ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಮತ್ತಷ್ಟು ಹೂಡಿಕೆಗೆ ಮುಂದಾದ ಕಿಯಾ ಮೋಟಾರ್ಸ್

ಭಾರತದಲ್ಲಿ 2017ರಿಂದ ಕಾರು ಉತ್ಪಾದನೆಗೆ ಚಾಲನೆ ನೀಡಿರುವ ಕಿಯಾ ಮೋಟಾರ್ಸ್ ಕಂಪನಿಯು ಅತಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟಮಾಡುವ ಮೂಲಕ ಮುಂಚೂಣಿ ಸಾಧಿಸುತ್ತಿದ್ದು, ಶೀಘ್ರದಲ್ಲೇ ಉದ್ಯಮ ವಿಸ್ತರಣೆಗೆ ಮುಂದಾಗಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಮತ್ತಷ್ಟು ಹೂಡಿಕೆಗೆ ಮುಂದಾದ ಕಿಯಾ

ಆಂಧ್ರಪ್ರದೇಶದಲ್ಲಿ ಮೊದಲ ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಕಿಯಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ 2ನೇ ಕಾರು ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುವ ಸುಳಿವು ನೀಡಿತ್ತು. ಆದರೆ ಎರಡನೇ ಕಾರು ಉತ್ಪಾದನಾ ಘಟಕದ ಬದಲಾಗಿ ಸದ್ಯಕ್ಕೆ ಉತ್ಪಾದನಾ ಪ್ರಕ್ರಿಯೆಯನ್ನು ಹೊಂದಿರುವ ಘಟಕವನ್ನೇ ವಿಸ್ತರಣೆ ಮಾಡುವುದಕ್ಕೆ ಮುಂದಾಗಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಮತ್ತಷ್ಟು ಹೂಡಿಕೆಗೆ ಮುಂದಾದ ಕಿಯಾ

ಸದ್ಯ ಕಾರ್ಯನಿರ್ವಹಣೆಯಲ್ಲಿರುವ ಕಾರು ಉತ್ಪಾದನಾ ಘಟಕ ನಿರ್ಮಾಣದ ಮೇಲೆ ಈ ಹಿಂದೆ ಬರೋಬ್ಬರಿ ರೂ.7 ಸಾವಿರ ಕೋಟಿ ಹೂಡಿಕೆ ಮಾಡಿದ್ದ ಕಿಯಾ ಕಂಪನಿಯು ಇದೀಗ ಉತ್ಯಾದನೆಯನ್ನು ಹೆಚ್ಚಿಸುವುದಕ್ಕಾಗಿ ಮತ್ತೊಮ್ಮೆ ಹೂಡಿಕೆ ಮಾಡುತ್ತಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಮತ್ತಷ್ಟು ಹೂಡಿಕೆಗೆ ಮುಂದಾದ ಕಿಯಾ

ಕರೋನಾ ವೈರಸ್ ಹಿನ್ನಲೆಯಲ್ಲಿ ಸದ್ಯಕ್ಕೆ ಎರಡನೇ ಘಟಕ ನಿರ್ಮಾಣ ಯೋಜನೆಯಿಂದ ಹಿಂದೆ ಸರಿದಿರುವ ಕಿಯಾ ಕಂಪನಿಯು ಅನಂತಪುರ ಜಿಲ್ಲೆ ಪೆನುಗೊಂಡ ಬಳಿರುವ ಘಟಕದ ವಿಸ್ತರಣೆಗಾಗಿ ರೂ. 400 ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಸೂಚಿಸಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಮತ್ತಷ್ಟು ಹೂಡಿಕೆಗೆ ಮುಂದಾದ ಕಿಯಾ

ಈ ಕುರಿತಂತೆ ಆಂಧ್ರ ಸರ್ಕಾರದ ಜೊತೆಗೆ ಮಾತುಕತೆ ಕೈಗೊಂಡಿರುವ ಕಿಯಾ ಮೋಟಾರ್ಸ್ ಕಂಪನಿಯು ಹೆಚ್ಚುವರಿ ಭೂಮಿ ಖರೀದಿಗೆ ಮುಂದಾಗಿದ್ದು, ಸ್ಥಳೀಯರಿಗೆ ಮತ್ತಷ್ಟು ಉದ್ಯೋಗ ಅವಕಾಶಗಳನ್ನು ನೀಡುವುದಾಗಿ ಭರವಸೆ ನೀಡಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಮತ್ತಷ್ಟು ಹೂಡಿಕೆಗೆ ಮುಂದಾದ ಕಿಯಾ

ಸದ್ಯ ಕಿಯಾ ಮೋಟಾರ್ಸ್ ಕಾರು ಉತ್ಪಾದನಾ ಘಟಕವು ಬರೋಬ್ಬರಿ 211 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದು, ವಾರ್ಷಿಕವಾಗಿ 3 ಲಕ್ಷ ಕಾರುಗಳ ನಿರ್ಮಾಣ ಸಾಮರ್ಥ್ಯ ಹೊಂದಿದೆ. ಇದೀಗ ಇದೇ ಘಟಕವನ್ನು ವಿಸ್ತರಣೆ ಮಾಡುತ್ತಿರುವ ಕಿಯಾ ಕಂಪನಿಯುರಫ್ತು ಪ್ರಮಾಣವನ್ನು ಹೆಚ್ಚಿಸುವ ಯೋಜನೆಯಲ್ಲಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಮತ್ತಷ್ಟು ಹೂಡಿಕೆಗೆ ಮುಂದಾದ ಕಿಯಾ

ಇನ್ನು ಕಿಯಾ ಕಂಪನಿಯು ಬಿಡುಗಡೆ ಮಾಡಿದ್ದ ಮೊದಲ ಸೆಲ್ಟೊಸ್ ಕಾರು ಇದುವರೆಗೆ 85 ಸಾವಿರ ಯುನಿಟ್ ಮಾರಾಟ ದಾಖಲೆ ಕಂಡಿದ್ದು, ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಮರಾಟವಾದ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾಗಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಮತ್ತಷ್ಟು ಹೂಡಿಕೆಗೆ ಮುಂದಾದ ಕಿಯಾ

ತದನಂತರ ಎರಡನೇ ಕಾರು ಮಾದರಿಯಾಗಿ ಬಿಡುಗಡೆಯಾದ ಕಾರ್ನಿವಾಲ್ ಎಂಪಿವಿ ಕಾರು ಕೂಡಾ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ದುಬಾರಿ ಬೆಲೆ ನಡುವೆಯೂ ಮೂರು ತಿಂಗಳ ಅವಧಿಯಲ್ಲಿ 5 ಸಾವಿರ ಯುನಿಟ್ ಮಾರಾಟವಾಗಿದೆ.

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಮತ್ತಷ್ಟು ಹೂಡಿಕೆಗೆ ಮುಂದಾದ ಕಿಯಾ

ಇದೀಗ ಬಿಡುಗಡೆಗೆ ಸಿದ್ದವಾಗಿರುವ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಕೂಡಾ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಗ್ರಾಹಕರ ಬೇಡಿಕೆಯೆಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಕಾರುಗಳು ರಸ್ತೆಗಿಳಿಯಲಿವೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹೊಸ ಕಾರುಗಳಿಗೆ ಭರ್ಜರಿ ಬೇಡಿಕೆ- ಮತ್ತಷ್ಟು ಹೂಡಿಕೆಗೆ ಮುಂದಾದ ಕಿಯಾ

ಇದಕ್ಕಾಗಿಯೇ ಉತ್ಪಾದನಾ ಪ್ರಮಾಣವನ್ನು ಹೆಚ್ಚಳ ಮಾಡುವ ಸಿದ್ದತೆ ನಡೆಸಿರುವ ಕಿಯಾ ಮೋಟಾರ್ಸ್ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಮುಂದಿನ 2 ವರ್ಷಗಳ ಅವಧಿಯಲ್ಲಿ ವಿವಿಧ ಮಾದರಿಯ 7ಕ್ಕೂ ಹೆಚ್ಚು ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

Most Read Articles

Kannada
English summary
Kia Motors plans to invest 400 crore in Anantapur Andhra Pradesh plant. Read in Kannada.
Story first published: Thursday, May 28, 2020, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X