ ಖರೀದಿಸಿದ್ದು ಮಾರುತಿ ಸುಜುಕಿ 800 ಕಾರು.

ಇಮ್ತಿಯಾಜ್ ಅಲಿ- ಮಾರುತಿ ಸುಜುಕಿ 800
ಕೆಲವು ಸೆಲೆಬ್ರಿಟಿಗಳು ತಮ್ಮ ಮೊದಲ ಕಾರಿನ ಖರೀದಿಯನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಅವರಲ್ಲಿ ಇಮ್ತಿಯಾಜ್ ಅಲಿ ಸಹ ಒಬ್ಬರು. ಇಮ್ತಿಯಾಜ್ ಅಲಿ ಬಾಲಿವುಡ್ನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಅವರು ತಮ್ಮ ಮೊದಲ ಕಾರಿನ ನೆನಪುಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಇಮ್ತಿಯಾಜ್ ಅಲಿಯವರ ಮೊದಲ ಕಾರು ಮಾರುತಿ 800. ಈ ಕಾರು ಭಾರತೀಯರ ಮನಸ್ಸಿನಲ್ಲಿ ಎಂದೆಂದಿಗೂ ಇರುತ್ತದೆ. ಇಮ್ತಿಯಾಜ್ ಅಲಿ ಆವರಿಗೆ ಮಾತ್ರವಲ್ಲದೇ ಹೆಚ್ಚಿನ ಜನರ ಮೊದಲ ಕಾರು ಮಾರುತಿ 800.

ಕಾಜೋಲ್- ಮಾರುತಿ ಸುಜುಕಿ 1000
ಬಾಲಿವುಡ್ ನಟಿ ಕಾಜೋಲ್ ತಮ್ಮ ಮೊದಲ ಕಾರ್ ಆಗಿ ಮಾರುತಿ ಸುಜುಕಿ 1000 ಕಾರ್ ಅನ್ನು ಖರೀದಿಸಿದ್ದರು. ಈ ಕಾರ್ ಅನ್ನು ಮಾರುತಿ ಸುಜುಕಿ ಎಸ್ಟೀಮ್ ಎಂದು ಕರೆಯಲಾಗುತ್ತಿತ್ತು. ಕೆಲ ದಿನಗಳ ಹಿಂದಷ್ಟೇ ಕಾಜೋಲ್ರವರು ತಮ್ಮ ಮೊದಲ ಕಾರಿನೊಂದಿಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು.

ಸಾರಾ ಅಲಿ ಖಾನ್ - ಹೋಂಡಾ ಸಿಆರ್-ವಿ
ಸಾರಾ ಅಲಿ ಖಾನ್ ಬಾಲಿವುಡ್ನ ಉದಯೋನ್ಮುಖ ನಟಿ. ಸದ್ಯಕ್ಕೆ ಅವರು ಎರಡು ಕಾರುಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅವರು ಹೊಸ ಜೀಪ್ ಕಂಪಾಸ್ ಕಾರ್ ಅನ್ನು ಖರೀದಿಸಿದ್ದಾರೆ. ಸಾರಾ ಅಲಿ ಖಾನ್ರವರ ಮೊದಲ ಕಾರು ಹೋಂಡಾ ಕಂಪನಿಯ ಸಿಆರ್-ವಿಯಾಗಿತ್ತು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ದೀಪಿಕಾ ಪಡುಕೋಣೆ - ಆಡಿ ಕ್ಯೂ 7
ದೀಪಿಕಾ ಪಡುಕೋಣೆ ಕಾರುಗಳನ್ನು ಚಲಾಯಿಸುವುದರಲ್ಲಿ ಎತ್ತಿದ ಕೈ. ಅವರು ಮೆಚ್ಚುಗೆಯ ಕಾರುಗಳನ್ನು ಅವರೇ ಸ್ವತಃ ರೈಡ್ ಮಾಡುತ್ತಾರೆ. ನಟಿ ದೀಪಿಕಾ ಪಡುಕೋಣೆ ಬಳಿ ಹಲವಾರು ಐಷಾರಾಮಿ ಕಾರುಗಳಿವೆ.

ಈ ಕಾರುಗಳಲ್ಲಿ ಮರ್ಸಿಡಿಸ್-ಮೇಬ್ಯಾಕ್ ಎಸ್ 500, ಆಡಿ ಎ8 ಎಲ್ ಸೇರಿದ್ದು, ಇದರಲ್ಲಿ ದೀಪಿಕಾ ಪಡುಕೋಣೆರವರು ಮೊದಲು ಖರೀದಿ ಮಾಡಿ ಖುಷಿ ಪಟ್ಟ ಕಾರು ಅಂದ್ರೆ ಅದು ಆಡಿ ನಿರ್ಮಾಣದ ಕ್ಯೂ 7 ಎಸ್ಯುವಿ.

ಆಲಿಯಾ ಭಟ್ - ಆಡಿ ಕ್ಯೂ 7
ಬಾಲಿವುಡ್ನ ಮುದ್ದು ನಟಿ ಆಲಿಯಾ ಭಟ್ರವರ ಮೊದಲ ಕಾರೂ ಸಹ ಆಡಿ ಕ್ಯೂ 7 ಆಗಿತ್ತು. ಇತ್ತೀಚಿಗಷ್ಟೇ ತಮ್ಮ ಮೊದಲ ಕಾರಿನ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಆಲಿಯಾ ಭಟ್ರವರು ಇಂದಿಗೂ ಸಹ ಈ ಕಾರಿನಲ್ಲಿಯೇ ಓಡಾಡುತ್ತಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕಂಗನಾ ರನಾವತ್ - ಬಿಎಂಡಬ್ಲ್ಯೂ 7 ಸೀರೀಸ್
ಬಾಲಿವುಡ್ನ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಕಂಗನಾ ರನಾವತ್ರವರ ಮೊದಲ ಕಾರು ಬಿಎಂಡಬ್ಲ್ಯೂ 7 ಸೀರೀಸ್ ಆಗಿದೆ.

ಇವರ ಬಳಿಯು ಹಲವಾರು ಕಾರುಗಳ ಸಂಗ್ರಹವಿದ್ದು, ಸಿನಿರಂಗದಲ್ಲಿ ನೆಲೆಯೂರುವುದಕ್ಕೂ ಮುನ್ನ ಎಂಟ್ರಿ ಲೆವಲ್ ಕಾರುಗಳನ್ನು ಸಹ ಬಳಕೆ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ - ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್
ನಟಿ ಪ್ರಿಯಾಂಕಾ ಚೋಪ್ರಾರವರು ಬಾಲಿವುಡ್ನಲ್ಲಿ ಮಾತ್ರವಲ್ಲದೇ ಹಾಲಿವುಡ್ನಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಪ್ರಿಯಾಂಕಾ ಚೋಪ್ರಾರವರು ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಬಾಲಿವುಡ್ನ ಮೊದಲ ನಟಿ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಆದರೆ ಪ್ರಿಯಾಂಕಾ ಚೋಪ್ರಾರವರು ಖರೀದಿಸಿದ ಮೊದಲ ಕಾರು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್. ಇದೇ ಕಾರಿನಲ್ಲಿ ಇಂದಿಗೂ ಜಾಲಿ ರೈಡ್ಗೆ ತೆರಳುವ ಪಿಗ್ಗಿ ಮೊದಲ ಕಾರಿನ ಬಗ್ಗೆ ಎಲ್ಲಿಲ್ಲದ ಖುಷಿಯಿದೆ.

ಕತ್ರಿನಾ ಕೈಫ್- ಆಡಿ ಕ್ಯೂ 7
ಬಾಲಿವುಡ್ ನಟ ಸಲ್ಮಾನ್ ಖಾನ್ರವರು ಇತ್ತೀಚಿಗಷ್ಟೇ ಕತ್ರಿನಾ ಕೈಫ್ರವರಿಗೆ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಕತ್ರಿನಾ ಕೈಫ್ರವರು ಮೊದಲ ಬಾರಿಗೆ ಖರೀದಿಸಿದ ಕಾರು ಆಡಿ ಕ್ಯೂ 7.

ಶ್ರದ್ಧಾ ಕಪೂರ್ - ಮರ್ಸಿಡಿಸ್ ಬೆಂಝ್ ಎಂಎಲ್-ಕ್ಲಾಸ್
ಶ್ರದ್ಧಾ ಕಪೂರ್ರವರು ಮೊದಲ ಬಾರಿಗೆ ಖರೀದಿಸಿದ ಕಾರು ಮರ್ಸಿಡಿಸ್ ಬೆಂಝ್ ಎಂಎಲ್-ಕ್ಲಾಸ್. ಶ್ರದ್ದಾ ಕಪೂರ್ರವರು ಈಗಲೂ ಈ ಕಾರ್ ಅನ್ನು ಬಳಸುತ್ತಿದ್ದು, ಅನೇಕ ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.