ಹೊಸ ಫೀಚರ್ಸ್‌ಗಳೊಂದಿಗೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಬಿಡುಗಡೆ

ಇಸುಝು ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ವಾಹನ ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ವಾಹನಗಳು ಮುಂಬೈ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.48 ಲಕ್ಷ ಬೆಲೆ ಹೊಂದಿವೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಬಿಡುಗಡೆ

ವಾಣಿಜ್ಯ ವಾಹನ ಮಾದರಿಗಳಾಗಿರುವ ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ವಾಹನಗಳು ಹೊಸ ಎಂಜಿನ್ ಜೊತೆಗೆ ಹಲವಾರು ಸುರಕ್ಷಾ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಸಾಗಾಣಿಕೆ ಸಾಮರ್ಥ್ಯದಲ್ಲೂ ಕೂಡಾ ಹೆಚ್ಚಳವಾಗಿದೆ. ಡಿ-ಮ್ಯಾಕ್ಸ್ ವಾಹನ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಒಟ್ಟು ಮೂರು ವೆರಿಯೆಂಟ್ ಹೊಂದಿದ್ದು, ಟಾಪ್ ಎಂಡ್ ಮಾದರಿಯಾದ ಎಸ್-ಕ್ಯಾಬ್ ಮಾದರಿ ಮಾತ್ರ ಹೆಚ್ಚವರಿ ಫೀಚರ್ಸ್ ಹೊಂದಿರಲಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಬಿಡುಗಡೆ

ಡಿ-ಮ್ಯಾಕ್ಸ್ ವಾಹನವು ಮುಂಬೈ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.48 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 8.38 ಲಕ್ಷ ಬೆಲೆ ಹೊಂದಿದ್ದರೆ ಎಸ್-ಕ್ಯಾಬ್ ಮಾದರಿಯು ಆರಂಭಿಕವಾಗಿ ರೂ. 9.82 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.10.07 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಬಿಡುಗಡೆ

ಡಿ-ಮ್ಯಾಕ್ಸ್ ಮಾದರಿಯಲ್ಲಿ ಗ್ರಾಹಕರು ಕ್ಯಾಬ್ ಚಾರ್ಸಿಸ್, ಡಿ-ಮ್ಯಾಕ್ಸ್ ಮತ್ತು ಸೂಪರ್ ಸ್ಟ್ರಾಂಗ್ ವೆರಿಯೆಂಟ್ ಹೊಂದಿದ್ದು, ಟಾಪ್ ಎಂಡ್ ಮಾದರಿಯಾದ ಸೂಪರ್ ಸ್ಟ್ರಾಂಗ್ ವೆರಿಯೆಂಟ್ ಮಾದರಿಯು ಗರಿಷ್ಠ 1,710 ಕೆ.ಜಿ ಸಾಗಾಣಿಕೆ ಸಾಮರ್ಥ್ಯ ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಬಿಡುಗಡೆ

ಮಧ್ಯಮ ಆವೃತ್ತಿಯಲ್ಲಿರುವ ಡಿ-ಮ್ಯಾಕ್ಸ್ ಮಾದರಿಯು 1,240 ಕೆ.ಜಿ ಸಾಗಾಣಿಕೆ ಸಾಮಾರ್ಥ್ಯವನ್ನ ಹೊಂದಿದ್ದು, ಬಿಎಸ್-4 ಮಾದರಿಗಿಂತಲೂ ಹೆಚ್ಚಿನ ಮಟ್ಟದ ಲೋಡ್ ಸಾಮಾರ್ಥ್ಯದೊಂದಿಗೆ ಸಾಗಾಣಿಕೆ ವೆಚ್ಚವನ್ನು ತಗ್ಗಿಸಲು ಸಹಕಾರಿಯಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಬಿಡುಗಡೆ

ಹಾಗೆಯೇ ಎಸ್-ಕ್ಯಾಬ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಮತ್ತು ಹೈ-ರೈಡ್ ವೆರಿಯೆಂಟ್‌ಗಳನ್ನು ಹೊಂದಿದೆ. ಡಿ-ಮ್ಯಾಕ್ಸ್ ಮಾದರಿಗಿಂತೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿರುವ ಎಸ್-ಕ್ಯಾಬ್ ಮಾದರಿಯು ಒಂದೇ ಮಾದರಿಯ ಎಂಜಿನ್ ಸೌಲಭ್ಯ ಪಡೆದುಕೊಂಡಿವೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಬಿಡುಗಡೆ

ಎಸ್ ಕ್ಯಾಬ್ ಮಾದರಿಯಲ್ಲಿ ಇಸುಝು ಕಂಪನಿಯು ಹೊಂದಾಣಿಕೆ ಮಾಡಬಹುದಾದ ಪವರ್ ಸ್ಟ್ರೀರಿಂಗ್, ಹೊಸ ವಿನ್ಯಾಸದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಇನ್ಪಾಮೆಷನ್ ಡಿಸ್‌ಪ್ಲೇ, ಫ್ಯಾಬ್ರಿಕ್ ಆಸನಗಳು, ಮೌಟೆಂಡ್ ರೂಫ್ ಲೈನಿಂಗ್, ಸೆಂಟರ್ ಲಾಕಿಂಗ್, ಎತ್ತರವನ್ನು ಹೊಂದಾಣಿಕೆ ಮಾಡಬಹುದಾದ ಸೀಟ್ ಬೆಲ್ಟ್ ಸೌಲಭ್ಯವಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ಫೀಚರ್ಸ್‌ಗಳೊಂದಿಗೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಬಿಡುಗಡೆ

ಹಾಗೆಯೇ ಹೊಸ ವಾಹನದಲ್ಲಿ ಹೈಡ್ರಾಲಿಕ್ ಬ್ರೇಕ್ಸ್, ವಿಸ್ತರಿತ ಬೂಸ್ಟರ್, ಬ್ರೇಕ್ ಓವರ್ ರೈಡ್ ಸಿಸ್ಟಂ, ರಿಯರ್ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ, ಡೋರ್ ಸೈಡ್ ಇನ್‌ಸ್ಟ್ರುಷನ್ ಭೀಮ್, ಡೇ ಆ್ಯಂಡ್ ನೈಟ್ ಇನ್ನರ್ ರಿಯರ್ ವ್ಯೂ ಮಿರರ್, ಸ್ಟ್ರೀಲ್ ಸ್ಕೀಡ್ ಪ್ಲೇಟ್, ವಾರ್ನಿಂಗ್ ಲೈಟ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿವೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಮಾದರಿಗಳಲ್ಲಿ ಇಸುಝು ಕಂಪನಿಯು ಬಿಎಸ್-6 ವೈಶಿಷ್ಟ್ಯತೆಯ 2.5-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 78-ಬಿಎಚ್‌ಪಿ 176-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೊಸ ಫೀಚರ್ಸ್‌ಗಳೊಂದಿಗೆ ಬಿಎಸ್-6 ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಬಿಡುಗಡೆ

ಇಸುಝು ಕಂಪನಿಯು ಈಗಾಗಲೇ ಹೊಸ ವಾಹನ ಖರೀದಿಗಾಗಿ ಆನ್‌ಲೈನ್ ಮತ್ತು ಅಧಿಕೃತ ವಾಹನ ಮಾರಾಟ ಮಳಿಗೆಗಳಲ್ಲಿ ಬುಕ್ಕಿಂಗ್ ಆರಂಭಿದ್ದು, ಈ ತಿಂಗಳ ಕೊನೆಯಲ್ಲಿ ಹೊಸ ವಾಹನಗಳ ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.

Most Read Articles

Kannada
Read more on ಇಸುಝು isuzu
English summary
Isuzu D-Max & S-Cab BS6 Commercial Models Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X