Just In
- 55 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 2 hrs ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 3 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- News
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೀಪಾವಳಿ ಸ್ಪೆಷಲ್: ಜೀಪ್ ಕಂಪಾಸ್ ಎಸ್‌ಯುವಿ ಖರೀದಿಗೆ ಆಕರ್ಷಕ ಡಿಸ್ಕೌಂಟ್
ದೀಪಾವಳಿ ಸಂಭ್ರಮಕ್ಕಾಗಿ ಹೊಸ ವಾಹನಗಳ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಜೀಪ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಯಾದ ಕಂಪಾಸ್ ಎಸ್‌ಯುವಿ ಖರೀದಿಯ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದೆ.

ದಸರಾ ಸಂಭ್ರಮದ ವೇಳೆ ನೀರಿಕ್ಷೆಗೂ ಮೀರಿ ಹೊಸ ವಾಹನಗಳನ್ನು ಮಾರಾಟ ಮಾಡಿರುವ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಮುಂಬರುವ ದೀಪಾವಳಿ ಸಂಭ್ರಮದಲ್ಲೂ ಹೆಚ್ಚಿನ ಮಟ್ಟದ ವಾಹನ ಮಾರಾಟ ನೀರಿಕ್ಷೆಯಲ್ಲಿದ್ದು, ಹೊಸ ಖರೀದಿಯನ್ನು ಆಕರ್ಷಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿವೆ. ಲಾಕ್‌ಡೌನ್ ವಿಧಿಸಿದ್ದ ಅವಧಿಯಿಂದಲೂ ಹೊಸ ವಾಹನಗಳ ಮಾರಾಟದಲ್ಲಿ ನಷ್ಟ ಅನುಭವಿಸುತ್ತಲೇ ಬಂದಿದ್ದ ಆಟೋ ಉತ್ಪಾದನಾ ಕಂಪನಿಗಳಿಗೆ ದಸರಾ ಸಂಭ್ರಮದಲ್ಲಿ ನೀರಿಕ್ಷೆಗೂ ಮೀರಿ ಆದಾಯ ಹರಿದುಬಂದಿದೆ.

ಕಳೆದ ತಿಂಗಳು ಹೊಸ ವಾಹನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜೀಪ್ ಕಂಪನಿಯು ಕೂಡಾ ಅಕ್ಟೋಬರ್ ಅವಧಿಯಲ್ಲಿ ಗರಿಷ್ಠ ಪ್ರಮಾಣದ ವಾಹನ ಮಾರಾಟ ಮಾಡಿದೆ.

ದಸರಾ ಪ್ರಯುಕ್ತ ಘೋಷಣೆ ಮಾಡಲಾಗಿದ್ದ ವಿವಿಧ ಡಿಸ್ಕೌಂಟ್‌ಗಳು ಮತ್ತು ಸರಳ ಸಾಲಸೌಲಭ್ಯಗಳು ಹೊಸ ವಾಹನ ಮಾರಾಟ ಸುಧಾರಣೆಗೆ ಪ್ರಮುಖ ಕಾರಣವಾಗಿದ್ದು, ಇದೀಗ ದೀಪಾವಳಿ ಸಂಭ್ರಮದಲ್ಲೂ ಹೆಚ್ಚಿನ ಮಟ್ಟದ ವಾಹನ ಮಾರಾಟ ನೀರಿಕ್ಷೆಗಳಿವೆ.

ದೀಪಾವಳಿ ವಿಶೇಷತೆಗಾಗಿ ಮತ್ತಷ್ಟು ಹೊಸ ಆಫರ್‌ಗಳನ್ನು ಘೋಷಣೆ ಮಾಡಿರುವ ಜೀಪ್ ಕಂಪನಿಯು ಕಂಪಾಸ್ ಎಸ್‌ಯುವಿ ಕಾರು ಮಾದರಿಯ ಮೇಲೆ ಆಕರ್ಷಕ ಆಫರ್ ನೀಡುತ್ತಿದ್ದು, ಹೊಸ ಕಾರು ಖರೀದಿಯ ಮೇಲೆ ರೂ. 1.50 ಲಕ್ಷ ಆಫರ್ ಪಡೆದುಕೊಳ್ಳಬಹುದಾಗಿದೆ. ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಕಾರು ಖರೀದಿಗೆ ಗರಿಷ್ಠ ಪ್ರಮಾಣದ ಸಾಲ ಸೌಲಭ್ಯವನ್ನು ಸಹ ಒದಗಿಸುತ್ತಿದೆ.

ಆನ್‌ರೋಡ್ ದರದ ಮೇಲೆ ಶೇ.100 ರಷ್ಟು ಸಾಲ ಸೌಲಭ್ಯ ನೀಡುತ್ತಿರುವ ಜೀಪ್ ಕಂಪನಿಯು ದೀರ್ಘಾವಧಿಯ ಸಾಲ ಮರುಪಾವತಿ ಆಯ್ಕೆ ನೀಡುತ್ತಿದ್ದು, ಪ್ರತಿ ತಿಂಗಳಿಗೆ ಕನಿಷ್ಠ ರೂ. 22,823 ಇಎಂಐ ಪಾವತಿ ನಿಗದಿಪಡಿಸಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮತ್ತೊಂದು ಇಎಂಐ ಮರುಪಾವತಿಯ ಆಯ್ಕೆಯಲ್ಲಿ ಗ್ರಾಹಕರು ಪ್ರತಿ ಲಕ್ಷಕ್ಕೆ ಪ್ರತಿ ತಿಂಗಳು ರೂ.1,111 ಇಎಂಐ ಆಯ್ಕೆ ಪಡೆದುಕೊಳ್ಳಬಹುದಾಗಿದ್ದು, ಇದರಲ್ಲಿ ಕಾರು ಖರೀದಿ ಮಾಡಿದ ಮೊದಲ ಮೂರು ತಿಂಗಳು ಅತಿ ಕಡಿಮೆ ಇಎಂಐ(ಪ್ರತಿ ಲಕ್ಷಕ್ಕೆ ಪ್ರತಿ ತಿಂಗಳು ರೂ. 899) ಪಾವತಿ ಮಾಡಬಹುದಾಗಿದೆ.

ಹೊಸ ಹಣಕಾಸು ಸೌಲಭ್ಯಗಳು ಕಾರು ಖರೀದಿಯನ್ನು ಸುಲಭವಾಗಿಸಲಿದ್ದು, ಮಹಿಳಾ ಗ್ರಾಹಕರಿಗೆ ಇನ್ನು ಸೌಲಭ್ಯಗಳು ದೊರೆಯಲಿವೆ. ಜೊತೆಗೆ ಕಂಪನಿಯ ಆಫರ್‌ಗಳನ್ನು ಹೊರತುಪಡಿಸಿ ಡೀಲರ್ಸ್ ಮಟ್ಟದಲ್ಲೂ ಕೆಲವು ಕಡೆಗಳಲ್ಲಿ ಆಫರ್ ನೀಡಲಾಗುತ್ತಿದ್ದು, ಹೊಸ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಮಾಲೀಕತ್ವ ಪಡೆದುಕೊಳ್ಳಲು ಅತ್ಯುತ್ತಮ ಸಮಯ ಎನ್ನಬಹುದು.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇನ್ನು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯ ತನ್ನದೆ ಆದ ವೈಶಿಷ್ಟ್ಯತೆಯೊಂದಿಗೆ ಮಧ್ಯಮ ಗಾತ್ರದ ಎಸ್‌ಯುವಿ ಮಾರಾಟದಲ್ಲಿ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದ್ದು, 1.4-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ. ಎಂಜಿನ್ ಸೌಲಭ್ಯಕ್ಕೆ ಅನುಗುಣವಾಗಿ ಕಂಪಾಸ್ ಎಸ್‌ಯುವಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.49 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.24.99 ಲಕ್ಷ ಬೆಲೆ ಹೊಂದಿದೆ.