Just In
- 1 hr ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 13 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 14 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 16 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಆರಂಭ
ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ತನ್ನ 2021ರ ಐ-ಪೇಸ್ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಬಹುನಿರೀಕ್ಷಿತ ಈ ಹೊಸ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.
ಜಾಗ್ವಾರ್ ಕಂಪನಿಯು ಈ ಹೊಸ ಐ-ಪೇಸ್ ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರಿನ ವಿತರಣಿಯು ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಆರಂಭಿಸಬಹುದು. ಈ ಹೊಸ ಎಲೆಕ್ಟ್ರಿಕ್ ಕಾರು ಹೊಸ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಮೂರು ಹಂತದ ಎಸಿ ಹೋಂ ಚಾರ್ಚಿಂಗ್ ಸೇರಿದಂತೆ ಹಲವಾರು ತಂತ್ರಜ್ಞಾನವನ್ನು ಒಳಗೊಂಡಿದೆ. ಜಾಗ್ವಾರ್ ಕಂಪನಿಯು ಐ-ಪೇಸ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸುವುದು ಖಚಿತವಾಗಿದೆ ಎಂದು ವರದಿಗಳಾಗಿದೆ. ಜಾಗ್ವಾರ್ ಐ-ಪೇಸ್ ಐಷಾರಾಮಿ ಎಲೆಕ್ಟ್ರಿಕ್ ಕಾರು ಆಗಿದೆ.
ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರಿನಲ್ಲಿ ಮ್ಯಾಗ್ನೆಟ್ ಎಲೆಕ್ಟ್ರಿಕ್ ಮೋಟರ್ಗಳೊಂದಿಗೆ 90 ಕಿವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ಗೆ ಜೋಡಿಸಲಾಗುತ್ತದೆ. ಈ ಎಲೆಕ್ಟ್ರಿಕ್ ಪವರ್ಟ್ರೇನ್ 395 ಬಿಹೆಚ್ಪಿ ಪವರ್ ಮತ್ತು 696 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
2021ರ ಐ-ಪೇಸ್ ಎಲೆಕ್ಟ್ರಿಕ್ ಕಾರಿನಲ್ಲಿ 11 ಕಿ.ವ್ಯಾಟ್ ಆನ್ಬೋರ್ಡ್ ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಈ ಕಾರಿನಲ್ಲಿ ಫಾಸ್ಟ್ ಜಾರ್ಜಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
ವರ್ಲ್ಡ್ವೈಡ್ ಹಾರ್ಮೋನೈಸ್ಡ್ ಲೈಟ್ ವೆಹಿಕಲ್ಸ್ ಟೆಸ್ಟ್ ಪ್ರೊಸೀಜರ್ನ ಅಂಕಿಅಂಶಗಳ ಪ್ರಕಾರ, ಈ ಹೊಸ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಎಸ್ಯುವಿಯು ಒಂದು ಗಂಟೆ ಜಾರ್ಜ್ ಮಾಡಿದರೆ 53 ಕಿ.ಮೀ ಚಲಿಸಬಹುದಾಗಿದೆ. ಈ ಎಲೆಕ್ಟ್ರಿಕ್ ಕಾರನ್ನು ಪೂರ್ಣ ಪ್ರಮಾಣದ ಜಾರ್ಜ್ ಮಾಡಲು 8.6 ಗಂಟೆಗಳವರೆಗೆ ಸಮಯವನ್ನು ತೆಗೆದುಕೊಳ್ಳುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಹಿಂದಿನ ಐ-ಪೇಸ್ ಎಲೆಕ್ಟ್ರಿಕ್ ಎಸ್ಯುವಿಯು 7 ಕಿ.ವ್ಯಾಟ್ ಸಿಂಗಲ್-ಫೇಸ್ ಚಾರ್ಜಿಂಗ್ ಕೇವಲ ಒಂದು ಗಂಟೆ ಚಾರ್ಜ್ ಮಾಡಿದರೆ 35 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಹಿಂದಿನ ಮಾದರಿ ಐ-ಪೇಸ್ ಎಲೆಕ್ಟ್ರಿಕ್ ಎಸ್ಯುವಿಯು ಪೂರ್ಣ ಪ್ರಮಾಣದ ಜಾರ್ಜ್ ಆಗಲು 13 ಗಂಟೆಗಳವರೆಗೆ ಸಮಯವನ್ನು ತೆಗೆದುಕೊಳ್ಳುತ್ತದೆ.
ಇನ್ನು ಈ ಕಾರಿನಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ಗಾಗಿ 12.3-ಇಂಚಿನ ಡಿಸ್ ಪ್ಲೇ ಮತ್ತು 10-ಇಂಚಿನ ಮತ್ತು 5-ಇಂಚಿನ ಮೇಲಿನ ಮತ್ತು ಕೆಳಗಿನ ಟಚ್ಸ್ಕ್ರೀನ್ಗಳನ್ನು ಇನ್ಫೋಟೈನ್ಮೆಂಟ್ ಮತ್ತು ಎಲೆಕ್ಟ್ರಿಕ್-ಕಾರಿನ ವಿವಿಧ ಕಂಟ್ರೋಲ್ ಗಳಿಂದ ಕೂಡಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ
ಇನ್ನು ಹೊಸ ಜಾಗ್ವಾರ್ ಎಲೆಕ್ಟ್ರಿಕ್ ಎಸ್ಯುವಿಯಲ್ಲಿ ನವೀಕರಿಸಿದ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಹೊಸ ಪಿವಿ ಪ್ರೊ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುವ ಬ್ರ್ಯಾಂಡ್ನ ಮೊದಲ ಎಸ್ಯುವಿಯಾಗಿದೆ.
ಈ ಹೊಸ್ ಜಾಗ್ವಾರ್ ಐ-ಪೇಸ್ ಕಾರಿನಲ್ಲಿ ಹೊಸ ಅಟ್ಲಾಸ್ ಗ್ರೇ ಗ್ರಿಲ್ ಟಿಪ್ ಫಿನಿಶ್, ಹೊಸ ಅಲಾಯ್ ವ್ಹೀಲ್ ವಿನ್ಯಾಸ ಮತ್ತು ಐಷಾರಾಮಿ ಹೊಸ ಬ್ರೈಟ್ ಪ್ಯಾಕ್ ಆಯ್ಕೆ ಮತ್ತು ಹೊಸ ಬಣ್ಣಗಳ ಆಯ್ಕೆಯನ್ನು ಹೊಂದಿವೆ. ಈ ಐ-ಪೇಸ್ ಎಲೆಕ್ಟ್ರಿಕ್ ಕಾರಿನಲ್ಲಿ ಹೊಸ 3D ಸರೌಂಡ್ ಕ್ಯಾಮೆರಾವನ್ನು ಸಹ ಹೊಂದಿದೆ.