ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದೆ ಜೀಪ್

2030ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಗುರಿಯೊಂದಿಗೆ ಬಹುತೇಕ ಆಟೋ ಕಂಪನಿಗಳು ಈಗಿನಿಂದಲೇ ಯೋಜನೆ ರೂಪಿಸುತ್ತಿರುವುದಲ್ಲದೇ ವಿವಿಧ ಮಾದರಿ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುತ್ತಿವೆ.

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದೆ ಜೀಪ್

ಅಮೆರಿಕದ ಜನಪ್ರಿಯ ಕಾರು ತಯಾರಕ ಕಂಪನಿ ಜೀಪ್ ಕೂಡಾ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಬೃಹತ್ ಯೋಜನೆ ರೂಪಿಸುತ್ತಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಹೈಬ್ರಿಡ್ ಎಸ್‌ಯುವಿ ಕಾರುಗಳ ಮಾರಾಟಕ್ಕೆ ಚಾಲನೆ ನೀಡಿರುವ ಜೀಪ್ ಸಂಸ್ಥೆಯು ಭಾರತದಲ್ಲಿ 2022ಕ್ಕೆ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದೆ ಜೀಪ್

ಸಂಪೂರ್ಣವಾಗಿ ಸ್ಥಳೀಯ ಸಂಪನ್ಮೂಲಗಳಿಂದ ಹೊಸ ಎಲೆಕ್ಟ್ರಿಕ್ ಕಾರು ಉತ್ಪನ್ನಗಳನ್ನು ಸಿದ್ದಪಡಿಸುವ ಯೋಜನೆ ಹೊಂದಿದ್ದು, ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಜೀಪ್ ಸಂಸ್ಥೆಯು ವಿವಿಧ ಮಾದರಿಯ ಪೋಟೋಟೈಪ್ ಆವೃತ್ತಿಗಳನ್ನು ಸಿದ್ದಪಡಿಸಿದೆ.

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದೆ ಜೀಪ್

ಅಗತ್ಯ ಚಾರ್ಜಿಂಗ್ ಸ್ಟೆಷನ್ ಸೌಲಭ್ಯ ಮತ್ತು ಕೈಗೆಟುವ ಬೆಲೆಗಳಲ್ಲಿ ಹೊಸ ಕಾರು ಉತ್ಪನ್ನಗಳನ್ನು ತಯಾರಿಕೆಗೆ ಸ್ಥಳೀಯ ಬ್ಯಾಟರಿ ಸಂಪನ್ಮೂಲಗಳ ಲಭ್ಯತೆಗೆ ಎದುರು ನೋಡುತ್ತಿದ್ದು, ಭಾರತದಿಂದಲೇ ಪ್ರಮುಖ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ರಫ್ತು ಮಾಡುವ ಗುರಿಹೊಂದಿದೆ.

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದೆ ಜೀಪ್

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ನಿರ್ಮಾಣ ಮಾಡುತ್ತಿರುವ ಬಹುತೇಕ ಕಾರು ಕಂಪನಿಗಳು ಬ್ಯಾಟರಿ ತಂತ್ರಜ್ಞಾನಕ್ಕಾಗಿ ಚೀನಿ ಮತ್ತು ತೈವಾನ್ ಮಾರುಕಟ್ಟೆಗಳನ್ನು ಅವಲಂಭಿಸಿದ್ದು, ಇದೇ ಕಾರಣಕ್ಕೆ ಎಲೆಕ್ಟ್ರಿಕ್ ಕಾರುಗಳು ತುಸು ದುಬಾರಿ ಬೆಲೆ ಹೊಂದಿವೆ.

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದೆ ಜೀಪ್

ಹೀಗಾಗಿ 2021ರ ಹೊತ್ತಿಗೆ ಭಾರತದಲ್ಲೇ ಹಲವಾರು ಕಂಪನಿಗಳು ಲೀಥಿಯಂ ಅಯಾನ್ ಬ್ಯಾಟರಿ ಸಂಪನ್ಮೂಲ ನಿರ್ಮಾಣಕ್ಕಾಗಿ ಸಿದ್ದಗೊಳ್ಳುತ್ತಿದ್ದು, ಸ್ಥಳೀಯವಾಗಿಯೇ ಬ್ಯಾಟರಿ ತಂತ್ರಜ್ಞಾನ ಲಭ್ಯವಾದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದೆ ಜೀಪ್

ಈ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಯೋಜನೆಯನ್ನು ಮುಂದೂಡುತ್ತಿರುವ ಜೀಪ್ ಕಂಪನಿಯು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳ ಉನ್ನತೀಕರಣ ಜೊತೆಗೆ ಎರಡು ಸಾಮಾನ್ಯ ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದೆ ಜೀಪ್

ಕಂಪಾಸ್ ಎಸ್‌ಯುವಿ ಕಾರಿನ ಯಶಸ್ವಿ ನಂತರ ಶೀಘ್ರದಲ್ಲೇ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ಜೀಪ್, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಸಣ್ಣ ಗಾತ್ರದ ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಬಿ ಸೆಗ್ಮೆಂಟ್‌ನಲ್ಲೂ ಹೊಸ ಮಾದರಿಯ ಎಸ್‌ಯುವಿಯೊಂದನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದೆ ಜೀಪ್

ರೂ.10 ಲಕ್ಷದಿಂದ ರೂ.14 ಲಕ್ಷ ಬೆಲೆ ಅಂತರದಲ್ಲಿ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ ಕಾರುನ್ನು ಬಿಡುಗಡೆಯಾಗಲಿದ್ದರೆ ಟೊಯೊಟಾ ಫಾರ್ಚೂನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಗ್ರ್ಯಾಂಡ್ ಕಮಾಂಡರ್ ಅಥವಾ ಗ್ರ್ಯಾಂಡ್ ಕಮಾಂಡರ್ ಹೋಲಿಕೆ ಇರುವ ಮತ್ತೊಂದು ಹೊಸ ಕಾರು ಉತ್ಪನ್ನವನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
Read more on ಜೀಪ್ jeep
English summary
Fiat Chrysler Automobiles Working On Battery-Powered Vehicles. Read in Kannada.
Story first published: Friday, June 26, 2020, 21:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X