ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಅಗ್ರಸ್ಥಾನದತ್ತ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಕಂಪನಿಯು ಕಾರು ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಿದ್ದು, ಭಾರತದಲ್ಲಿ ಅತಿ ಹೆಚ್ಚು ಕಾರು ಮಾರಾಟ ಕಂಪನಿಗಳಲ್ಲಿ ಸದ್ಯ ಐದನೇ ಸ್ಥಾನದಲ್ಲಿದೆ. ಹಾಗೆಯೇ ಕಾರುಗಳ ರಫ್ತು ಪ್ರಮಾಣದಲ್ಲೂ ಭಾರೀ ಬೆಳವಣಿಗೆ ಸಾಧಿಸುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಹೊಸ ದಾಖಲೆಗೆ ಕಾರಣವಾಗಲಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಅಗ್ರಸ್ಥಾನದತ್ತ ಕಿಯಾ ಮೋಟಾರ್ಸ್

ಭಾರತದಿಂದ ವಿಶ್ವದ ಪ್ರಮುಖ 20 ರಾಷ್ಟ್ರಗಳಿಗೆ ವಿವಿಧ ಕಾರು ಮಾದರಿಗಳನ್ನು ರಫ್ತು ಮಾಡುವ ಕಿಯಾ ಮೋಟಾರ್ಸ್ ಕಂಪನಿಯು 2020ರ ಹಣಕಾಸು ಅವಧಿಯಲ್ಲಿ ಇದುವರೆಗೆ ಸುಮಾರು 20,293 ಯನಿಟ್ ರಫ್ತುಗೊಳಿಸುವ ಮೂಲಕ ಆರನೇ ಸ್ಥಾನದಲ್ಲಿದ್ದು, ಮುಂಬರುವ ಮಾರ್ಚ್ ಹೊತ್ತಿಗೆ ಕಾರುಗಳ ರಫ್ತು ಪ್ರಮಾಣವನ್ನು ದ್ವಿಗುಣಗೊಳಿಸುವ ಯೋಜನೆಯಲ್ಲಿದೆ. ಸದ್ಯ ಕಾರು ರಫ್ತು ಪ್ರಮಾಣದಲ್ಲಿ ಹ್ಯುಂಡೈ ಕಂಪನಿಯು ಮೊದಲ ಸ್ಥಾನದಲ್ಲಿದ್ದು, ಈ ವರ್ಷದ ಹಣಕಾಸು ಅವಧಿಯಲ್ಲಿ ಹ್ಯುಂಡೈ ಕಂಪನಿಯು 44,271 ಯುನಿಟ್ ರಫ್ತುಗೊಳಿಸಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಅಗ್ರಸ್ಥಾನದತ್ತ ಕಿಯಾ ಮೋಟಾರ್ಸ್

ಎರಡನೇ ಸ್ಥಾನದಲ್ಲಿ ಮಾರುತಿ ಸುಜುಕಿ, ಮೂರನೇ ಸ್ಥಾನದಲ್ಲಿ ಫೋರ್ಡ್, ನಾಲ್ಕನೇ ಸ್ಥಾನದಲ್ಲಿ ಫೋಕ್ಸ್‌ವ್ಯಾಗನ್, ಐದನೇ ಸ್ಥಾನದಲ್ಲಿ ಜನರಲ್ ಮೋಟಾರ್ಸ್ ಮತ್ತು ಆರನೇ ಸ್ಥಾನದಲ್ಲಿ ಕಿಯಾ ಮೋಟಾರ್ಸ್ ಸ್ಥಾನ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಕಿಯಾ ರಫ್ತು ಪ್ರಮಾಣವು ಮೂರನೇ ಸ್ಥಾನಕ್ಕೇರಲಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಅಗ್ರಸ್ಥಾನದತ್ತ ಕಿಯಾ ಮೋಟಾರ್ಸ್

ಆಂಧ್ರಪ್ರದೇಶದ ಅನಂತಪುರದಲ್ಲಿರುವ ಕಿಯಾ ಮೋಟಾರ್ಸ್ ಉತ್ಪಾದನಾ ಘಟಕವು ವಾರ್ಷಿಕವಾಗಿ 3 ಲಕ್ಷ ಯನಿಟ್ ಉತ್ಪಾದನಾ ಸಾಮಥ್ಯ ಹೊಂದಿದ್ದು, ಸದ್ಯಕ್ಕೆ ಅರ್ಧದಷ್ಟು ಉತ್ಪಾದನಾ ಸೌಲಭ್ಯವನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಅಗ್ರಸ್ಥಾನದತ್ತ ಕಿಯಾ ಮೋಟಾರ್ಸ್

ಶೀಘ್ರದಲ್ಲೇ ಉತ್ಪಾದನಾ ಸೌಲಭ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿರುವ ಕಿಯಾ ಕಂಪನಿಯು ಸೆಲ್ಟೊಸ್ ಮತ್ತು ಸೊನೆಟ್ ಮಾದರಿಗಳನ್ನು ಅಂತರ್‌ರಾಷ್ಟ್ರೀಯ ಮಟ್ಟದ ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸುತ್ತಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಸದ್ಯ ಭಾರತದಲ್ಲಿ ಸೆಲ್ಟೊಸ್, ಸೊನೆಟ್ ಮತ್ತು ಕಾರ್ನಿವಾಲ್ ಕಾರು ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿರುವ ಕಿಯಾ ಕಂಪನಿಯು ಪ್ರತಿ ಆರು ತಿಂಗಳಿಗೆ ಒಂದು ಹೊಸ ಕಾರು ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಮುಂದಿನ ಕಾರು ಮಾದರಿಯಾಗಿ ಹೊಸ ಎಲೆಕ್ಟ್ರಿಕ್ ಆವೃತ್ತಿಯೊಂದು ರಸ್ತೆಗಿಳಿಯಲಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಅಗ್ರಸ್ಥಾನದತ್ತ ಕಿಯಾ ಮೋಟಾರ್ಸ್

ಇನ್ನು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯು ಅಕ್ಟೋಬರ್ ಅವಧಿಯ ಟಾಪ್ 10 ಕಾರು ಮಾರಾಟ ಪಟ್ಟಿಯಲ್ಲಿ ಒಟ್ಟು 7 ಕಾರು ಮಾದರಿಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಇನ್ನುಳಿದ ಮೂರು ಸ್ಥಾನಗಳಲ್ಲಿ ಎರಡು ಸ್ಥಾನಗಳು ಹ್ಯುಂಡೈ ಕಂಪನಿಯ ಕಾರುಗಳಿಗೆ ಮತ್ತು ಒಂದು ಸ್ಥಾನ ಕಿಯಾ ಮೋಟಾರ್ಸ್ ಪಾಲಾಗಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಅಗ್ರಸ್ಥಾನದತ್ತ ಕಿಯಾ ಮೋಟಾರ್ಸ್

ಟಾಪ್ 10 ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿಯ ಸ್ವಿಫ್ಟ್, ಬಲೆನೊ, ವ್ಯಾಗನ್-ಆರ್, ಆಲ್ಟೋ, ಡಿಜೈರ್, ಇಕೋ, ಬ್ರೆಝಾ ಕಾರು ಮುಂಚೂಣಿಯಲ್ಲಿದ್ದರೆ ಹ್ಯುಂಡೈ ನಿರ್ಮಾಣದ ಕ್ರೆಟಾ, ಗ್ರ್ಯಾಂಡ್ ಐ10 ಸ್ಥಾನಪಡೆದುಕೊಂಡಿವೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಅಗ್ರಸ್ಥಾನದತ್ತ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ನಿರ್ಮಾಣದ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಒಟ್ಟು 11,721 ಯುನಿಟ್ ಮಾರಾಟದೊಂದಿಗೆ ಹತ್ತನೇ ಸ್ಥಾನದಲ್ಲಿದ್ದು, ಬಿಡುಗಡೆಯಾದ ಆರಂಭದಲ್ಲೇ ಹೊಸ ಕಾರಿಗೆ ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿದೆ.

ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲಿ ಅಗ್ರಸ್ಥಾನದತ್ತ ಕಿಯಾ ಮೋಟಾರ್ಸ್

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನದತ್ತ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್ ಹೊಚ್ಚ ಹೊಸ ಸೊನೆಟ್ ಕಾರು ಮಾದರಿಯು ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ಇದುವರೆಗೆ ಸುಮಾರು 70 ಸಾವಿರಕ್ಕೂ ಅಧಿಕ ಯುನಿಟ್‌ಗೆ ಬುಕ್ಕಿಂಗ್ ಪಡೆದುಕೊಂಡಿದೆ.

Most Read Articles

Kannada
English summary
Kia Becomes India’s 6th Largest Car Exporter. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X