Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೇಶದಲ್ಲೇ ಮೊದಲ ಬಾರಿಗೆ 100-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ
ದೇಶದ ಪ್ರಮುಖ ನಗರಗಳಲ್ಲಿ ಸೂಪರ್ ಕಾರು ಮತ್ತು ಸೂಪರ್ ಬೈಕ್ ಬೈಕ್ ಬಳಕೆಯು ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸೂಪರ್ ವಾಹನ ಮಾದರಿಗಳಿಗಾಗಿ ಬಳಕೆ ಮಾಡಲಾಗುವ ಹೈ ಗ್ರೆಡ್ ಪೆಟ್ರೋಲ್ ಬಳಕೆಗೆ ಸಾಕಷ್ಟು ಬೇಡಿಕೆ ಹರಿದುಬರುತ್ತಿದೆ.

ಸೂಪರ್ ವಾಹನ ಮಾದರಿಗಳ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಹೈ ಗ್ರೆಡ್ ಪೆಟ್ರೋಲ್ ಮಾದರಿಗೆ ಹೆಚ್ಚಿನ ಬೇಡಿಕೆಯಿದ್ದು, ಇಂಡಿಯನ್ ಆಯಿಲ್ ಕಂಪನಿಯು ದೇಶದ ಪ್ರಮುಖದ ನಗರಗಳಲ್ಲಿ ಪ್ರತ್ಯೇಕಾವಾಗಿ ಹೈ ಆಕ್ಟೇನ್(100-ಆಕ್ಟೇನ್) ಪೆಟ್ರೋಲ್ ಮಾದರಿಯನ್ನು ಮಾರಾಟ ಮಾಡುವ ಸೌಲಭ್ಯಕ್ಕೆ ಚಾಲನೆ ನೀಡಿದೆ. ಇಂಡಿಯನ್ ಆಯಿಲ್ ಕಂಪನಿಯು ಪರಿಚಯಿಸಿರುವ ಎಕ್ಸ್ಪಿ 100 ಪೆಟ್ರೋಲ್ ಮಾದರಿಯು ದೇಶದ ಮೊದಲ ಹೈ ಆಕ್ಟೇನ್ ಗ್ರೇಡ್ ಮಾದಿಯಾಗಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ದುಪ್ಪಟ್ಟು ದರ ಹೊಂದಿದೆ.

ಭಾರತದಲ್ಲಿ ಇದುವರೆಗೆ ಹಿಂದೂಸ್ತಾನ್ ಪೆಟ್ರೋಲಿಯಂ ಮಾರಾಟ ಮಾಡುತ್ತಿದ್ದ ಪವರ್ 99 (99-ಆಕ್ಟೇನ್) ಪೆಟ್ರೋಲ್ ಮಾದರಿಯೇ ಹೆಚ್ಚಿನ ಗ್ರೇಡ್ ಹೊಂದಿತ್ತು. ಇದೀಗ ಇಂಡಿಯನ್ ಆಯಿಲ್ ಕಂಪನಿಯು 100-ಆಕ್ಟೇನ್ ಹೊಂದಿರುವ ಎಕ್ಸ್ಪಿ100 ಪೆಟ್ರೋಲ್ ಮಾರಾಟಕ್ಕೆ ಚಾಲನೆ ನೀಡಿದೆ.

ಇಂಡಿಯನ್ ಆಯಿಲ್ ಕಂಪನಿಯು ಮೊದಲ ಹಂತವಾಗಿ ದೇಶದ ಪ್ರಮುಖ 15 ನಗರಗಳಲ್ಲಿ 100-ಆಕ್ಟೇನ್ ಎಕ್ಸ್ಪಿ100 ಪೆಟ್ರೋಲ್ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಐಷಾರಾಮಿ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಪ್ರಮುಖ 15 ನಗರಗಳಿಗೆ ಗುಣಮಟ್ಟದ ಪೆಟ್ರೋಲ್ ಮಾರಾಟವನ್ನು ಸೌಲಭ್ಯವನ್ನು ವಿಸ್ತರಿಸುತ್ತಿದೆ.

ಮೊದಲ ಹಂತವಾಗಿ ಇಂಡಿಯನ್ ಆಯಿಲ್ ಕಂಪನಿಯು ದೆಹಲಿ, ಗುರುಗ್ರಾಮ್, ಮುಂಬೈ, ಪುಣೆ, ಅಹಮದಾಬಾದ್, ಜೈಪುರ್, ನೋಯ್ಡಾ, ಚಂಡಿಘಡ್, ಲೂದಿಯಾನ್, ಆಗ್ರಾದಲ್ಲಿ ಚಾಲನೆ ನೀಡಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಎರಡನೇ ಹಂತವಾಗಿ ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಭುವನೇಶ್ವರ ಮತ್ತು ಕೋಲ್ಕತ್ತಾ ನಗರಗಳಲ್ಲಿ ಹೊಸ ಪೆಟ್ರೋಲ್ ಉತ್ಪನ್ನವನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಭಾರತದಲ್ಲಿ ಸದ್ಯ ಪೆಟ್ರೋಲ್ ಮಾದರಿಯು ಗುಣಮಟ್ಟದ ಆಧಾರದ ಮೇಲೆ 87-ಆಕ್ಟೇನ್ ಮಾದರಿಯು ಆರಂಭಿಕವಾಗಿ ಮಾರಾಟವಾಗುತ್ತಿದ್ದು, 87-ಆಕ್ಟೇನ್ ಮಾದರಿಯನ್ನೇ ಸಾಮಾನ್ಯ ಪೆಟ್ರೋಲ್ ಬಂಕ್ ಮಾರಾಟ ಮಾಡಲಾಗುತ್ತಿದೆ.

87-ಆಕ್ಟೇನ್ ನಂತರ ಗುಣಮಟ್ಟದ ಆಧಾರದ ಮೇಲೆ 89-ಆಕ್ಟೇನ್, 91-ಆಕ್ಟೇನ್, 94-ಆಕ್ಟೇನ್, 99-ಆಕ್ಟೇನ್ ನಂತರ ಇದೀಗ ಮತ್ತಷ್ಟು ಸುಧಾರಿತ ತಂತ್ರಜ್ಞಾನದೊಂದಿಗೆ ಸಂಸ್ಕರಣೆ ಮಾಡಲಾದ 100-ಆಕ್ಟೇನ್ ಮಾದರಿಯ ಪೆಟ್ರೋಲ್ ಮಾದರಿಯ ಮಾರಾಟಕ್ಕೆ ಚಾಲನೆ ನೀಡಲಾಗಿದೆ.

ದೆಹಲಿ, ಮುಂಬೈ, ಪುಣೆ, ಬೆಂಗಳೂರು ಮತ್ತು ಹೈದ್ರಾಬಾದ್ನಲ್ಲಿ ಈಗಾಗಲೇ ವಿವಿಧ ತೈಲ ಕಂಪನಿಗಳು 99-ಆಕ್ಟೇನ್ ಪೆಟ್ರೋಲ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಇದೀಗ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಂಪನಿಯು 100-ಆಕ್ಟೇನ್ ಎಕ್ಸ್ಪಿ100 ಪೆಟ್ರೋಲ್ ಮಾದರಿಯ ಮಾರಾಟ ಆರಂಭಿಸಿದೆ.

ದುಬಾರಿ ಬೆಲೆಯಲ್ಲಿ ಮಾರಾಟವಾಗುವ 100-ಆಕ್ಟೇನ್ ಪೆಟ್ರೋಲ್
ಹೌದು, 100-ಆಕ್ಟೇನ್ ಎಕ್ಸ್ಪಿ100 ಪೆಟ್ರೋಲ್ ಮಾದರಿಯು ಸದ್ಯ ಪ್ರತಿ ಲೀಟರ್ಗೆ ದೆಹಲಿಯಲ್ಲಿ ರೂ. 160 ಬೆಲೆ ಹೊಂದಿದ್ದು, ಇದು ವಿವಿಧ ನಗರಗಳಲ್ಲಿ ಆಯಾ ರಾಜ್ಯಗಳ ತೆರಿಗೆ ಆಧಾರ ಮೇಲೆ ಬೆಲೆ ನಿರ್ಧಾರವಾಗುತ್ತದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

100-ಆಕ್ಟೇನ್ ಪೆಟ್ರೋಲ್ ಮಾದರಿಯು ವಿಶೇಷವಾಗಿ ಸೂಪರ್ ಕಾರು ಮತ್ತು ಸೂಪರ್ ಬೈಕ್ ಮಾದರಿಗಳಿಗಾಗಿ ಬಳಕೆ ಮಾಡುವುದಕ್ಕಾಗಿ ಅಭಿವೃದ್ದಿಗೊಳಿಸಲಾಗಿದ್ದು, 100-ಆಕ್ಟೇನ್ ಇಂಧನ ಮಾದರಿಯಿಂದಾಗಿ ಸೂಪರ್ ವಾಹನಗಳ ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸುವುದಲ್ಲದೆ ದೀರ್ಘಾಕಾಲಿಕ ಎಂಜಿನ್ ಬಾಳ್ವಿಕೆಗೆ ಸಹಕಾರಿಯಾಗುತ್ತದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹಾಗೆಯೇ ಅತಿ ಕಡಿಮೆ ಮಾಲಿನ್ಯ ಉತ್ಪಾದನಾ ಅಂಶ ಹೊಂದಿರುವ 100-ಆಕ್ಟೇನ್ ಪೆಟ್ರೋಲ್ ಮಾದರಿಯು ಸೂಪರ್ ವಾಹನಗಳ ಇಂಧನ ದಕ್ಷತೆಯನ್ನು ಹೆಚ್ಚಿಸಲು ಕೂಡಾ ನೆರವಾಗಲಿದ್ದು, ವಿಶ್ವದ ಪ್ರಮುಖ ರಾಷ್ಟ್ರಗಳು ಮಾತ್ರವೇ 100-ಆಕ್ಟೇನ್ ಪೆಟ್ರೋಲ್ ಮಾದರಿಯ ಮಾರಾಟವನ್ನು ಅಳವಡಿಸಿಕೊಂಡಿವೆ.

ಅಮೆರಿಕ, ಜರ್ಮನ್, ಇಟಲಿ, ಬ್ರಿಟನ್, ಫ್ರಾನ್ಸ್ ರಾಷ್ಟ್ರಗಳು 100-ಆಕ್ಟೇನ್ ಇಂಧನ ಮಾರಾಟವನ್ನು ಅತ್ಯಧಿಕವಾಗಿ ಮಾರಾಟ ಮಾಡುತ್ತಿದ್ದು, ಇದೀಗ ಭಾರತವು ಕೂಡಾ ಸೂಪರ್ ವಾಹನಗಳ ಮಾದರಿಗಳ ಮಾರಾಟ ಹೆಚ್ಚುತ್ತಿರುವ ಹಿನ್ನಲೆ ಗುಣಮಟ್ಟದ ಪೆಟ್ರೋಲ್ ಉತ್ಪನ್ನ ಮಾರಾಟವನ್ನು ಹೆಚ್ಚಿಸಲಾಗುತ್ತಿದೆ.