ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಕಿಯಾ ಮೋಟಾರ್ಸ್ ಬಹುನೀರಿಕ್ಷಿತ ಕಾರ್ನಿವಾಲ್ ಎಂಪಿವಿ ಕಾರು ಆವೃತ್ತಿಯು ಮುಂದಿನ ತಿಂಗಳು ಫೆಬ್ರುವರಿ 7ರಿಂದ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗುತ್ತಿದ್ದು, ಹೊಸ ಕಾರನ್ನು ಬಿಡುಗಡೆಗೊಳಿಸುವುದಕ್ಕೂ ಮುನ್ನ ಆಯ್ದ ಕಿಯಾ ಶೋರೂಂಗಳಲ್ಲಿ ಪ್ರದರ್ಶನಗೊಳಿಸಿರುವ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಬೆಂಗಳೂರಿನ ಲಾಲ್‌ಬಾಗ್ ರಸ್ತೆಯಲ್ಲಿರುವ ಅದ್ವೈತ ಕಿಯಾ ಶೋರೂಂನಲ್ಲಿ ಹೊಸ ಕಾರ್ನಿವಾಲ್ ಎಂಪಿವಿ ಕಾರನ್ನು ಪ್ರದರ್ಶನಗೊಳಿಸಲಾಗುತ್ತಿದ್ದು, ಬುಕ್ಕಿಂಗ್ ಆರಂಭಿಸಿದ ಮೊದಲ ವಾರವೇ ಹೊಸ ಖರೀದಿಗೆ ಭರ್ಜರಿ ಬೇಡಿಕೆ ಹರಿದುಬಂದಿದೆ. ಎಂಪಿವಿ ಕಾರುಗಳಲ್ಲೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವ ಕಾರ್ನಿವಾಲ್ ಕಾರು ಪ್ರತಿಸ್ಪರ್ಧಿ ಇನೋವಾ ಕ್ರಿಸ್ಟಾ ಕಾರಿಗಿಂತಲೂ ದುಬಾರಿಯಾಗಿರಲಿದ್ದು, ಐಷಾರಾಮಿ ಪ್ರಯಾಣ ಬಯಸುವ ಕಾರು ಖರೀದಿದಾರರಿಗೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಹೊಸ ಕಾರಿನಲ್ಲಿರುವ ಪ್ರೀಮಿಯಂ ತಾಂತ್ರಿಕ ಸೌಲಭ್ಯಗಳು ಮತ್ತು ಐಷಾರಾಮಿ ವಿನ್ಯಾಸದಿಂದಾಗಿ ಕಾರ್ನಿವಾಲ್ ಕಾರು ಆವೃತ್ತಿಯನ್ನು 'ಲಗ್ಷುರಿ ಎಂಪಿವಿ' ವಿಭಾಗದಲ್ಲಿ ಗುರುತಿಸಲಾಗಿದ್ದು, ಸಿಗ್ನೆಚರ್ ಟೈಗರ್ ನೋಸ್ ಗ್ರಿಲ್ ಮತ್ತು ಸ್ವೆಪ್ಟ್ ಆಫ್ ಕ್ರೋಮ್ , ಸ್ವೆಪ್ಟ್‌ಬ್ಯಾಕ್ ಎಲ್‌ಇಡಿ ಪ್ರೋಜೆಕ್ಟರ್, ಬಂಪರ್ ರಕ್ಷಣೆಗಾಗಿ ಸಿಲ್ವರ್ ಸ್ಕಫ್ ಪ್ಲೇಟ್ ಜೋಡಣೆ ಹೊಂದಿದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಫುಲ್ ಸೈಜ್ ಎಂಪಿವಿಯಾಗಿರುವ ಕಾರ್ನಿವಾಲ್ ಕಾರು ಉದ್ದಳತೆಯಲ್ಲಿ ಗಮನಸೆಳೆಯಲಿದ್ದು, ಎಲೆಕ್ಟ್ರಾನಿಕ್ ಸ್ಲೈಡಿಂಗ್ ಡೋರ್ ಸಿಸ್ಟಂ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 18-ಇಂಚಿನ ಕ್ರೋಮ್ ಲೇಪಿತ ಅಲಾಯ್ ವೀಲ್ಹ್ ಜೋಡಣೆ ಮಾಡಲಾಗಿದ್ದು, ಇದು ಕಾರ್ನಿವಾಲ್ ಕಾರಿನ ಬಲಿಷ್ಠತೆಗೆ ಮತ್ತಷ್ಟು ಪೂರಕವಾಗಿದೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಹೊರ ಭಾಗದ ವಿನ್ಯಾಸಕ್ಕಿಂತಲೂ ಒಳ ಭಾಗದ ಡಿಸೈನ್ ಸೌಲಭ್ಯವು ಕಾರ್ನಿವಾಲ್ ಕಾರಿಗೆ ಜನಪ್ರಿಯತೆ ತಂದುಕೊಡಲಿದ್ದು, ಅರಾಮದಾಯಕ ಪ್ರಯಾಣಕ್ಕೆ ಪೂರಕವಾದ ಆಸನ ಸೌಲಭ್ಯ, 50ಕ್ಕೂ ಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳನ್ನು ಒಳಗೊಂಡಿರುವುದು ಗ್ರಾಹಕರನ್ನು ಮೊದಲ ನೋಟದಲ್ಲೇ ಸೆಳೆಯುತ್ತದೆ. ಕಾರ್ನಿವಾಲ್ ಕಾರು ಗ್ರಾಹಕರ ಬೇಡಿಕೆಯೆಂತೆ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ವೆರಿಯೆಂಟ್‌ಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

7 ಸೀಟರ್ ಸೌಲಭ್ಯ ಹೊಂದಿರುವ ಲಿಮೊಸಿನ್ ಮಾದರಿಯು ಕಾರ್ನಿವಾಲ್ ಹೈ ಎಂಡ್ ಆವೃತ್ತಿಯಾಗಿ ಮಾರಾಟವಾಗಲಿದ್ದು, 2+2+3 ಮಾದರಿಯಲ್ಲಿ ಆಸನ ಸೌಲಭ್ಯವನ್ನು ಜೋಡಣೆ ಮಾಡಿದೆ. ಹಾಗೆಯೇ 8 ಸೀಟರ್ ಮಾದರಿಯಲ್ಲಿ 2+3+3 ಆಸನ ಸೌಲಭ್ಯವಿದ್ದಲ್ಲಿ 9 ಸೀಟರ್ ಮಾದರಿಯು 2+2+2+3 ಮಾದರಿಯಲ್ಲಿ ನಾಲ್ಕನೇ ಆಸನ ಸಾಲನ್ನು ಹೊಂದಿದೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಇನ್ನು ಹೊಸ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಹೇಳುವುದಾದರೇ, ಕಾರ್ನಿವಾಲ್ ಕಾರಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಎಲೆಕ್ಟ್ರಿಕ್ ಪವರ್ಡ್ ಡ್ರೈವರ್ ಸೀಟ್, ಲೆದರ್ ಹೊದಿಕೆ ಪಡೆದಿರುವ ಮಲ್ಟಿ ಫಂಕ್ಷನ್ ಸ್ಟಿರಿಂಗ್ ವೀಲ್ಹ್, ಸ್ಟಿರಿಂಗ್ ವೀಲ್ಹ್‌ನಲ್ಲಿ ಆಡಿಯೋ ಮೌಂಟ್ ಕಂಟ್ರೋಲ್, ಕಾಲ್ಸ್ ಕಂಟ್ರೋಲ್ ಸೇರಿದಂತೆ ಹಲವು ಕಂಟ್ರೋಲ್ಸ್ ಬಟನ್‌ಗಳ ಸೌಲಭ್ಯಗಳಿವೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಹೊಸ ಕಾರಿನ ಡ್ಯಾಶ್‌ಬೋರ್ಡ್ ಕೂಡಾ ಗಮನಸೆಳೆಯಲಿದ್ದು, ಸೆಂಟ್ರಲ್ ಇನ್ಪೋಟೈನ್‌ಮೆಂಟ್, 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಇನ್ ಬಿಲ್ಟ್ ನ್ಯಾವಿಗೆಷನ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ವೆಹಿಕಲ್ ಟೆಲಿಮ್ಯಾಟಿಕ್, ವೆಂಟಿಲೆಟೆಡ್ ಸೀಟುಗಳ ಸೌಲಭ್ಯವನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಿಸ್ಟಂ, ಆರ್ಮ್ ರೆಸ್ಟ್‌ನೊಂದಿಗೆ ಚಾಲಕನಿಗೆ ಸರಳವಾಗಿ ಸಿಗಬಹುದಾದ ಗೇರ್ ನಾಬ್, ಲಿಮೊಸಿನ್ ಮಾದರಿಯಲ್ಲಿ ನಪ್ಪಾ ಲೆದರ್ ಆಸನ ಸೌಲಭ್ಯವಿದೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಕಾರ್ನಿವಾಲ್ ಉದ್ದಳತೆ

ಕಿಯಾ ಕಾರ್ನಿವಾಲ್ ಕಾರು ಎಂಪಿವಿ ಕಾರುಗಳಲ್ಲೇ ಅತಿ ಹೆಚ್ಚು ಉದ್ದಳತೆ ಹೊಂದಿದ್ದು, 5,115-ಎಂಎಂ ಉದ್ದ, 1,985-ಎಂಎಂ ಅಗಲ, 1,740-ಎಂಎಂ ಎತ್ತರ, 3,060-ಎಂಎಂ ವೀಲ್ಹ್ ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 540-ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯ ಹೊಂದಿದೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ವೆರಿಯೆಂಟ್ ಮತ್ತು ಸುರಕ್ಷಾ ಸೌಲಭ್ಯಗಳು

ಕಾರ್ನಿವಾಲ್ ಕಾರು ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿದಗೆ ಲಭ್ಯವಿರಲಿದ್ದು, ಪ್ರೀಮಿಯಂ, ಪ್ರೆಸ್ಟಿಜ್ ಮತ್ತು ಲಿಮೊಸಿನ್ ಮಾದರಿಗಳನ್ನು ಹೊಂದಿದೆ. ಇದರಲ್ಲಿ ಪ್ರೀಮಿಯಂ ಮಾದರಿಯು ಬೆಸ್ ವೆರಿಯೆಂಟ್ ಆಗಿ ಮಾರಾಟವಾಗಲಿದ್ದರೆ ಲಿಮೊಸಿನ್ ವೆರಿಯೆಂಟ್ ಟಾಪ್ ಎಂಡ್ ಆವೃತ್ತಿಯಾಗಿರಲಿದೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ನೀರಿಕ್ಷಿಸಬಹುದಾದ ಫೀಚರ್ಸ್‌ಗಳು

* 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ * ಎಂಟು ಸ್ಪೀಕರ್ಸ್(ಹರ್ಮನ್/ಕರ್ಡೋನ್) * 220 ವೊಲ್ಟ್ ಲ್ಯಾಪ್‌ಟಾಪ್ ಚಾರ್ಜರ್ * 10-ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ * ವೆಂಟಿಲೆಟೆಡ್ ಡ್ರೈವರ್ ಸೀಟ್ * ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ * ಸೆಂಟ್ರಲ್ ಲಾಕಿಂಗ್ * ಆಟೋ ORVMs * 18-ಇಂಚಿನ ಅಲಾಯ್ ವೀಲ್ಹ್ * ಮೂರನೇ ಸಾಲಿನಲ್ಲೂ 60:40 ಅನುಪಾತದ ಆಸನ * UVO ಕನೆಕ್ಟೆಡ್ ಟೆಕ್ನಾಲಜಿ * ವೈರ್ ಲೆಸ್ ಮೊಬೈಲ್ ಚಾರ್ಜಿಂಗ್

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಸುರಕ್ಷಾ ಫೀಚರ್ಸ್‌ಗಳು

* ಎಬಿಎಸ್ ಜೊತೆ ಇಬಿಡಿ * ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ * ರೋಲ್ ಓವರ್ ಮಿಟಿಗೆಷನ್ * ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ * 6 ಏರ್‌ಬ್ಯಾಗ್ * ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ * ಸೀಟ್ ಬೆಲ್ಟ್ ರಿಮೆಂಡರ್ * ಇಮ್‌ಮೊಬಿಲೈಜರ್ * ISOFIX ಚೈಲ್ಡ್ ಸೀಟ್ ಮೌಂಟ್

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಕಾರ್ನಿವಾಲ್ ಕಾರಿನಲ್ಲಿ ಕೇವಲ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ನಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಮೈಲೇಜ್‌ನಲ್ಲೂ ಗಮನಸೆಳೆಯುವ ಕಾರ್ನಿವಾಲ್ ಕಾರು 2,200 ಕೆಜಿ ತೂಕ ಹೊಂದಿದ್ದು, ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 13.9 ಕಿ.ಮೀ ಮೈಲೇಜ್ ನೀಡಲಿದೆ.

ಕಿಯಾ ಕಾರ್ನಿವಾಲ್ ಬಿಡುಗಡೆಗೆ ದಿನಗಣನೆ- ಶೋರೂಂನಲ್ಲಿ ಮಿಂಚುತ್ತಿದೆ ಹೊಸ ಎಂಪಿವಿ ಕಾರು..!

ಅಂದಾಜು ಬೆಲೆ ಮತ್ತು ಲಭ್ಯವಿರುವ ಬಣ್ಣಗಳು

ಸದ್ಯ ಅನಾವರಣಗೊಳ್ಳಲಿರುವ ಕಾರ್ನಿವಾಲ್ ಕಾರು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಅರೋರಾ ಬ್ಲ್ಯಾಕ್ ಪರ್ಲ್, ಸ್ಟೀಲ್ ಸಿಲ್ವರ್ ಮತ್ತು ಗ್ಲಾಸಿಯರ್ ವೈಟ್ ಪರ್ಲ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.27 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.33 ಲಕ್ಷ ಬೆಲೆ ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Kia Carnival Arrives At Dealerships Ahead Of Launch. Read in Kannada.
Story first published: Tuesday, January 28, 2020, 18:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X