ಆರ್‌ಸಿ, ಡಿಎಲ್ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ

ದೇಶದಲ್ಲಿ ಕರೋನಾ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಾಹನ ಸಂಬಂಧಿತ ದಾಖಲೆಗಳ ಮಾನ್ಯತಾ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.

ಆರ್‌ಸಿ, ಡಿಎಲ್ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ

ಆದರೆ ಈ ವಿಸ್ತರಣಾ ಅವಧಿಯು ವಾಹನಗಳ ವಿಮೆಯನ್ನು ಒಳಗೊಂಡಿಲ್ಲ. ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (ಆರ್‌ಸಿ), ಫಿಟ್‌ನೆಸ್ ಸರ್ಟಿಫಿಕೇಟ್, ಎಮಿಷನ್ ಸರ್ಟಿಫಿಕೇಟ್ ಗಳ ಮಾನ್ಯತಾ ಅವಧಿಯನ್ನು ಮಾತ್ರ ವಿಸ್ತರಿಸಲಾಗಿದೆ. ಇದರಲ್ಲಿ ವಾಹನಗಳ ವಿಮೆಯನ್ನು ಸೇರಿಸಿಲ್ಲ.

ಆರ್‌ಸಿ, ಡಿಎಲ್ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಮಾ ಮಂಡಳಿಯು, ಆಗಸ್ಟ್ 24ರಂದು ಕೇಂದ್ರ ಸರ್ಕಾರವು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಸಮಯಕ್ಕೆ ಸರಿಯಾಗಿ ವಾಹನ ವಿಮಾ ಪಾಲಿಸಿಯನ್ನು ನವೀಕರಿಸುವುದು ಅವಶ್ಯಕವಾಗಿದೆ. ಈ ಕಾರಣಕ್ಕೆ ಇವುಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಿಲ್ಲವೆಂದು ಹೇಳಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಆರ್‌ಸಿ, ಡಿಎಲ್ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ

ವಾಹನ ವಿಮಾ ಪಾಲಿಸಿಯ ಸಿಂಧುತ್ವ ಅವಧಿಯನ್ನು ವಿಸ್ತರಿಸಿಲ್ಲವೆಂದು ವಿಮಾ ಮಂಡಳಿಯು ಸ್ಪಷ್ಟನೆ ನೀಡಿರುವ ಹಿನ್ನೆಲೆಯಲ್ಲಿ ಮೋಟಾರು ವಾಹನ ಪಾಲಿಸಿ ಹೊಂದಿರುವವರು ತಮ್ಮ ವಾಹನಗಳ ವಿಮೆಯನ್ನು ಕಡ್ಡಾಯವಾಗಿ ನವೀಕರಿಸಬೇಕಾಗಿದೆ.

ಆರ್‌ಸಿ, ಡಿಎಲ್ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ

ವಾಹನ ಸವಾರರು ತಮ್ಮ ವಿಮಾ ಪಾಲಿಸಿಗಳನ್ನು ನವೀಕರಣದ ಕೊನೆಯ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ನವೀಕರಿಸುವಂತೆ ವಿಮಾ ಮಂಡಳಿಯು ಸೂಚಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆರ್‌ಸಿ, ಡಿಎಲ್ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ

ಇತ್ತೀಚೆಗೆ ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆ 1988ಕ್ಕೆ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯ ಪ್ರಕಾರ ವಾಹನ ಸವಾರರು ತಮ್ಮ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ಇನ್ಸ್ಯೂರೆನ್ಸ್ ಹಾಗೂ ವಾಹನಕ್ಕೆ ಸಂಬಂಧಿಸಿದ ಇನ್ನಿತರ ದಾಖಲೆಗಳನ್ನು ತಮ್ಮ ಜೊತೆಯಲ್ಲಿ ಕೊಂಡೊಯ್ಯುವುದು ಕಡ್ಡಾಯವಲ್ಲ.

ಆರ್‌ಸಿ, ಡಿಎಲ್ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ

ಹೊಸ ನಿಯಮದ ಪ್ರಕಾರ ವಾಹನ ಸವಾರರು ಇನ್ನು ಮುಂದೆ ವಾಹನಗಳ ದಾಖಲೆಗಳನ್ನು ಡಿಜಿಲಾಕರ್ ಅಥವಾ ಎಂ-ಟ್ರಾನ್ಸ್‌ಪೋರ್ಟ್‌ನಲ್ಲಿಟ್ಟು ಕೊಳ್ಳಬಹುದು. ಸಂಚಾರ ಪೊಲೀಸರು ಪರಿಶೀಲನೆಗಾಗಿ ದಾಖಲೆಗಳನ್ನು ಕೇಳಿದಾಗ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ತೋರಿಸಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆರ್‌ಸಿ, ಡಿಎಲ್ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ

ಪೊಲೀಸರು ಡಿಜಿಲಾಕರ್ ಅಥವಾ ಎಂ-ಟ್ರಾನ್ಸ್‌ಪೋರ್ಟ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿದ ನಂತರ ವಾಹನ ಸವಾರರ ಬಳಿ ಭೌತಿಕ ದಾಖಲೆಗಳನ್ನು ಕೇಳುವಂತಿಲ್ಲ. ಸಂಚಾರ ನಿಯಮಗಳ ಮೇಲ್ವಿಚಾರಣೆಯನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರವು ಅಕ್ಟೋಬರ್ 1ರಿಂದ ಈ ನಿಯಮವನ್ನು ಜಾರಿಗೆ ತಂದಿದೆ.

ಆರ್‌ಸಿ, ಡಿಎಲ್ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ

ಇದರಿಂದಾಗಿ ವಾಹನದ ದಾಖಲೆಗಳನ್ನು ಒಟ್ಟಿಗೆ ಕೊಂಡೊಯ್ಯುವ ತಾಪತ್ರಯ ತಪ್ಪುತ್ತದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ವಾಹನ ಚಾಲನೆ ಮಾಡುವಾಗ ಜಿಪಿಎಸ್ ಹಾಗೂ ಗೂಗಲ್ ಮ್ಯಾಪ್ ಗಾಗಿ ಮೊಬೈಲ್ ಫೋನ್ ಬಳಸಬಹುದೆಂದು ಹೇಳಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆರ್‌ಸಿ, ಡಿಎಲ್ ಮಾನ್ಯತಾ ಅವಧಿಯನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ

ಮೊಬೈಲ್ ಫೋನ್‌ಗಳಲ್ಲಿ ಜಿಪಿಎಸ್ ಬಳಸುವ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ದ ಹಲವು ಪ್ರಕರಣಗಳು ವರದಿಯಾಗಿದ್ದವು. ಇದನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸುವಾಗ ಜಿಪಿಎಸ್ ಗಾಗಿ ಮೊಬೈಲ್ ಫೋನ್ ಬಳಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ.

Most Read Articles

Kannada
English summary
Insurance council clarifies about extension of vehicle insurance policy. Read in Kannada.
Story first published: Wednesday, October 28, 2020, 16:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X