ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಜೀಪ್ ಕಂಪಾಸ್

ಬಿ‍ಎಸ್ 6 ನಿಯಮವು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸುತ್ತಿವೆ. ಜೀಪ್ ಕಂಪನಿಯು ಸಹ ತನ್ನ ಕಂಪಾಸ್ ವಾಹನವನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿದೆ.

ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಜೀಪ್ ಕಂಪಾಸ್

ಬಿ‍ಎಸ್ 6 ಎಂಜಿನ್ ಹೊಂದಿರುವ ಜೀಪ್ ಕಂಪಾಸ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುವುದು. ಹೊಸ ಜೀಪ್ ಕಂಪಾಸ್ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.16.49 ಲಕ್ಷಗಳಾಗಿದೆ.

ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಜೀಪ್ ಕಂಪಾಸ್

ಬಿ‍ಎಸ್ 6 ಎಂಜಿನ್‍‍ನಲ್ಲಿ ಜೀಪ್ ಕಂಪಾಸ್ ಕಾರ್ ಅನ್ನು ಬಿಡುಗಡೆಗೊಳಿಸಿದ ನಂತರ ಸ್ಪೋರ್ಟ್, ಲಿಮಿಟೆಡ್ ಮಾದರಿಗಳನ್ನು ಸ್ಥಗಿತಗೊಳಿಸಲಾಗಿದೆ. ಹೊಸ ಕಾರಿನ ಆರಂಭಿಕ ಬೆಲೆಯು ಬಿ‍ಎಸ್ 4 ಮಾದರಿಯ ಕಾರುಗಳಿಗಿಂತ ರೂ.89,000 ಹೆಚ್ಚಾಗಲಿದೆ.

ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಜೀಪ್ ಕಂಪಾಸ್

ಟಾಪ್ ಮಾದರಿಯ ಜೀಪ್ ಕಂಪಾಸ್ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.21.92 ಲಕ್ಷಗಳಾಗಲಿದೆ. ಹೊಸ ಜೀಪ್ ಕಂಪಾಸ್ ಬೆಲೆಯನ್ನು ರೂ.25,000ದಿಂದ ರೂ.1.23 ಲಕ್ಷಗಳವರೆಗೆ ಹೆಚ್ಚಿಸಲಾಗಿದೆ.

ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಜೀಪ್ ಕಂಪಾಸ್

ಬಿ‍ಎಸ್ 6 ಎಂಜಿನ್ ಹೊಂದಿರುವ ಜೀಪ್ ಕಂಪಾಸ್ ಅನ್ನು ಸ್ಪೋರ್ಟ್ ಪ್ಲಸ್ ಎಂಟಿ, ಲಾಂಗಿಟ್ಯೂಡ್ ಡಿಸಿಟಿ ಹಾಗೂ ಲಿಮಿಟೆಡ್ ಪ್ಲಸ್ ಡಿಸಿಟಿ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಕಾರುಗಳ ಬೆಲೆಯು ಮೂಲ ಮಾದರಿಯ ಪೆಟ್ರೋಲ್ ಕಾರಿಗಿಂತ ರೂ.89,000ದಷ್ಟು ಹೆಚ್ಚಾಗಿರಲಿದೆ.

ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಜೀಪ್ ಕಂಪಾಸ್

ಡೀಸೆಲ್ ಮಾದರಿಯ ಬೆಲೆಯು ರೂ.1 ಲಕ್ಷದಷ್ಟು ಹೆಚ್ಚಾಗಲಿದೆ. ಡೀಸೆಲ್ ಮಾದರಿಯನ್ನು ಸ್ಪೋರ್ಟ್ ಪ್ಲಸ್, ಲಾಂಗಿಟ್ಯೂಡ್, ಲಿಮಿಟೆಡ್ ಪ್ಲಸ್, ಲಿಮಿಟೆಡ್ ಪ್ಲಸ್ 4x4, ಲಾಂಗಿಟ್ಯೂಡ್ 4x4 ಎಟಿ, ಲಿಮಿಟೆಡ್ ಪ್ಲಸ್ 4x4 ಎಟಿ ಹಾಗೂ ಟ್ರೈಲ್‍‍ಹಾಕ್ 4x4 ಎಟಿ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಜೀಪ್ ಕಂಪಾಸ್

ಹೊಸ ಬಿ‍ಎಸ್ 6 ಜೀಪ್ ಕಂಪಾಸ್ ಕಾರ್ ಅನ್ನು 1.4 ಲೀಟರಿನ ಪೆಟ್ರೋಲ್ ಹಾಗೂ 2.0 ಲೀಟರಿನ ಮಲ್ಟಿಜೆಟ್ ಡೀಸೆಲ್ ಎಂಜಿನ್‍‍ಗಳಲ್ಲಿ ಬಿಡುಗಡೆಗೊಳಿಸಲಾಗಿದೆ. 6 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಪೆಟ್ರೋಲ್ ಎಂಜಿನ್‍‍ನಲ್ಲಿ 7 ಸ್ಪೀಡಿನ ಡಿಸಿಟಿ ಹಾಗೂ ಡೀಸೆಲ್ ಎಂಜಿನ್‍‍ನಲ್ಲಿ 9 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೀಡಲಾಗುವುದು.

ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾದ ಜೀಪ್ ಕಂಪಾಸ್

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಗಿರುವ ಜೀಪ್ ಕಂಪಾಸ್ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್, ಮಹೀಂದ್ರಾ ಎಕ್ಸ್ ಯುವಿ 500 ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಕಾರುಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್ ಮಾಡಲಾಗಿದೆ.

Most Read Articles

Kannada
English summary
Jeep Compass BS6 launched. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X