ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

2030ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಗುರಿಯೊಂದಿಗೆ ಬಹುತೇಕ ಆಟೋ ಕಂಪನಿಗಳು ಈಗಿನಿಂದಲೇ ಯೋಜನೆ ರೂಪಿಸುತ್ತಿರುವುದಲ್ಲದೇ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಅಮೆರಿಕದ ಜನಪ್ರಿಯ ಕಾರು ತಯಾರಕ ಕಂಪನಿ ಜೀಪ್ ಕೂಡಾ ಭಾರತದಲ್ಲಿ ಬೃಹತ್ ಯೋಜನೆ ರೂಪಿಸಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಸ್‌ಯುವಿ ಕಾರುಗಳ ಮಾರಾಟಕ್ಕೆ ಚಾಲನೆ ನೀಡಿರುವ ಜೀಪ್ ಸಂಸ್ಥೆಯು ಭಾರತದಲ್ಲಿ 2022ಕ್ಕೆ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಸಂಪೂರ್ಣವಾಗಿ ಸ್ಥಳೀಯ ಸಂಪನ್ಮೂಲಗಳಿಂದ ಹೊಸ ಎಲೆಕ್ಟ್ರಿಕ್ ಕಾರು ಉತ್ಪನ್ನಗಳನ್ನು ಸಿದ್ದಪಡಿಸುವ ಯೋಜನೆ ಹೊಂದಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಜೀಪ್ ಸಂಸ್ಥೆಯು ವಿವಿಧ ಮಾದರಿಯ ಪೋಟೋಟೈಪ್ ಆವೃತ್ತಿಗಳನ್ನು ಸಿದ್ದಪಡಿಸಿದ್ದು, ಅಗತ್ಯ ಚಾರ್ಜಿಂಗ್ ಸ್ಟೆಷನ್ ಸೌಲಭ್ಯ ಮತ್ತು ಕೈಗೆಟುವ ಬೆಲೆಗಳಲ್ಲಿ ಹೊಸ ಕಾರು ಉತ್ಪನ್ನಗಳನ್ನು ತಯಾರಿಕೆಗೆ ಸ್ಥಳೀಯ ಬ್ಯಾಟರಿ ಸಂಪನ್ಮೂಲ ಲಭ್ಯತೆಗೆ ಎದುರು ನೋಡುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ನಿರ್ಮಾಣ ಮಾಡುತ್ತಿರುವ ಬಹುತೇಕ ಕಾರು ಕಂಪನಿಗಳು ಬ್ಯಾಟರಿ ತಂತ್ರಜ್ಞಾನಕ್ಕಾಗಿ ಚೀನಿ ಮತ್ತು ತೈವಾನ್ ಮಾರುಕಟ್ಟೆಗಳನ್ನು ಅವಲಂಭಿಸಿದ್ದು, ಇದೇ ಕಾರಣಕ್ಕೆ ಎಲೆಕ್ಟ್ರಿಕ್ ಕಾರುಗಳು ದುಬಾರಿ ಬೆಲೆ ಹೊಂದಿವೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

ಹೀಗಾಗಿ 2021ರ ಹೊತ್ತಿಗೆ ಭಾರತದಲ್ಲೇ ಹಲವಾರು ಸಂಸ್ಥೆಗಳು ಲೀಥಿಯಂ ಅಯಾನ್ ಬ್ಯಾಟರಿ ನಿರ್ಮಾಣಕ್ಕಾಗಿ ಸಿದ್ದಗೊಳ್ಳುತ್ತಿದ್ದು, ಸ್ಥಳೀಯವಾಗಿಯೇ ಬ್ಯಾಟರಿ ತಂತ್ರಜ್ಞಾನ ಲಭ್ಯವಾದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ. ಈ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಯೋಜನೆಯನ್ನು ಮುಂದೂಡುತ್ತಿರುವ ಜೀಪ್ ಕಂಪನಿಯು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳ ಉನ್ನತೀಕರಣ ಜೊತೆಗೆ ಎರಡು ಸಾಮಾನ್ಯ ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

ಕಂಪಾಸ್ ಎಸ್‌ಯುವಿ ಕಾರಿನ ಯಶಸ್ವಿ ನಂತರ ಶೀಘ್ರದಲ್ಲೇ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ಜೀಪ್, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಸಣ್ಣ ಗಾತ್ರದ ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಬಿ ಸೆಗ್ಮೆಂಟ್‌ನಲ್ಲೂ ಹೊಸ ಮಾದರಿಯ ಎಸ್‌ಯುವಿಯೊಂದನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

ಜೀಪ್ ಸಂಸ್ಥೆಯು ರೂ.10 ಲಕ್ಷದೊಳಗೆ ಒಂದು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಮತ್ತು ಬಿ ಸೆಗ್ಮೆಂಟ್‌ನಲ್ಲಿ ಜನಪ್ರಿಯವಾಗಿರುವ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಐಷಾರಾಮಿ 7 ಸೀಟರ್ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆ ಮಾಡಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

ರೂ.10 ಲಕ್ಷ ಬೆಲೆಯ ಅಂತರದಲ್ಲಿ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ ಕಾರುನ್ನು ಬಿಡುಗಡೆಯಾಗಲಿದ್ದರೆ ಟೊಯೊಟಾ ಫಾರ್ಚೂನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಗ್ರ್ಯಾಂಡ್ ಕಮಾಂಡರ್ ಅಥವಾ ಗ್ರ್ಯಾಂಡ್ ಕಮಾಂಡರ್ ಹೋಲಿಕೆ ಇರುವ ಮತ್ತೊಂದು ಹೊಸ ಕಾರು ಉತ್ಪನ್ನವನ್ನು ಬಿಡುಗಡೆಗೊಳಿಸುವ ಬಗ್ಗೆ ಮುಂದಿನ ಕೆಲವೇ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುವುದಾಗಿ ಮಾಹಿತಿ ನೀಡಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

ಒಟ್ಟಿನಲ್ಲಿ ಭಾರತದಲ್ಲಿ ಜೀಪ್ ಕಂಪನಿ ಹೊಸದಾಗಿ ಎರಡು ಕಾರುಗಳು ಬಿಡುಗಡೆಯಾಗುವುದು ಖಚಿತವಾಗಿದ್ದು, ಹೊಸ ಯೋಜನೆಯ ಭಾಗವಾಗಿ ಕಾರುಗಳ ಉತ್ಪಾದನಾ ಸಾಮಾರ್ಥ್ಯವನ್ನು ಸಹ ಹೆಚ್ಚಿಸುವತ್ತ ಜೀಪ್ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

ಪುಣೆಯ ಬಳಿಯಿರುವ ರಂಜನ್‌ಗಾಂವ್‌ನಲ್ಲಿ ಜೀಪ್ ಕಾರು ಉತ್ಪಾದನಾ ಘಟಕವನ್ನು ವಿಸ್ತರಣೆ ಮಾಡಲಾಗುತ್ತಿದ್ದು, ಇಷ್ಟು ದಿನಗಳ ಕಾಲ ಕಂಪಾಸ್ ಆವೃತ್ತಿ ಹೊರತುಪಡಿಸಿ ಇನ್ನುಳಿದ ಐಷಾರಾಮಿ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡುತ್ತಿದ್ದ ಜೀಪ್ ಕಂಪನಿಯ ಇನ್ಮುಂದೆ ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಹೊಸ ಕಾರುಗಳನ್ನು ಅಭಿವೃದ್ಧಿಪಡಿಸಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಜೀಪ್‌‌ ಬೃಹತ್ ಪ್ಲ್ಯಾನ್

2020 ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಹೊಸ ಕಾರುನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿರುವ ಜೀಪ್ ಸಂಸ್ಥೆಯು ಫಾರ್ಚೂನರ್ ಪ್ರತಿಸ್ಪರ್ಧಿ ಕಾರಿನಲ್ಲಿ 2.7-ಲೀಟರ್ ಡೀಸೆಲ್ ಎಂಜಿನ್ ಮತ್ತು 2.5-ಲೀಟರ್ ಪೆಟ್ರೋಲ್ ಎಂಜಿನ್ ಒದಗಿಸಲಿದ್ದರೆ, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ರೆನೆಗೆಡ್‌ನಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.

Most Read Articles

Kannada
Read more on ಜೀಪ್ jeep
English summary
Jeep Set To Introduce Electric Vehicles By 2022. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X