ಕಂಪಾಸ್ ಎಸ್‍ಯುವಿಯ ಉತ್ಪಾದನೆ ಪುನಾರಂಭಿಸಿದ ಜೀಪ್

ಕೇಂದ್ರ ಸರ್ಕಾರವು ದೇಶಾದ್ಯಂತ ಕೆಲವು ನಿರ್ಬಂಧಗಳೊಂದಿಗೆ ಲಾಕ್‌ಡೌನ್ ಸಡಿಲಿಕೆಗೊಳಿಸಿದ್ದಾರೆ. ಉತ್ಪಾದಕರಿಗೆ ಕೆಲವು ಷರತ್ತುಗಳನ್ನು ವಿಧಿಸಿ ತಮ್ಮ ಉತ್ಪಾದನೆಯನ್ನು ಪ್ರಾರಂಭಿಸಲು ಅನುಮತಿಯನ್ನು ನೀಡಿದ್ದಾರೆ. ಅದರಂತೆ ವಾಹನ ಉತ್ಪಾದನಾ ಕಂಪನಿಗಳು ಉತ್ಪಾದನೆಯ ಪ್ರಾರಂಭಿಸಿದ್ದಾರೆ.

ಕಂಪಾಸ್ ಎಸ್‍ಯುವಿಯ ಉತ್ಪಾದನೆ ಪುನಾರಂಭಿಸಿದ ಜೀಪ್

ಸುರಕ್ಷತಾ ಕ್ರಮಗಳನ್ನು ಕೈಗೊಂಡು ಜೀಪ್ ಕಂಪನಿಯು ತನ್ನ ಕಂಪಾಸ್ ಎಸ್‍ಯುವಿಯನ್ನು ಪುಣೆ ಬಳಿಯ ರಂಜಂಗಾಂವ್ ಸ್ಥಾವರದಲ್ಲಿ ಉತ್ಪಾದನೆಯನ್ನು ಪುನಾರಂಭಿಸಿದೆ. ಜೀಪ್ ಕಂಪನಿಯು ಸ್ಥಾವರದಲ್ಲಿ ಕಾರ್ಮಿಕರ ಎಲ್ಲಾ ಸುರಕ್ಷತೆಯನ್ನು ಅನುಸರಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಕಾರ್ಮಿಕರ ಸುರಕ್ಷಿತವಾಗಿರಲು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಇದರಲ್ಲಿ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಹ್ಯಾಂಡ್ ಗ್ಲೌಸ್ ಮತ್ತು ಇತರ ಅಗತ್ಯ ರಕ್ಷಣಾ ಸಾಧನಗಳನ್ನು ಒದಗಿಸುತ್ತಾರೆ.

ಕಂಪಾಸ್ ಎಸ್‍ಯುವಿಯ ಉತ್ಪಾದನೆ ಪುನಾರಂಭಿಸಿದ ಜೀಪ್

ದೇಶಾದ್ಯಂತ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಕಳೆದ ಒಂದೂವರೆ ತಿಂಗಳ ನಂತರ ವಾಹನ ಉತ್ಪಾದನೆಯನ್ನು ಪುನಾರಂಭಿಸಿವೆ. ಹಲವಾರು ವಾಹನ ಉತ್ಪಾದನ ಕಂಪನಿಗಳು ಉತ್ಪಾದನೆಯನ್ನು ಮತ್ತು ಮಾರಾಟಕ್ಕೆ ಮರುಚಾಲನೆ ನೀಡಿದ್ದು, ಸೋಂಕು ಹರಡದಂತೆ ಹಲವಾರು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಕಂಪಾಸ್ ಎಸ್‍ಯುವಿಯ ಉತ್ಪಾದನೆ ಪುನಾರಂಭಿಸಿದ ಜೀಪ್

ಜೀಪ್ ಕಂಪನಿಯು ಕಾರ್ಮಿಕರ ಸುರಕ್ಷತೆಗಾಗಿ ಪುಣೆ ಬಳಿಯ ಉತ್ಪಾದನಾ ಸ್ಥಾವರದ ಒಳಗೆ ಮತ್ತು ಹೊರಗೆ ಸಂಪೂರ್ಣ ವೈದ್ಯಕೀಯ ನೆರವು ನೀಡುತ್ತಿದೆ. ಇನ್ನು ವೆಂಟಿಲೇಟರ್ ಹೊಂದಿರುವ ಮತ್ತು ತರಬೇತಿ ಪಡೆದ ಚಾಲಕರು ಇರುವ ಆಂಬ್ಯುಲೆನ್ಸ್ ಸೇವೆ ಕೂಡ ಇದೆ.

ಕಂಪಾಸ್ ಎಸ್‍ಯುವಿಯ ಉತ್ಪಾದನೆ ಪುನಾರಂಭಿಸಿದ ಜೀಪ್

ಇನ್ನು ಕಂಪನಿಯು ಕಾರ್ಮಿಕರ ಸುರಕ್ಷತೆಗಾಗಿ ಸ್ವಯಂಸೇವಕರ 50 ಸದಸ್ಯರ ತಂಡವನ್ನು ರಚಿಸಿದ್ದಾರೆ. ಇದೀಗ ಹೊಸ ಜೀಪ್ ಕಂಪಾಸ್ ಎಸ್‍ಯುವಿಯ ಉತ್ಪಾದನೆಯು ಪುನಾರಂಭಿಸಿರುವುದರಿಂದ ಶೀಘ್ರದಲ್ಲೇ ಬಿಡುಗಡೆಯಾಗಬಹುದು.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಕಂಪಾಸ್ ಎಸ್‍ಯುವಿಯ ಉತ್ಪಾದನೆ ಪುನಾರಂಭಿಸಿದ ಜೀಪ್

ಬಿಎಸ್-6 ಜೀಪ್ ಕಂಪಾಸ್ ಅನ್ನು ಕೇವಲ 5 ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಎಸ್‌ಯುವಿಯಲ್ಲಿ 1.4 ಲೀಟರ್ ಬಿಎಸ್ 6 ಪೆಟ್ರೋಲ್ ಹಾಗೂ 2.0 ಲೀಟರ್ ಬಿಎಸ್ 6 ಡೀಸೆಲ್ ಎಂಜಿನ್‌ಗಳನ್ನು ಅಳವಡಿಸಲಾಗಿದೆ.

ಕಂಪಾಸ್ ಎಸ್‍ಯುವಿಯ ಉತ್ಪಾದನೆ ಪುನಾರಂಭಿಸಿದ ಜೀಪ್

ಬಿಎಸ್-6 ಜೀಪ್ ಕಂಪಾಸ್ ಐದು ಮಾದರಿಗಳಲ್ಲಿ ಸ್ಪೋರ್ಟ್, ಲಾಂಗಿಟ್ಯೂಡ್, ಲಾಂಗಿಟ್ಯೂಡ್ ಪ್ಲಸ್, ಲಿಮಿಟೆಡ್ ಪ್ಲಸ್ ಹಾಗೂ ಲಿಮಿಟೆಡ್ ಪ್ಲಸ್ 4 ಎಕ್ಸ್ 4 ಮಾದರಿಗಳು ಸೇರಿವೆ. ಟ್ರೈಲ್‌ಹಾಕ್ ಶ್ರೇಣಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಕಂಪಾಸ್ ಎಸ್‍ಯುವಿಯ ಉತ್ಪಾದನೆ ಪುನಾರಂಭಿಸಿದ ಜೀಪ್

ಬಿಎಸ್-6 ಜೀಪ್ ಕಂಪಾಸ್ ಎಸ್‌ಯುವಿ 16 ಇಂಚಿನ ಅಲಾಯ್ ವ್ಹೀಲ್‌, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂ, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಕಂಪಾಸ್ ಎಸ್‍ಯುವಿಯ ಉತ್ಪಾದನೆ ಪುನಾರಂಭಿಸಿದ ಜೀಪ್

ಜೀಪ್ ಕಂಪಾಸ್ ಬ್ರ್ಯಾಂಡ್‍ನ ಹೆಚ್ಚು ಮಾರಾಟವಾಗುವ ಎಸ್‍ಯುವಿಯಾಗಿದೆ. ಮುಂದಿನ ದಿನಗಳಲ್ಲಿ ಇತರ ಹೊಸ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಿ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

Most Read Articles

Kannada
Read more on ಜೀಪ್ jeep
English summary
Jeep Compass production restarts at plant near Pune. Read in Kannada.
Story first published: Wednesday, May 20, 2020, 12:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X