ಗ್ರಾಹಕರ ಸೇವೆಗಳಿಗಾಗಿ ಇಸುಝು-ಟಿವಿಎಸ್‌ನಿಂದ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಶುರು

ಆಟೋ ಕಂಪನಿಗಳಿಗೆ ಹೊಸ ವಾಹನ ಮಾರಾಟ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಿಚಾರ ಅಂದ್ರೆ ಅದು ವಾಹನ ಮಾರಾಟದ ನಂತರದ ಗ್ರಾಹಕರ ಸೇವೆಗಳು ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಯಾವುದೇ ವಾಹನ ಬ್ರಾಂಡ್ ಮೌಲ್ಯವನ್ನು ನಿರ್ಧರಿಸುವುದೇ ಗ್ರಾಹಕರ ಸೇವೆಗಳ ಆಧಾರದ ಮೇಲೆ ಎನ್ನುವುದು ಬಹುತೇಕ ಆಟೋ ಕಂಪನಿಗಳಿಗೆ ಗೊತ್ತಿರುವ ವಿಚಾರ.

ಇಸುಝು-ಟಿವಿಎಸ್‌ನಿಂದ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಶುರು

ಈ ನಿಟ್ಟಿನಲ್ಲಿ ಗ್ರಾಹಕರ ಸೇವೆಗಳನ್ನು ಹೆಚ್ಚಿಸುವ ಪ್ರಮುಖ ಯೋಜನೆಯೊಂದಕ್ಕೆ ಚಾಲನೆ ನೀಡಿರುವ ಇಸುಝು ಮೋಟಾರ್ಸ್ ಕಂಪನಿಯು ಟಿವಿಎಸ್ ಮೋಟಾರ್ ಜೊತೆಗೆ ಕೈಜೋಡಿಸಿದ್ದು, ಮೈ ಟಿವಿಎಸ್ ಸರ್ವಿಸ್ ಸೆಂಟರ್ ಮೂಲಕ ವಿವಿಧ ಬ್ರಾಂಡ್‌ಗಳಿಗೆ ಒಂದೇ ಸೂರಿನಡಿ ಗ್ರಾಹಕ ಸೇವೆಗಳನ್ನು ಒದಗಿಸುವ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹೊಸ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿವೆ.

ಇಸುಝು-ಟಿವಿಎಸ್‌ನಿಂದ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಶುರು

ಭಾರತದಲ್ಲಿ ಡೀಸೆಲ್ ವಾಹನಗಳ ಮಾರಾಟದಲ್ಲಿ ಜನಪ್ರಿಯತೆ ಹೊಂದಿರುವ ಇಸುಝು ಕಂಪನಿಯು ಮಾರುಕಟ್ಟೆ ವಿಸ್ತರಣೆ ಮಾಡುತ್ತಿದ್ದು, ಮಾರಾಟ ಹೆಚ್ಚಿದಂತೆ ಗ್ರಾಹಕರ ಸೇವೆಗಳತ್ತ ಗಮನಹರಿಸುವುದು ಕೂಡಾ ಪ್ರಮುಖವಾಗಿದೆ.

ಇಸುಝು-ಟಿವಿಎಸ್‌ನಿಂದ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಶುರು

ಈ ಹಿನ್ನಲೆಯಲ್ಲಿ ಟಿವಿಎಸ್ ಆಟೋಮೊಬೈಲ್ ಸೆಲ್ಯೂಷನ್ ವಿಭಾಗದ ಜೊತೆಗೂಡಿರುವ ಇಸುಝು ಕಂಪನಿಯು ಗ್ರಾಹಕರ ಸೇವೆಗಳಿಗೆ ಹೆಚ್ಚಿಸುವ ನಿಟ್ಟಿನಲ್ಲಿ 'ಮೈ ಟಿವಿಎಸ್' ಸರ್ವಿಸ್ ಸೆಂಟರ್‌ಗಳ ಮೂಲಕ ಒಂದೇ ಸೂರಿನಡಿ ಎರಡು ಬ್ರಾಂಡ್‌ಗಳ ಗ್ರಾಹಕರಿಗೆ ಸರ್ವಿಸ್ ಒದಗಿಸಲಿವೆ.

ಇಸುಝು-ಟಿವಿಎಸ್‌ನಿಂದ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಶುರು

ಎರಡು ಕಂಪನಿಗಳ ಸಹಭಾಗೀತ್ವದಲ್ಲಿ ಆರಂಭವಾಗಿರುವ ಮೈ ಟಿವಿಎಸ್ ಸರ್ವಿಸ್ ಸೆಂಟರ್ ಅನ್ನು ಪ್ರಾಯೋಗಿಕವಾಗಿ ಅಹಮದಾಬಾದ್‌ನಲ್ಲಿ ಆರಂಭಿಸಲಾಗಿದ್ದು, ಶೀಘ್ರದಲ್ಲೇ ದೇಶದ ಪ್ರಮುಖ ನಗರಗಳಿಗೂ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.

ಇಸುಝು-ಟಿವಿಎಸ್‌ನಿಂದ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಶುರು

ಮೈ ಟಿವಿಎಸ್ ಸರ್ವಿಸ್ ಸೆಂಟರ್ನಲ್ಲಿ ಎರಡು ಬ್ರಾಂಡ್ ಬಗೆಗೆ ನುರಿತ ಆಟೋ ತಜ್ಞರನ್ನು ಒಳಗೊಂಡ ಉದ್ಯೋಗಿಗಳ ಲಭ್ಯತೆಯಿರಲಿದ್ದು, ಇದು ಎರಡು ಬ್ರಾಂಡ್ ಮೌಲ್ಯ ವೃದ್ದಿಗೆ ಹೊಸ ಸರ್ವಿಸ್ ಸೆಂಟರ್‌ಗಳು ಪ್ರಮುಖ ಪಾತ್ರ ವಹಿಸಲಿವೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಇಸುಝು-ಟಿವಿಎಸ್‌ನಿಂದ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಶುರು

ಇನ್ನು ಇಸುಝ ಕಂಪನಿಯು ಭಾರತದಲ್ಲಿ ರೀಬ್ರಾಂಡಿಂಗ್ ಮಾಡುವ ಯೋಜನೆಯಲ್ಲಿದ್ದು, ಈಗಾಲಲೇ ಪ್ರಮುಖ ಕಂಪನಿಗಳ ಜೊತೆಗೂಡಿ ಹೊಸ ಯೋಜನೆಗಳಿಗೆ ಚಾಲನೆ ನೀಡಿದೆ. ಹೊಸ ಯೋಜನೆ ಅಡಿ ವಾಹನ ಮಾರಾಟ ಮಳಿಗೆಗಳ ವಿಸ್ತರಣೆ ಮತ್ತು ಹೊಸ ವಾಹನಗಳ ಬಿಡುಗಡೆಯು ಸಹ ಸೇರಿದೆ.

ಇಸುಝು-ಟಿವಿಎಸ್‌ನಿಂದ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಶುರು

ಹೀಗಾಗಿ ಭವಿಷ್ಯ ಯೋಜನೆಗಳ ದೃಷ್ಠಿಯಿಂದ ಗ್ರಾಹಕರ ಸೇವಾ ಕೇಂದ್ರಗಳನ್ನು ಬಲಪಡಿಸುತ್ತಿರುವ ಇಸುಝು ಕಂಪನಿಯು ಟಿವಿಎಸ್ ಆಟೋಮೊಬೈಲ್ ಸೆಲ್ಯೂಷನ್ ಜೊತೆಗೂಡಿ ಹೊಸ ಯೋಜನೆಗೆ ಚಾಲನೆ ನೀಡಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಇಸುಝು-ಟಿವಿಎಸ್‌ನಿಂದ ಮಲ್ಟಿ ಬ್ರಾಂಡ್ ಸರ್ವಿಸ್ ಸೆಂಟರ್ ಶುರು

ಸದ್ಯ ಕರೋನಾ ವೈರಸ್ ಪರಿಣಾಮದಿಂದ ಕುಸಿದಿರುವ ಹೊಸ ವಾಹನಗಳ ಮಾರಾಟವು ನಿಧಾನವಾಗಿ ಚೇತರಿಕೆ ಕಾಣುತ್ತಿರುವುದಲ್ಲದೆ ಮುಂಬರುವ ಇನ್ನಷ್ಟು ಹೆಚ್ಚಾಗುವ ನೀರಿಕ್ಷೆಯಿದ್ದು, ವೈರಸ್ ಭೀತಿಯಿಂದಾಗಿ ಬಹುತೇಕರು ಸ್ವಂತ ಬಳಕೆಯ ವಾಹನಗಳ ಮಾಲೀಕ್ವದ ಕಡೆಗೆ ಗಮನಹರಿಸುತ್ತಿರುವುದು ಆಟೋ ಕಂಪನಿಗಳಿಗೆ ವರದಾನವಾಗಲಿದೆ.

Most Read Articles

Kannada
English summary
Isuzu Opens New Multi-brand Service Facility In Ahmedabad. Read in Kannada.
Story first published: Thursday, August 13, 2020, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X