ಹ್ಯುಂಡೈ ಕ್ರೆಟಾಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ

ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ಸ್ (ಎಫ್‌ಸಿಎ) ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಎಂಟ್ರಿ ಲೆವೆಲ್ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಹ್ಯುಂಡೈ ಕ್ರೆಟಾಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ

ಈ ಹೊಸ ಕಾಂಪ್ಯಾಕ್ಟ್ ಎಸ್‍ಯುವಿಯು ರೆನೆಗೇಡ್ ಆಫ್-ರೋಡ್ ಎಸ್‍ಯುವಿಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು ಇತ್ತೀಚಿನ ಹೊಸ ಆಧುನಿಕ ತಂತ್ರಜ್ಞಾನಗಳನ್ನು ಹೂಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ ಆಫ್-ರೋಡ್ ಹೊಂದಾಣಿಕೆಗಾಗಿ ಕಂಪನಿಯ ‘ಟ್ರಯಲ್ ರೇಟೆಡ್' ಬ್ಯಾಡ್ಜ್ ಅನ್ನು ಒಳಗೊಂಡಿರುತ್ತದೆ.

ಹ್ಯುಂಡೈ ಕ್ರೆಟಾಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ

ಇದರಲ್ಲಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಮತ್ತು ಆಫ್ ರೋಡ್ ಭೂಪ್ರದೇಶದಲ್ಲಿ ಚಲಿಸಲು ಲಾಕಿಂಗ್ ಡಿಫರನ್ಷಿಯಲ್ ಫೀಚರ್ಸ್‍ಗಳನ್ನು ಒಳಗೊಂಡಿರುತ್ತದೆ. ಮುಂದಿನ ಕಾಂಪ್ಯಾಕ್ಟ್ ಎಸ್‍ಯುವಿಯು ಜೀಪ್ ಬ್ರ್ಯಾಂಡ್‍ನ ಆಫ್ ರೋಂಡಿಂಗ್ ವಾಹನಗಳ ಸರಣಿಗೆ ಸೇರುತ್ತದೆ.

ಹ್ಯುಂಡೈ ಕ್ರೆಟಾಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ

ಕೇವಲ ಆಫ್ ರೋಡ್‍ ಗೆ ಅಲ್ಲದೇ ದಿನನಿತ್ಯ ಓಡಾಡಕ್ಕೆ ಈ ಎಸ್‍ಯುವಿಯನ್ನು ಬಳಸಬಹುದು ಎಂದು ಜೀಪ್ ಯುರೋಪಿನ ಬ್ರ್ಯಾಂಡ್ ಮಾರ್ಕೆಟಿಂಗ್ ಮುಖ್ಯಸ್ಥ ಮಾರ್ಕೊ ಪಿಗೊಜ್ಜೆ ಈ ಹಿಂದೆ ಹೇಳಿದ್ದರು.

ಹ್ಯುಂಡೈ ಕ್ರೆಟಾಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ. ಈ ಎಸ್‍ಯುವಿಯನ್ನು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಎಲೆಕ್ಟ್ರಿಕ್ ಅಥವಾ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಬಹುದು.

ಹ್ಯುಂಡೈ ಕ್ರೆಟಾಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಆಲ್ ವ್ಹೀಲ್ ಡ್ರೈವ್ ಅಥವಾ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಯಾವುದೇ ಕಾಂಪ್ಯಾಕ್ಟ್ ಎಸ್‍ಯುವಿಗಳು ಇಲ್ಲ. ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ ಇದು ದೇಶದ ಆಫ್ ರೋಡ್ ವಾಹನ ಪ್ರಿಯರಿಗೆ ಉತ್ತಮ ಆಯ್ಕೆಯಾಗಬಹುದು.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು 2020ರ ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಕಾರು

ಹ್ಯುಂಡೈ ಕ್ರೆಟಾಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ

ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಫೋರ್ಡ್ ಇಕೋಸ್ಪೋರ್ಟ್ ಮತ್ತು ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

MOST READ: ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರುಗಳತ್ತ ಗ್ರಾಹಕರ ಒಲವು

ಹ್ಯುಂಡೈ ಕ್ರೆಟಾಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ

ಇದರೊಂದಿಗೆ ಮಾರುತಿ ಸುಜುಕಿ ಜಿಮ್ನಿ ಮಿನಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಜಿಮ್ನಿ ಮಿನಿ ಎಸ್‍ಯುವಿಗೆ ಈ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿಯು ಪೈಪೋಟಿಯನ್ನು ನೀಡಬಹುದು.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ

ಹ್ಯುಂಡೈ ಕ್ರೆಟಾಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‍ಯುವಿ

ಭಾರತ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹ್ಯಾಚ್‍ಬ್ಯಾಕ್‍ ಗಳಿಗಿಂತ ಗ್ರಾಹಕರು ಹೆಚ್ಚಾಗಿ ಕಾಂಪ್ಯಾಕ್ಟ್ ಎಸ್‍ಯುವಿಗಳನ್ನು ಇಷ್ಟ ಪಡುತ್ತಾರೆ, ಜೀಪ್ ಪ್ರಮುಖ ಎಸ್‍ಯುವಿ ತಯಾರಕ ಕಂಪನಿಗಳಲ್ಲಿ ಒಂದಾಗಿದೆ.ಇದೀಗ ಈ ಕಂಪನಿಯು ಎಂಟ್ರಿ ಲೆವೆಲೆ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

Most Read Articles

Kannada
Read more on ಜೀಪ್ jeep
English summary
Jeep To Introduce A Compact SUV In Indian Market. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X