ಡಿಸಿ2 ಐಷಾರಾಮಿ ಡಿಸೈನ್‌ನೊಂದಿಗೆ ಮಿಂಚಿದ ಕಿಯಾ ಕಾರ್ನಿವಾಲ್ ಎಂಪಿವಿ

ಕಿಯಾ ಮೋಟಾರ್ಸ್ ಕಂಪನಿಯು ಕಾರ್ನಿವಾಲ್ ಕಾರು ಮಾದರಿಯ ಮೂಲಕ ಎಂಪಿವಿ ಆವೃತ್ತಿಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಐಷಾರಾಮಿ ಫೀಚರ್ಸ್ ಮತ್ತು ಎಂಪಿವಿ ಕಾರುಗಳಲ್ಲೇ ಅತಿ ಹೆಚ್ಚು ವೀಲ್ಹ್ ಬೆಸ್‌ನೊಂದಿಗೆ ಗಮನಸೆಳೆಯುತ್ತಿದೆ.

ಡಿಸಿ2 ಐಷಾರಾಮಿ ಡಿಸೈನ್‌ನೊಂದಿಗೆ ಮಿಂಚಿದ ಕಿಯಾ ಕಾರ್ನಿವಾಲ್ ಎಂಪಿವಿ

ಕಾರ್ನಿವಾಲ್ ಎಂಪಿವಿ ಕಾರು ಮಾದರಿಗಾಗಿ ಡಿಸಿ2 ಡಿಸೈನ್ ಕಂಪನಿಯು ಹೊಸ ಇಂಟಿರಿಯರ್ ಡಿಸೈನ್ ಮಾದರಿಯೊಂದನ್ನು ಪರಿಚಯಿಸಿದ್ದು, ಹೊಸ ಕಾರಿಗೆ ಮತ್ತಷ್ಟು ಐಷಾರಾಮಿ ಲುಕ್ ನೀಡಿದೆ. ಹೊರಭಾಗದಲ್ಲಿ ಮತ್ತು ಎಂಜಿನ್ ಆಯ್ಕೆಗಳಲ್ಲಿ ಯಾವುದೇ ಮಾಡಿಲ್ಲವಾದರೂ ಕಾರಿನ ಒಳಭಾಗವು ಹೊಸ ನೋಟ ಪಡೆದುಕೊಂಡಿದ್ದು, ಸಂಪೂರ್ಣವಾಗಿ ರಿಮೋಟ್ ಕಂಟ್ರೋಲ್ ಸೌಲಭ್ಯಗಳೊಂದಿಗೆ ಆರಾಮದಾಯಕ ಪ್ರಯಾಣ ಒದಗಿಸಲಿದೆ.

ಡಿಸಿ2 ಐಷಾರಾಮಿ ಡಿಸೈನ್‌ನೊಂದಿಗೆ ಮಿಂಚಿದ ಕಿಯಾ ಕಾರ್ನಿವಾಲ್ ಎಂಪಿವಿ

ಡಿಸಿ2 ಕಂಪನಿಯು ಕಾರ್ನಿವಾಲ್ ಕಾರಿನಲ್ಲಿ ಹೊಸ ಕ್ಯಾಬಿನ್ ರೂಂ ಡಿಸೈನ್‌ಗಾಗಿ ಮಧ್ಯಂತರದಲ್ಲಿ ಮತ್ತು ಹಿಂಭಾಗದ ಆಸನಗಳನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಿದ್ದು, ಮುಂಭಾಗದ ಆಸನಗಳನ್ನು ಪ್ರತ್ಯೇಕಿಸುವ ಮೂಲಕ ಹಿಂಭಾಗದಲ್ಲಿ ನಾಲ್ಕು ಆಸನಗಳನ್ನು ನೀಡಿದೆ.

ಡಿಸಿ2 ಐಷಾರಾಮಿ ಡಿಸೈನ್‌ನೊಂದಿಗೆ ಮಿಂಚಿದ ಕಿಯಾ ಕಾರ್ನಿವಾಲ್ ಎಂಪಿವಿ

ನಾಲ್ಕು ಆಸನಗಳು ಪ್ರತ್ಯೇಕ ಕಂಟ್ರೋಲ್ ಸೌಲಭ್ಯದೊಂದಿಗೆ ಅತ್ಯುತ್ತಮ ಕೂಷನ್ ಡಿಸೈನ್ ಹೊಂದಿದ್ದು, ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಸನದ ಗಾತ್ರವನ್ನು ಬದಲಾಯಿಸಿಕೊಳ್ಳಬಹುದಾಗಿದ್ದು, ಹೆಡ್ ರೆಸ್ಟ್ ಮತ್ತು ಲೆಗ್ ರೆಸ್ಟ್ ಸೌಲಭ್ಯವನ್ನು ಪ್ರಯಾಣವನ್ನು ಮತ್ತಷ್ಟು ಆರಾಮದಾಯಕಗೊಳಿಸುತ್ತದೆ.

ಡಿಸಿ2 ಐಷಾರಾಮಿ ಡಿಸೈನ್‌ನೊಂದಿಗೆ ಮಿಂಚಿದ ಕಿಯಾ ಕಾರ್ನಿವಾಲ್ ಎಂಪಿವಿ

ಕಾರಿನ ಒಳಾಂಗಣ ಸೌಲಭ್ಯಕ್ಕೆ ತಕ್ಕಂತೆ ಆ್ಯಂಬಿಯೆಂಟ್ ಲೈಟಿಂಗ್ಸ್ ಕೂಡಾ ಆಕರ್ಷಕವಾಗಿದ್ದು, ವೈರ್‌ಲೆಸ್ ಟೆಲಿಫೋನ್, ಪ್ರತಿ ಆಸನಕ್ಕೂ ಪ್ರತ್ಯೇಕ ಎಸಿ ವೆಂಟ್ಸ್, ಕಪ್ ಹೋಲ್ಡರ್, ಆರ್ಮ್ ರೆಸ್ಟ್, ಕಪ್ ಹೋಲ್ಡರ್‌ನಲ್ಲಿ ಲೈಟ್ ರೆಫ್ರಿಜೆಟರ್ ಸಾಕೆಟ್ ಮತ್ತು ಮಿಟಿಂಗ್ ಟೆಬಲ್ ಸಿದ್ದಪಡಿಸಿಕೊಳ್ಳಬಹುದಾಗಿದೆ.

ಡಿಸಿ2 ಐಷಾರಾಮಿ ಡಿಸೈನ್‌ನೊಂದಿಗೆ ಮಿಂಚಿದ ಕಿಯಾ ಕಾರ್ನಿವಾಲ್ ಎಂಪಿವಿ

ಹೊಸ ಡಿಸೈನ್ ಸೌಲಭ್ಯಗಳೊಂದಿಗೆ ನಾಲ್ಕು ಜನ ಆರಾಮವಾಗಿ ಮಿಟಿಂಗ್ ನಡೆಸಬಹುದಾಗದ ಎಲ್ಲಾ ಸೌಲಭ್ಯಗಳು ಈ ಮಾಡಿಫೈ ಕಾರು ಮಾದರಿಯಲ್ಲಿದ್ದು, ಡಿಸಿ2 ಕಂಪನಿಯು ಬೇಡಿಕೆ ಸಲ್ಲಿಸುವ ಗ್ರಾಹಕರಿಗೆ ಹೊಸ ಡಿಸೈನ್ ಸೌಲಭ್ಯವನ್ನು ಆಕರ್ಷಕ ಪ್ಯಾಕೇಜ್‌ಗಳೊಂದಿಗೆ ಹೊಸ ಡಿಸೈನ್ ಒದಗಿಸಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಇನ್ನು ಕಾರ್ನಿವಾಲ್ ಕಾರು ಮಾದರಿಯು ಅತ್ಯುತ್ತಮ ಫೀಚರ್ಸ್ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಎಂಪಿವಿ ಕಾರುಗಳ ಮಾರಾಟದಲ್ಲಿ ಉತ್ತಮ ಬೇಡಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.24.95 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 33.95 ಲಕ್ಷ ಬೆಲೆ ಹೊಂದಿದೆ.

ಡಿಸಿ2 ಐಷಾರಾಮಿ ಡಿಸೈನ್‌ನೊಂದಿಗೆ ಮಿಂಚಿದ ಕಿಯಾ ಕಾರ್ನಿವಾಲ್ ಎಂಪಿವಿ

ಕಾರ್ನಿವಾಲ್ ಕಾರಿನಲ್ಲಿ ಸದ್ಯಕ್ಕೆ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ನಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಡಿಸಿ2 ಐಷಾರಾಮಿ ಡಿಸೈನ್‌ನೊಂದಿಗೆ ಮಿಂಚಿದ ಕಿಯಾ ಕಾರ್ನಿವಾಲ್ ಎಂಪಿವಿ

ಹೊಸ ಕಾರಿನಲ್ಲಿರುವ ಪ್ರೀಮಿಯಂ ತಾಂತ್ರಿಕ ಸೌಲಭ್ಯಗಳು ಮತ್ತು ಐಷಾರಾಮಿ ವಿನ್ಯಾಸದಿಂದಾಗಿ ಕಾರ್ನಿವಾಲ್ ಕಾರು ಆವೃತ್ತಿಯನ್ನು 'ಲಗ್ಷುರಿ ಎಂಪಿವಿ' ವಿಭಾಗದಲ್ಲಿ ಗುರುತಿಸಲಾಗಿದ್ದು, ಸಿಗ್ನೆಚರ್ ಟೈಗರ್ ನೋಸ್ ಗ್ರಿಲ್ ಮತ್ತು ಸ್ವೆಪ್ಟ್ ಆಫ್ ಕ್ರೋಮ್ , ಸ್ವೆಪ್ಟ್‌ಬ್ಯಾಕ್ ಎಲ್‌ಇಡಿ ಪ್ರೋಜೆಕ್ಟರ್, ಬಂಪರ್ ರಕ್ಷಣೆಗಾಗಿ ಸಿಲ್ವರ್ ಸ್ಕಫ್ ಪ್ಲೇಟ್ ಜೋಡಣೆ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

Most Read Articles

Kannada
English summary
Kia Carnival MPV Customized By DC Design Interior Looks Another Level Details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X