ಅಮೆಜಾನ್ ಮೂಲಕ ಟಯರ್ ಮಾರಾಟ ಮಾಡಲಿದೆ ಜೆಕೆ ಟಯರ್

ಜೆಕೆ ಟಯರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್, ಭಾರತೀಯ ಮೂಲದ ಅತಿದೊಡ್ಡ ಟಯರ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿದೆ. ಕರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಕಂಪನಿಯು ತನ್ನ ಉತ್ಪನ್ನಗಳ ಮಾರಾಟಕ್ಕೆ ಯಾವುದೇ ತೊಂದರೆಯಾಗದಂತಹ ವಿಶೇಷ ಕ್ರಮಗಳನ್ನು ತೆಗೆದುಕೊಂಡಿದೆ.

ಅಮೆಜಾನ್ ಮೂಲಕ ಟಯರ್ ಮಾರಾಟ ಮಾಡಲಿದೆ ಜೆಕೆ ಟಯರ್

ಜೆಕೆ ಟಯರ್ ಕಂಪನಿಯು ಆನ್‌ಲೈನ್ ವ್ಯಾಪಾರ ಮಳಿಗೆಯಾದ ಅಮೆಜಾನ್ ಮೂಲಕ ತನ್ನ ಟಯರ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಕಾಂಟ್ಯಾಕ್ ಲೆಸ್ ಹೋಂ ಡೆಲಿವರಿ ನೀಡಲು ಈ ಸೇವೆಯನ್ನು ನೀಡುತ್ತಿರುವುದಾಗಿ ಜೆಕೆ ಟಯರ್ ಕಂಪನಿ ಹೇಳಿದೆ.

ಅಮೆಜಾನ್ ಮೂಲಕ ಟಯರ್ ಮಾರಾಟ ಮಾಡಲಿದೆ ಜೆಕೆ ಟಯರ್

ಗ್ರಾಹಕರು ಅಮೆಜಾನ್ ಮೂಲಕ ಜೆಕೆ ಟಯರ್ ಕಂಪನಿಯ ಸಣ್ಣ ಟಯರ್‌ಗಳನ್ನು ಮಾತ್ರವಲ್ಲದೇ ಅಂದರೆ ದ್ವಿಚಕ್ರ ವಾಹನಗಳ ಟಯರ್‌ಗಳನ್ನು ಮಾತ್ರವಲ್ಲದೇ ಕಾರುಗಳಿಗೆ ಬೇಕಾದ ಟಯರ್‌ಗಳನ್ನು ಸಹ ಹೋಂ ಡೆಲಿವರಿ ಪಡೆಯಬಹುದು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅಮೆಜಾನ್ ಮೂಲಕ ಟಯರ್ ಮಾರಾಟ ಮಾಡಲಿದೆ ಜೆಕೆ ಟಯರ್

ಎರಡೂ ಕಂಪನಿಗಳು ಆಗಸ್ಟ್ 1ರಿಂದ ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿವೆ. ಈ ನಿಟ್ಟಿನಲ್ಲಿ ಸದ್ಯಕ್ಕೆ ಟೂರ್ ಡೆಲಿವರಿ ಸರ್ವೀಸ್ ಅನ್ನು ಆರಂಭಿಸಲಾಗಿದೆ. ಹೋಂ ಡೆಲಿವರಿ ಸೇವೆಯ ನಂತರ ಜೆಕೆ ಟಯರ್ ಕಂಪನಿಯು ಅಮೆಜಾನ್ ಪ್ರೈಮ್ ದಿನದಂದು ಟಯರ್ ಗಳನ್ನು ಮಾರಾಟ ಮಾಡುತ್ತಿದೆ.

ಅಮೆಜಾನ್ ಮೂಲಕ ಟಯರ್ ಮಾರಾಟ ಮಾಡಲಿದೆ ಜೆಕೆ ಟಯರ್

ಈ ಬಗ್ಗೆ ಮಾತನಾಡಿರುವ ಜೆಕೆ ಟಯರ್ ಅಂಡ್ ಇಂಡಸ್ಟ್ರೀಸ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾದ ಸಿನಿವಾಸು ಅಲ್ಲಾಬನ್ ರವರು ಇತ್ತೀಚಿನ ದಿನಗಳಲ್ಲಿ, ಗ್ರಾಹಕರು ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಅದರಲ್ಲೂ ಕಾಂಟ್ಯಾಕ್ಟ್ ಲೆಸ್ ಖರೀದಿಗೆ, ಪಾವತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅಮೆಜಾನ್ ಮೂಲಕ ಟಯರ್ ಮಾರಾಟ ಮಾಡಲಿದೆ ಜೆಕೆ ಟಯರ್

ಕಾಂಟ್ಯಾಕ್ಟ್ ಲೆಸ್ ಟೂರ್ ಸರ್ವೀಸ್ ಮೂಲಕ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದರು. ಅಮೆಜಾನ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶಾಲಿನಿ ಪುಚಲಪಲ್ಲಿರವರು ಮಾತನಾಡಿ ಅಮೆಜಾನ್ ಗ್ರಾಹಕರಿಗೆ ಪ್ರೀಮಿಯಂ ಸರಣಿಯ ಟಯರ್‌ಗಳನ್ನು ನೀಡಲು ನಾವು ಹೆಮ್ಮೆ ಪಡುತ್ತೇವೆ ಎಂದು ಹೇಳಿದರು.

ಅಮೆಜಾನ್ ಮೂಲಕ ಟಯರ್ ಮಾರಾಟ ಮಾಡಲಿದೆ ಜೆಕೆ ಟಯರ್

ಹೊಸ ಸೇವೆಯ ಮೂಲಕ ನಾವು ಆಟೋಮೋಟಿವ್ ವಿಭಾಗದಲ್ಲಿ ಬಲವಾದ ಬಂಡವಾಳವನ್ನು ನಿರ್ಮಿಸುವುದನ್ನು ಮುಂದುವರಿಸುತ್ತೇವೆ. ಇದು ಗ್ರಾಹಕರಿಗೆ ವ್ಯಾಪಕ ಆಯ್ಕೆ ಹಾಗೂ ಸುರಕ್ಷಿತ ಶಾಪಿಂಗ್ ಅನುಭವವನ್ನು ನೀಡುತ್ತದೆ ಎಂದು ಅವರು ಹೇಳಿದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಅಮೆಜಾನ್ ಮೂಲಕ ಟಯರ್ ಮಾರಾಟ ಮಾಡಲಿದೆ ಜೆಕೆ ಟಯರ್

ಕರೋನಾ ವೈರಸ್ ಆರ್ಭಟವು ಇನ್ನೂ ಕಡಿಮೆಯಾಗಿಲ್ಲ. ಆದರೂ ಜನರು ಜೀವನ ನಡೆಸಲು ಸಹಜ ಸ್ಥಿತಿಯತ್ತ ಮರಳಲು ಆರಂಭಿಸಿದ್ದಾರೆ. ದೇಶದ ಪ್ರತಿಯೊಂದು ವಲಯವೂ ಸಹಜ ಸ್ಥಿತಿಯತ್ತ ಮರಳಲು ಆರಂಭಿಸಿದೆ.

ಅಮೆಜಾನ್ ಮೂಲಕ ಟಯರ್ ಮಾರಾಟ ಮಾಡಲಿದೆ ಜೆಕೆ ಟಯರ್

ಕರೋನಾ ಆರ್ಭಟದ ನಡೆವೆಯೂ ಕಂಪನಿಗಳು ತಮ್ಮ ಮಾರಾಟವನ್ನು ಹೆಚ್ಚಿಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಜೆಕೆ ಟಯರ್ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲು ಕಾಂಟ್ಯಾಕ್ಟ್ ಟೂರ್ ಡೆಲಿವರಿ ಸೇವೆಯನ್ನು ಆರಂಭಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಅಮೆಜಾನ್ ಮೂಲಕ ಟಯರ್ ಮಾರಾಟ ಮಾಡಲಿದೆ ಜೆಕೆ ಟಯರ್

ಜೆಕೆ ಟಯರ್‌ ಕಂಪನಿಯಂತೆ ದೇಶದ ಹಲವು ಪ್ರಮುಖ ಕಂಪನಿಗಳು ಸಹ ತಮ್ಮ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಶಿಷ್ಟ ಕೊಡುಗೆ ಹಾಗೂ ವಿಶೇಷ ಯೋಜನೆಗಳನ್ನು ಪ್ರಕಟಿಸುತ್ತಿವೆ.

Most Read Articles

Kannada
English summary
JK Tyres selling tyres through amazon. Read in Kannada.
Story first published: Saturday, September 19, 2020, 14:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X