ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಮಹೇಂದ್ರ ಸಿಂಗ್ ಧೋನಿ, ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರು. ಭಾರತಕ್ಕೆ ಟಿ20 ವಿಶ್ವಕಪ್ ಹಾಗೂ ಏಕದಿನ ಕ್ರಿಕೆಟ್‍‍ನ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಎಂಎಸ್ ಧೋನಿರವರು 2019ರ ವಿಶ್ವಕಪ್ ಟೂರ್ನಿಯ ನಂತರ ಯಾವುದೇ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಧೋನಿರವರು ಆಟೋಮೊಬೈಲ್ ಪ್ರಿಯರೂ ಹೌದು. ಅವರು ಬೆಲೆಬಾಳುವ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ಹಲವಾರು ದುಬಾರಿ ಬೆಲೆಯ ಬೈಕ್‍‍ಗಳನ್ನು ಸಹ ಹೊಂದಿದ್ದಾರೆ. ಧೋನಿರವರು ಇದೇ ಮೊದಲ ಬಾರಿಗೆ ಹೊಸ ವಾಹನವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಧೋನಿರವರು ಮೊದಲ ಬಾರಿಗೆ ರೋಡ್ ರೋಲರ್ ಅನ್ನು ಚಾಲನೆ ಮಾಡಿದ್ದಾರೆ. ಅವರು ರೋಡ್ ರೋಲರ್ ಚಾಲನೆ ಮಾಡುತ್ತಿರುವ ಫೋಟೊವನ್ನು ಎಂ‍ಎಸ್ ಧೋನಿ ಫ್ಯಾನ್ಸ್ ಪೇಜ್‍‍ನಲ್ಲಿ ಪೋಸ್ಟ್ ಮಾಡಲಾಗಿದೆ.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಧೋನಿರವರು ರೋಡ್ ರೋಲರ್ ಚಾಲನೆ ಮಾಡುವ ಮೂಲಕ ಕ್ರಿಕೆಟ್ ಗ್ರೌಂಡ್‍‍ನ ಪಿಚ್ ಅನ್ನು ಸಿದ್ದ ಪಡಿಸಿದ್ದಾರೆ. ಯಾವುದೇ ಗ್ರೌಂಡ್‍‍ನಲ್ಲಿ ಪಿಚ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಧೋನಿರವರೇ ಖುದ್ದು ಪಿಚ್ ತಯಾರಿಸಲು ಮುಂದಾಗಿದ್ದಾರೆ.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಧೋನಿರವರು ಪಿಚ್ ತಯಾರಿಸುತ್ತಿರುವ ಈ ದೃಶ್ಯವನ್ನು ವೀಡಿಯೊ ಮಾಡಲಾಗಿದೆ. ಈ ವೀಡಿಯೊ ಟ್ವಿಟರ್, ವಾಟ್ಸ್ ಅಪ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದ ಹಾಗೆ ಧೋನಿರವರು ಈ ರೀತಿಯ ವಾಹನಗಳನ್ನು ಚಾಲನೆ ಮಾಡುತ್ತಿರುವುದು ಇದೇ ಮೊದಲ ಸಲವಲ್ಲ.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಈ ಹಿಂದೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕಾಗಿ ಜಿಂಬಾಬ್ವೆಗೆ ತೆರಳಿದ್ದಾಗ, ಅಲ್ಲಿ ಪಟಾಸ್ ಎಂಬ ಪೊಲೀಸ್ ಬೈಕ್ ಅನ್ನು ಚಾಲನೆ ಮಾಡಿದ್ದರು. ಈ ವಿಷಯವು ಆಗ ಹೆಚ್ಚು ಸದ್ದು ಮಾಡಿತ್ತು. ಈ ಬೈಕ್ ಅನ್ನು ಕವಾಸಕಿ ಕಂಪನಿಯು ತಯಾರಿಸಿದೆ.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ನಂತರ ಧೋನಿರವರು ಇದೇ ಬೈಕ್ ಅನ್ನು ಖರೀದಿಸಿದ್ದರು. ಇದು ಸ್ಪೋರ್ಟ್ಸ್ ಟೂರರ್ ಬೈಕ್ ಆಗಿದೆ. ಧೋನಿರವರು ಝಡ್‍ಎಕ್ಸ್ ಆರ್ ಬೈಕ್ ಅನ್ನು ಹೊಂದಿದ್ದಾರೆ. ಈ ಬೈಕಿನಲ್ಲಿ 1,352 ಸಿಸಿ ಸಾಮರ್ಥ್ಯದ 4 ಇನ್‍‍ಲೈನ್ ಸಿಲಿಂಡರ್ ಎಂಜಿನ್‍ ಅನ್ನು ಅಳವಡಿಸಲಾಗಿದೆ.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಈ ಎಂಜಿನ್ 156 ಬಿ‍‍ಹೆಚ್‍‍ಪಿ ಪವರ್ ಹಾಗೂ 140 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಜೊತೆಗೆ ಧೋನಿರವರು 1 ಟನ್ ಸಾಮರ್ಥ್ಯದ ಹಳೆಯ ನಿಸಾನ್ ಪಿಕ್‍ಅಪ್ ಟ್ರಕ್ ಅನ್ನು ಸಹ ಖರೀದಿಸಿದ್ದಾರೆ. ಈ ಟ್ರಕ್ ಅನ್ನು ಅವರು ಕ್ಲೀನ್ ಮಾಡುತ್ತಿದ್ದ ದೃಶ್ಯವು ಹಲವು ದಿನಗಳ ಹಿಂದೆ ವೈರಲ್ ಆಗಿತ್ತು.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಧೋನಿರವರು ಖರೀದಿಸಿರುವ 1 ಟನ್ ಸಾಮರ್ಥ್ಯದ ಪಿಕ್ ಅಪ್ ಟ್ರಕ್ ನಿಸ್ಸಾನ್ ಕಂಪನಿಗೆ ಸೇರಿದೆ. ಈ ಟ್ರಕ್ ಅನ್ನು ನಿಸ್ಸಾನ್ ಕಂಪನಿಯು 20 ವರ್ಷಗಳ ಹಿಂದೆ ಬಿಡುಗಡೆಗೊಳಿಸಿತ್ತು. ಈ ವಾಹನವನ್ನು ಜೋಂಗಾ ವಾಹನವೆಂದೂ ಸಹ ಕರೆಯಲಾಗುತ್ತದೆ.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಧೋನಿರವರ ಬಳಿಯಿರುವ ನಿಸ್ಸಾನ್ ಜೋಂಗಾ ಗಾಢವಾದ ಹಸಿರು ಬಣ್ಣವನ್ನು ಹೊಂದಿದೆ. ಈ ವಾಹನದಲ್ಲಿ ಧೋನಿರವರು ರಾಂಚಿಯ ಸುತ್ತಮುತ್ತ ಓಡಾಡುತ್ತಾರೆ. ಇದರ ಜೊತೆಗೆ ಧೋನಿರವರು ಯಮಹಾ ಆರ್‍‍ಡಿ 350 ಬೈಕ್ ಸೇರಿದಂತೆ ಹಲವು ಬೈಕ್ ಹಾಗೂ ಹಮ್ಮರ್ ಸೇರಿದಂತೆ ಹಲವು ಕಾರುಗಳನ್ನು ಹೊಂದಿದ್ದಾರೆ.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಧೋನಿರವರು ತಮ್ಮ ಬಳಿಯಿರುವ ಅಮೂಲ್ಯವಾದ ವಸ್ತುಗಳನ್ನು ಮ್ಯೂಸಿಯಂಗಳಿಗೆ ನೀಡಿದ್ದಾರೆ. ಧೋನಿರವರಂತೆ ಹಲವು ಕ್ರಿಕೆಟರ್‍‍ಗಳು ಸಹ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಆದರೆ ಧೋನಿರವರು ಮಾತ್ರ ಉಳಿದವರಿಗಿಂತ ವಿಭಿನ್ನವಾದ ವಾಹನಗಳನ್ನು ಹೊಂದಿದ್ದಾರೆ.

ರೋಡ್ ರೋಲರ್ ಚಾಲನೆ ಮಾಡಿದ ಧೋನಿ..!

ಧೋನಿರವರು ಭಾರತದಲ್ಲಿ ಮೊದಲ ಬಾರಿಗೆ ಕವಾಸಕಿ ನಿಂಜಾ ಹೆಚ್2 ಬೈಕ್ ಅನ್ನು ಹೊಂದಿದವರಾಗಿದ್ದಾರೆ. ಇದರೊಂದಿಗೆ ಪ್ರಪಂಚದ ವೇಗದ ಜೀಪ್ ಗ್ರಾಂಡ್ ಚಿರೋಕಿ ಟ್ರಾಕ್ ಹಾಕ್ ಸಹ ಹೊಂದಿದ್ದಾರೆ. ನಿಂಜಾ ಹೆಚ್2 ಬೈಕಿನ ಬೆಲೆ ರೂ.30 ಲಕ್ಷಗಳಾದರೆ, ಚಿರೋಕಿ ಟ್ರಾಕ್ ಹಾಕ್ ಬೆಲೆ ರೂ.1.6 ಕೋಟಿಗಳಾಗಿದೆ.

Most Read Articles

Kannada
English summary
Indian cricketer MS Dhoni rides road roller. Read in Kannada.
Story first published: Friday, February 28, 2020, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X