ಹೊಸ ವಿನ್ಯಾಸದ ಲೋಗೋ ಹೊಂದಲಿದೆ ಕಿಯಾ ಮೋಟಾರ್ಸ್

ಕಿಯಾ ಕಂಪನಿಯು ಹೊಸ ವಿನ್ಯಾಸದ ಬ್ರಾಂಡ್ ಲೋಗೊವನ್ನು ಹೊಂದಲಿದೆ. 2021ರಿಂದ ಲೋಗೋವನ್ನು ಹೊಸ ವಿನ್ಯಾಸದಲ್ಲಿ ಪರಿಚಯಿಸಲಾಗುವುದು ಎಂದು ಕಿಯಾ ಕಂಪನಿ ಹೇಳಿದೆ.

ಹೊಸ ವಿನ್ಯಾಸದ ಲೋಗೋ ಹೊಂದಲಿದೆ ಕಿಯಾ ಮೋಟಾರ್ಸ್

ಕಿಯಾ ಕಂಪನಿಯ ಹೊಸ ಲೋಗೋ ಕಂಪನಿಯ ಹೊಸತನದ, ಪ್ರಗತಿಯ ಪ್ಯಾರಾ ಮೀಟರ್ ಗಳನ್ನು ಪ್ರದರ್ಶಿಸುತ್ತದೆ. ಲೋಗೋ ಬದಲಿಸುವ ಈ ಯೋಜನೆಗೆ ಕಿಯಾ ಕಂಪನಿಯು ಪ್ಲ್ಯಾನ್ ಎಸ್ ಎಂಬ ಹೆಸರನ್ನಿಟ್ಟಿದೆ. ಎಸ್ ಎಂದರೆ ಶಿಫ್ಟ್ ಎಂಬುದಾಗಿದೆ. ಕಿಯಾ ಕಂಪನಿಯು ಭವಿಷ್ಯದ ಕಾರುಗಳತ್ತ ಗಮನ ಹರಿಸುತ್ತಿದೆ ಎಂಬುದನ್ನು ಪ್ರದರ್ಶಿಸಲು ಬಯಸಿದೆ.

ಹೊಸ ವಿನ್ಯಾಸದ ಲೋಗೋ ಹೊಂದಲಿದೆ ಕಿಯಾ ಮೋಟಾರ್ಸ್

ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಕಿಯಾ ಮೋಟಾರ್ಸ್ ಜಾಗತಿಕ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳ ಸೆಗ್ ಮೆಂಟಿನಲ್ಲಿ ತನ್ನದೇ ಛಾಪು ಮೂಡಿಸಲು ಬಯಸಿದೆ. ಇದಕ್ಕಾಗಿ ಕಂಪನಿಯು ಹಂತ ಹಂತವಾಗಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ವಿನ್ಯಾಸದ ಲೋಗೋ ಹೊಂದಲಿದೆ ಕಿಯಾ ಮೋಟಾರ್ಸ್

ಕಂಪನಿಯು 2025ರ ವೇಳೆಗೆ 11 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಎಲೆಕ್ಟ್ರಿಕ್ ಮೂಲಸೌಕರ್ಯ ಹಾಗೂ ವಿಶ್ವಾದ್ಯಂತ ಎಲೆಕ್ಟ್ರಿಕ್ ಸ್ಥಾವರಗಳನ್ನು ಸ್ಥಾಪಿಸಲು 25 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ.

ಹೊಸ ವಿನ್ಯಾಸದ ಲೋಗೋ ಹೊಂದಲಿದೆ ಕಿಯಾ ಮೋಟಾರ್ಸ್

ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗುವುದು. ಈ ಕಾರುಗಳನ್ನು ಕಿಯಾ ಮೋಟಾರ್ಸ್ ಕಂಪನಿಯು ಹ್ಯುಂಡೈ ಕಂಪನಿಯ ಸಹಯೋಗದೊಂದಿಗೆ ಉತ್ಪಾದಿಸಲಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ವಿನ್ಯಾಸದ ಲೋಗೋ ಹೊಂದಲಿದೆ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಕಂಪನಿಯು 2025ರ ವೇಳೆಗೆ ಪ್ರಮುಖ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಲು ಬಯಸಿದೆ. ಕಿಯಾ ಕಂಪನಿಯು 2019ರ ಕಾರ್ ಶೋದಲ್ಲಿ ಪ್ರದರ್ಶಿಸಲಾಗಿದ್ದ ತನ್ನ ಕಾನ್ಸೆಪ್ಟ್ ಕಾರಿನಲ್ಲಿ ಈ ಹೊಸ ಲೋಗೊವನ್ನು ಬಳಸಿತ್ತು.

ಹೊಸ ವಿನ್ಯಾಸದ ಲೋಗೋ ಹೊಂದಲಿದೆ ಕಿಯಾ ಮೋಟಾರ್ಸ್

ಈ ಲೋಗೋದಲ್ಲಿರುವ ಮೂರು ಅಕ್ಷರಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. ಲೋಗೋದಲ್ಲಿರುವ ಹೊರ ವೃತ್ತಾಕಾರದ ವಿನ್ಯಾಸವನ್ನು ತೆಗೆದುಹಾಕಲಾಗಿದೆ. ಕಿಯಾ ಮೋಟಾರ್ಸ್ ಕಂಪನಿಯು ಇತ್ತೀಚೆಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ವಿನ್ಯಾಸದ ಲೋಗೋ ಹೊಂದಲಿದೆ ಕಿಯಾ ಮೋಟಾರ್ಸ್

ಬಿಡುಗಡೆಯಾದ ಒಂದು ತಿಂಗಳ ಅವಧಿಯಲ್ಲಿ ಈ ಎಸ್‌ಯುವಿಯ 50,000 ಯುನಿಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಕಡಿಮೆ ಅವಧಿಯಲ್ಲಿಯೇ ಸೊನೆಟ್ ಭಾರತದಲ್ಲಿ ಹೆಚ್ಚು ಮಾರಾಟವಾದ ಎಸ್‌ಯುವಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಹೊಸ ವಿನ್ಯಾಸದ ಲೋಗೋ ಹೊಂದಲಿದೆ ಕಿಯಾ ಮೋಟಾರ್ಸ್

ಕಿಯಾ ಸೊನೆಟ್ ಎಸ್‌ಯುವಿಯ ವಿವಿಧ ರೂಪಾಂತರಗಳನ್ನು ಟೆಕ್ ಲೈನ್ ಹಾಗೂ ಜಿಟಿ ಮಾದರಿಗಳಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಟೆಕ್ ಲೈನ್ ಮಾದರಿಯು ಹೆಚ್ ಟಿಇ, ಹೆಚ್ ಟಿಕೆ, ಹೆಚ್ ಟಿಕೆ ಪ್ಲಸ್, ಹೆಚ್ ಟಿಎಸ್, ಹೆಚ್ ಟಿಎಸ್ ಪ್ಲಸ್ ಎಂಬ ​​ಐದು ರೂಪಾಂತರಗಳನ್ನು ಹೊಂದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ವಿನ್ಯಾಸದ ಲೋಗೋ ಹೊಂದಲಿದೆ ಕಿಯಾ ಮೋಟಾರ್ಸ್

ಕಿಯಾ ಸೊನೆಟ್, ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಮಾರಾಟ ಮಾಡುತ್ತಿರುವ ಮೂರನೇ ವಾಹನವಾಗಿದೆ. ಕಿಯಾ ಸೊನೆಟ್ ಎಸ್‌ಯುವಿಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.6.71 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.12.99 ಲಕ್ಷಗಳಾಗಿದೆ.

Most Read Articles

Kannada
English summary
Kia motors introduces new logo to relaunch in 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X